/newsfirstlive-kannada/media/post_attachments/wp-content/uploads/2025/04/Niranjan-Deshpande1.jpg)
ಕನ್ನಡದ ಬಿಗ್ಬಾಸ್ ಸೀಸನ್ 4ರ ಮಾಜಿ ಸ್ಪರ್ಧಿಯಾಗಿದ್ದ ನಿರಂಜನ್ ದೇಶಪಾಂಡೆ ಸದ್ಯ ಕನ್ನಡದ ಟಾಪ್ ನಿರೂಪಕರಾಗಿ ಮಿಂಚುತ್ತಿದ್ದಾರೆ. ನಟ, ನಿರೂಪಕ ನಿರಂಜನ್ ದೇಶಪಾಂಡೆ ಅವರು ತಮ್ಮ ಮಾತುಗಾರಿಕೆ, ಹಾಸ್ಯದಿಂದಲೇ ಸಖತ್ ಫೇಮಸ್ ಆಗಿರೋರು. ತಮ್ಮ ನಗೆ ಚಟಾಕಿ ಮಾತುಗಳು, ಕಾಮಿಡಿ, ಉತ್ತಮ ನಿರೂಪಣಾ ಶೈಲಿಯಿಂದ ಜನರ ಮನಸ್ಸನ್ನು ಗೆದ್ದುಕೊಂಡಿದ್ದ ನಿರಂಜನ್ ದೇಶಪಾಂಡೆ ಅವರು ಸದ್ಯ ಭರ್ಜರಿ ಬ್ಯಾಚ್ಯುಲರ್ಸ್ಗೆ ಸೀಸನ್ 2ಗೆ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ:ಕೊರಳಲ್ಲಿ ಹಾರ, ಕೈಯಲ್ಲಿ ಕೇಕ್ ಹಿಡಿದ ರಜತ್ ಪತ್ನಿ ಅಕ್ಷಿತಾ.. ಈ ಖುಷಿಗೆ ಕಾರಣವೇನು?
ಆದ್ರೆ, ಇದೀಗ ನಿರೂಪಕ ನಿರಂಜನ್ ದೇಶಪಾಂಡೆ ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ. ಅದರಲ್ಲೂ ತಮ್ಮ ಬಾಲ್ಯದ ಕಹಿ ನೆನಪುಗಳನ್ನು ಹಂಚಿಕೊಂಡು ಭಾವುಕರಾದರು. ತಂದೆ ತಾಯಿ ದೂರವಾದ ಬಗ್ಗೆ ಮತ್ತು 18ನೇ ವಯಸ್ಸಿನಲ್ಲಿ ಮನೆಯಿಂದ ಹೊರಬಂದ ಬಗ್ಗೆ ಎಲ್ಲರ ಮುಂದೆ ಹಂಚಿಕೊಂಡಿದ್ದಾರೆ. ನಾನು ಚಿಕ್ಕವನಿರುವಾಗಲೇ ನಮ್ಮ ತಂದೆ - ತಾಯಿ ದೂರವಾದರು. ನಾನು 18ನೇ ವಯಸ್ಸಿನಲ್ಲಿ ಮನೆ ಬಿಟ್ಟು ಆಚೆ ಬಂದೆ. ಒಬ್ಬೊಬ್ಬರು ಒಂದೊಂದು ಕಡೆ ಇದ್ದಾರೆ. ಸದ್ಯ ಈಗ ನಾನು ನನ್ನ ಹೆಂಡತಿ ಅಷ್ಟೇ ಜೊತೆಯಾಗಿ ಇದ್ದೀವಿ ಎಂದು ಹೇಳಿಕೊಂಡಿದ್ದಾರೆ.
ಹೌದು, ನಟ ನಿರಂಜನ್ ದೇಶಪಾಂಡೆ ಅವರು ತಮ್ಮನ್ನು ತಾವು ನಿರೂಪಣೆಯಲ್ಲಿ ತೊಡಗಿಸಿಕೊಂಡವರು. ಕಲರ್ಸ್ ಕನ್ನಡ, ಸ್ಟಾರ್ ಸುವರ್ಣ, ಖಾಸಗಿ ಕಾರ್ಯಕ್ರಮ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ನಿರೂಪಣೆ ಮಾಡಿದ್ದ ನಿರಂಜನ್ ದೇಶಪಾಂಡೆ ಅವರು ಈಗ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಭರ್ಜರಿ ಬ್ಯಾಚುಲರ್ಸ್ನಲ್ಲಿ ನಿರೂಪಕರಾಗಿದ್ದಾರೆ.
ಈ ವಾರ ಭರ್ಜರಿ ಬ್ಯಾಚುಲರ್ಸ್ 2 ಶೋನಲ್ಲಿ ಫ್ಯಾಮಿಲಿ ರೌಂಡ್ ನಡೆಯುತ್ತಿದೆ. ಹೀಗಾಗಿ ಬ್ಯಾಚುಲರ್ಸ್ ಪೋಷಕರು ಒಬ್ಬೊಬ್ಬರಾಗಿ ವೇದಿಕೆಗೆ ಬಂದಿದ್ದಾರೆ. ಇದೇ ವೇಳೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದಾಗ ಅವರಿಗೆ ತಂದೆಯಿಂದ ಸರ್ಪ್ರೈಸ್ ಕಾಲ್ ಬಂದಿದೆ. ಇದಾದ ಬಳಿಕ ಜೀವ ಮತ್ತು ಜೀವನ ಒಂದು ಸಲ ಮಾತ್ರ ಸಿಗುತ್ತದೆ. ಬೇರೆಯವರ ನಗುವಿನಲ್ಲಿ ನಾನು ನನ್ನ ನಗುವನ್ನು ಕಾಣುತ್ತೇನೆ ಎಂದು ನಿರಂಜನ್ ದೇಶಪಾಂಡೆ ಕಣ್ಣೀರು ಇಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ