ಎಲ್ಲರ ಮುಂದೆ ಶಾಕಿಂಗ್​ ವಿಚಾರ ಬಿಚ್ಚಿಟ್ಟ ಕನ್ನಡತಿ ಖ್ಯಾತಿಯ ರಮೋಲ; ದಿನದ ಖರ್ಚೆಷ್ಟು ಗೊತ್ತಾ?

author-image
Veena Gangani
Updated On
ಎಲ್ಲರ ಮುಂದೆ ಶಾಕಿಂಗ್​ ವಿಚಾರ ಬಿಚ್ಚಿಟ್ಟ ಕನ್ನಡತಿ ಖ್ಯಾತಿಯ ರಮೋಲ; ದಿನದ ಖರ್ಚೆಷ್ಟು ಗೊತ್ತಾ?
Advertisment
  • ಸೀತಾರಾಮ ಧಾರಾವಾಹಿಯಲ್ಲಿ ಚಾಂದಿನಿ ಪಾತ್ರದಲ್ಲಿ ನಟಿ ಅಭಿನಯ
  • ಕನ್ನಡತಿ ಸೀರಿಯಲ್​ ಮೂಲಕ ಖ್ಯಾತಿ ಪಡೆದುಕೊಂಡಿದ್ದ ನಟಿ ಇವರು
  • ನಟಿ ರಮೋಲ ಅವರ ಒಂದು ದಿನದ ಖರ್ಚು ಕೇಳಿದ್ರೆ ಶಾಕ್ ಆಗ್ತೀರಾ!

ಕನ್ನಡ ಕಿರುತೆರೆ ಕನ್ನಡತಿ ಸೀರಿಯಲ್​ ಮೂಲಕ ತನ್ನದೇ ಆದ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ ನಟಿ ರಮೋಲ. ಕನ್ನಡತಿ ಸೀರಿಯಲ್​ನಲ್ಲಿ ನೆಗೆಟಿವ್​ ರೋಲ್​ ಸಾನಿಯಾ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು ನಟಿ ರಮೋಲ.

ಇದನ್ನೂ ಓದಿ:ನಟ ಸುಶಾಂತ್ ಸಿಂಗ್‌ ಸಾವಿಗೆ ಕಾರಣ ಹೇಳಿದ ಸಿಬಿಐ! ಕಾಣದ ಕೈಗಳ ಕೈವಾಡಕ್ಕೆ ಸಾಕ್ಷಿಯಿಲ್ಲ ಎಂದ ತನಿಖಾ ಸಂಸ್ಥೆ!

publive-image

ಸದ್ಯ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ ಸೀಸನ್ 2ಗೆ ನಟಿ ರಮೋಲ ಎಂಟ್ರಿ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಹುಡುಗರಿಗಿಂತ ಹುಡುಗಿಯರು ಜಾಸ್ತಿ ಖರ್ಚು ಮಾಡುತ್ತಾರೆ. ಆದ್ರೆ, ಸೀರಿಯಲ್​ ನಟಿಯರಂತೂ ಭಿನ್ನ ವಿಭಿನ್ನವಾಗಿ ಕಾಣಿಸಿಕೊಳ್ಳದಕ್ಕೆ, ಚೆಂದ ಚೆಂದವಾದ ಬಟ್ಟೆಗಳನ್ನು ತೆಗೆದುಕೊಳ್ಳಲು ಹೀಗೆ ಸಾಕಷ್ಟು ವಸ್ತುಗಳನ್ನು ಖರೀದಿ ಮಾಡಲು ಖರ್ಚು ಮಾಡಲೇಬೇಕಾಗುತ್ತದೆ.

publive-image

ಆದ್ರೆ, ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋನಲ್ಲಿ ನಟಿ ರಮೋಲ ಅವರು ಒಂದು ದಿನಕ್ಕೆ ಖರ್ಚು ಮಾಡುವ ಹಣ ಕೇಳಿ ಎಲ್ಲರೂ ಫುಲ್ ಶಾಕ್ ಆಗಿದ್ದಾರೆ. ಹೀಗೆ ಭರ್ಜರಿ ಬ್ಯಾಚುಲರ್ಸ್​ನಲ್ಲಿ ನಿರೂಪಕ ನಿರಂಜನ್ ದೇಶಪಾಂಡೆ ಅವರು ಒಂದು ದಿನಕ್ಕೆ ನಮ್ಮ ಬ್ಯಾಚುಲರ್ಸ್ ಹುಡುಗಿಯರು ಎಷ್ಟೇಲ್ಲಾ ಖರ್ಚು ಮಾಡುತ್ತಾರೆ ಅಂತ ಪ್ರಶ್ನೆ ಮಾಡಿದ್ದಾರೆ.

ಆಗ ಮಹಾನಟಿ ಅಮೃತಾ ಅವರು ದಿನಕ್ಕೆ ನಾನು 3 ಸಾವಿರ ರೂಪಾಯಿ ಖರ್ಚು ಮಾಡುತ್ತೇನೆ ಎಂದಿದ್ದಾರೆ. ಇದಾದ ಬಳಿಕ ಬಿಗ್​ಬಾಸ್​ ಖ್ಯಾತಿಯ ಪವಿ ಪೂವಪ್ಪ ಅವರು, 1 ಸಾವಿರದ 500 ರೂ ಖರ್ಚು ಆಗುತ್ತೆ ಎಂದರು. ಇದಾದ ಮೇಲೆ ಮಾತಾಡಿದ ರಮೋಲ ದಿನಕ್ಕೆ 10 ಸಾವಿರ ರೂಪಾಯಿ ಖರ್ಚು ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಕೇಳಿದ ಎಲ್ಲರೂ ಫುಲ್ ಶಾಕ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment