ರಮೋಲಗೆ ಸರ್​ಪ್ರೈಸ್​ ಕೊಡೋಕೆ ಹೋಗಿ ತಗ್ಲಾಕೊಂಡ ರಕ್ಷಕ್ ಬುಲೆಟ್; ಆಗಿದ್ದೇನು..?​

author-image
Veena Gangani
Updated On
ಲವರ್​ ಬಾಯ್ ಆಗಿ ಬದಲಾದ ರಕ್ಷಕ್ ಬುಲೆಟ್​; ರಮೋಲ ಜೊತೆ ಪ್ರೀತಿಯಲ್ಲಿ ಬಿದ್ದೇ ಬಿಟ್ನಾ..?
Advertisment
  • ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ಜೋಡಿ ಮೋಡಿ
  • ರಕ್ಷಕ್ ಬುಲೆಟ್​ಗೆ ಜೋಡಿಯಾಗಿದ್ದಾರೆ ನಟಿ ರಮೋಲ
  • ವಂಡರ್ಲಾಗೆ ಕರೆದುಕೊಂಡು ಹೋಗಿ ಏನ್ಮಾಡಿದ್ರು?

ದಿನೇ ದಿನೇ ರಕ್ಷಕ್​ ಬುಲೆಟ್​ ಸಖತ್​ ಆಗಿ ಪರ್ಫಾರ್ಮೆನ್ಸ್ ನೀಡುತ್ತಾರೆ. ಬಿಗ್​ಬಾಸ್​ ಸೀಸನ್ 10 ಮೂಲಕ ಫೇಮಸ್​ ಆಗಿದ್ದ ರಕ್ಷಕ್​ ಬುಲೆಟ್​ ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ಮಿಂಚುತ್ತಿದ್ದಾರೆ. ಅದರಲ್ಲೂ ರಕ್ಷಕ್ ಬುಲೆಟ್​ಗೆ ರಮೋಲ ಜೋಡಿಯಾಗಿ ಸಿಕ್ಕಿದ್ದು ಒಳ್ಳೆ ಮಜಾ ಕೊಡುವಂತಿದೆ.

ಇದನ್ನೂ ಓದಿ: ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ರಚಿತಾ ರಾಮ್​ ಗರಂ.. ಅಷ್ಟಕ್ಕೂ ಹುಲಿ ಕಾರ್ತಿಕ್ ಮಾಡಿದ್ದೇನು?

publive-image

ಹೌದು, ರಮೋಲ ಹಾಗೂ ರಕ್ಷಕ್​ ಬುಲೆಟ್​​ ಜೋಡಿ ಭರ್ಜರಿ ಬ್ಯಾಚುಲರ್ಸ್​ನಲ್ಲಿ ಮೋಡಿ ಮಾಡುತ್ತಿದ್ದಾರೆ. ಕಳೆದ ಸಂಚಿಕೆಯಲ್ಲಿ ಭರ್ಜರಿ ಬ್ಯಾಚುಲರ್ಸ್​ನಲ್ಲಿ ಡ್ರೀಮ್ ಗರ್ಲ್ ರೌಂಡ್ ನಡೆದಿತ್ತು. ಆಗ ಬ್ಯಾಚುಲರ್ಸ್ ತಮ್ಮ ತಮ್ಮ ಡ್ರೀಮ್​ ಗರ್ಲ್​ ಹೇಗೆ ಇರಬೇಕು ಅಂದುಕೊಂಡಿದ್ದರೋ ಅದರಂತೆ ಏಂಜಲ್​ಗಳನ್ನು ರೆಡಿ ಮಾಡಿಕೊಂಡು ಬಂದಿದ್ದರು. ಅದರಂತೆ ತಮ್ಮ ತಮ್ಮ ಏಂಜಲ್ಸ್​ಗಳಿಗೆ ಸರ್​ಪ್ರೈಸ್​ ನೀಡಿದ್ದರು.

publive-image

ಇನ್ನೂ, ರಕ್ಷಕ್​ ಬುಲೆಟ್​ ಅಂತು ತಮ್ಮ ಮೆಂಟರ್​ ರಮೋಲಗೆ ಸಖತ್​ ಸರ್​ಪ್ರೈಸ್​ ಕೊಟ್ಟಿದ್ದಾರೆ. ವಂಡರ್ಲಾಗೆ ಕರೆದುಕೊಂಡು ಹೋಗಿ ಗೇಮ್ಸ್​ಗಳನ್ನು ಆಡಿದ್ದಾರೆ. ಅಷ್ಟೇ ಅಲ್ಲದೇ ರಮೋಲಗೆ ಸರ್​ಪ್ರೈಸ್​ ಕೋಡೋದಕ್ಕೆ ಹೋಗಿ ತಾವೇ ತಗ್ಲಾಕೊಂಡಿದ್ದಾರೆ. ಹೀಗೆ ವಂಡರ್ಲಾಗೆ ಹೋಗಿದ ಈ ಜೋಡಿ ಅಲ್ಲಿ ನಾನಾ ಗೇಮ್ಸ್​ಗಳನ್ನು ಆಡಿದ್ದಾರೆ.

publive-image

ಅಷ್ಟೇ ಅಲ್ಲದೇ ರೋಲರ್ ಕೋಸ್ಟರ್ ಮೇಲಿಂದ ಇಳಿಯುವಾಗ ಇಳಿಸಿ, ಇಳಿಸಿ, ಜೀವ ಬಾಯಿಗೆ ಬಂದಿದೆ ಅಂತೆಲ್ಲಾ ಗೋಗರೆದಿದ್ದಾರೆ ರಕ್ಷಕ್​ ಬುಲೆಟ್​. ಇದೇ ವಿಡಿಯೋವನ್ನು ವೇದಿಕೆ ಮೇಲೆ ಎಲ್ಲರ ಮುಂದೆ ತೋರಿಸಿದ್ದಾರೆ. ರಕ್ಷಕ್​ ವಿಟಿ ನೋಡಿ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment