ಕ್ರೇಜಿ ಸ್ಟಾರ್ ರವಿಚಂದ್ರನ್ ಮುಂದೆ ಮೈ ಚಳಿ ಬಿಟ್ಟು ಡ್ಯಾನ್ಸ್​ ಮಾಡಿದ ಬ್ಯಾಚುಲರ್ಸ್ ಜೋಡಿ.. ಎಲ್ಲರೂ ಶಾಕ್!

author-image
Veena Gangani
Updated On
ಕ್ರೇಜಿ ಸ್ಟಾರ್ ರವಿಚಂದ್ರನ್ ಮುಂದೆ ಮೈ ಚಳಿ ಬಿಟ್ಟು ಡ್ಯಾನ್ಸ್​ ಮಾಡಿದ ಬ್ಯಾಚುಲರ್ಸ್ ಜೋಡಿ.. ಎಲ್ಲರೂ ಶಾಕ್!
Advertisment
  • ವೀಕ್ಷಕರಿಗೆ ಮನರಂಜನೆ ನೀಡುತ್ತಿದೆ ಭರ್ಜರಿ ಬ್ಯಾಚುಲರ್ಸ್
  • ಸುಕ್ರತಾ ಭರ್ಜರಿ ಡ್ಯಾನ್ಸ್​ ನೋಡಿ ಎಲ್ಲರೂ ಫುಲ್ ಶಾಕ್
  • ಅಗ್ನಿಸಾಕ್ಷಿ ಸೀರಿಯಲ್​ ಮೂಲಕ ಫೇಮಸ್​ ಆಗಿದ್ದ ಸುಕ್ರತಾ

ತುಂಬಾ ವಿಭಿನ್ನವಾಗಿ ಮೂಡಿ ಬರುತ್ತಿದೆ ಈ ಬಾರಿಯ ಭರ್ಜರಿ ಬ್ಯಾಚುಲರ್ಸ್ ಸೀಸನ್ 2. ಈ ಬಾರಿಯ ಭರ್ಜರಿ ಬ್ಯಾಚುಲರ್ಸ್ ಸೀಸನ್ 2ಕ್ಕೆ ಎಂಟ್ರಿ ಕೊಟ್ಟಿರೋ ಒಂದೊಂದು ಜೋಡಿ ಮೋಡಿ ಮಾಡುತ್ತಿದೆ. ಡ್ಯಾನ್ಸ್​, ಡೈಲಾಗ್​, ಹಾಡು ಹೀಗೆ ಸಾಕಷ್ಟು ರೀತಿಯಲ್ಲಿ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ.

ಇದನ್ನೂ ಓದಿ: ಕೇವಲ ಕಂಪ್ಯೂಟರ್​ ಸೈನ್ಸ್​ ಮಾತ್ರವಲ್ಲ.. ಇಂಜಿನಿಯರಿಂಗ್​​ನಲ್ಲಿ ಇವೆ ಸಾಕಷ್ಟು ಸ್ಪೆಷಲ್​ ಕೋರ್ಸ್​ಗಳು

publive-image

ಈ ವಾರ ಬ್ಯಾಚುಲರ್ಸ್​ಗಳಿಗೆ ಹೊಸ ಚಾಲೆಂಜ್​ ಎದುರಾಗಿದೆ. ಅದುವೇ ಲವ್​ ಕೆಮಿಸ್ಟ್ರಿ ರೌಂಡ್. ಬ್ಯಾಚುಲರ್ಸ್ ಮತ್ತು ಏಂಜಲ್ಸ್ ಒಬ್ಬರನ್ನೊಬ್ಬರು ಎಷ್ಟು ಅರ್ಥ ಮಾಡ್ಕೊಂಡಿದ್ದಾರೆ ಅಂತ ಈ ರೌಂಡ್ ಮೂಲಕ ಗೊತ್ತಾಗಲಿದೆ. ಹೀಗೆ ಜೀ ಕನ್ನಡ ರಿಲೀಸ್​ ಮಾಡಿರೋ ಪ್ರೋಮೋದಲ್ಲಿ ಅಗ್ನಿಸಾಕ್ಷಿ, ಲಕ್ಷಣ, ಭಾಗ್ಯಲಕ್ಷ್ಮೀ ಸೀರಿಯಲ್​ ಮೂಲಕ ಫೇಮಸ್​ ಆಗಿದ್ದ ನಟಿ ಸುಕೃತಾ ನಾಗ್ ಹಾಗೂ ಪ್ರವೀಣ್​ ಜೋಡಿ ಭರ್ಜರಿ ಡ್ಯಾನ್ಸ್​ ಮಾಡಿದ್ದಾರೆ.

ಹೌದು, ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಮಲ್ಲ ಸಿನಿಮಾದ ಸೂಪರ್ ಹಿಟ್​ ಯಮ್ಮೋ ಯಮ್ಮೋ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಅದರಲ್ಲೂ ಸುಕೃತಾ ನಾಗ್ ಹಾಗೂ ಪ್ರವೀಣ್​ ಡ್ಯಾನ್ಸ್​ ನೋಡಿ ಎಲ್ಲರೂ ಶಾಕ್​ ಆಗಿದ್ದಾರೆ. ವೇದಿಕೆಗೆ ಎಂಟ್ರಿ ಕೊಟ್ಟ ನಟಿ ರಚಿತಾ ರಾಮ್ ಸೇಮ್​ ಟು ಸೇಮ್​ ರವಿ ಸರ್​ ಮಾಡಿದ ಹಾಗೇ ಮಾಡಿದ್ದೀರಿ ಅಂತ ಹಾಡಿ ಹೊಗಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment