/newsfirstlive-kannada/media/post_attachments/wp-content/uploads/2025/04/sukrutha-nag3.jpg)
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ವೀಕ್ಷಕರಿಗೆ ಮನರಂಜನೆ ನೀಡುತ್ತಿದೆ. ಇದೇ ಶೋನಲ್ಲಿ 10 ಮಂದಿ ಬ್ಯಾಚುಲರ್ಸ್ ಗಳಿಗೆ 10 ಸುಂದರಿಯರು ಮೆಂಟರ್ಸ್ ಆಗಿದ್ದಾರೆ. ವಾರದಿಂದ ವಾರಕ್ಕೆ ಬ್ಯಾಚುಲರ್ಸ್ಗಳು ಚೇಂಚ್ ಆಗ್ತಿದ್ದಾರೆ.
ಇದನ್ನೂ ಓದಿ:ಸ್ನೇಹಿತರೇ ಸೇರಿ ಯುವತಿಗೆ ಮಾಡಿಸಿದ್ರು ಡೆಲಿವರಿ.. ಬಾಳಿ ಬದುಕಬೇಕಾಗಿದ್ದ ಶಿಶು ಕಸದ ಬುಟ್ಟಿಗೆ..
ಕಳೆದ ವಾರ ಬ್ಯಾಚುಲರ್ಸ್ಗಳಿಗೆ ಲವ್ ಕೆಮಿಸ್ಟ್ರಿ ರೌಂಡ್ ಇತ್ತು. ಆದ್ರೆ ಈ ವಾರ ಏಂಜಲ್ಸ್ಗಳಿಗೆ ಹೊಸ ಚಾಲೆಂಜ್ ಎದುರಾಗಿದೆ. ಏಂಜಲ್‌ಗಳು ಕೊಟ್ಟ ಭಾವನಾತ್ಮಕ ಸರ್ಪ್ರೈಸ್ಗೆ ಬ್ಯಾಚುಲರ್ಸ್ ಭರ್ಜರಿಯಾಗಿ ಮನಸೋತ್ತಿದ್ದಾರೆ.
ಅದರಲ್ಲೂ ರಿಲೀಸ್ ಆದ ಪ್ರೋಮೋದಲ್ಲಿ ನಟಿ ಸುಕೃತಾ ನಾಗ್ ಪ್ರವೀಣ್ ಊಹಿಸಲಾಗದಂತಹ ಸರ್ಪ್ರೈಸ್ವೊಂದನ್ನು ಕೊಟ್ಟಿದ್ದಾರೆ. ಪ್ರವೀಣ್ ಅವರ ತಾಯಿಯನ್ನು ಊರಿಂದ ವಿಮಾನದಲ್ಲಿ ಕರೆದುಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲದೇ ಅವರಿಗೆ ಇಷ್ಟವಾಗೋ ಕೆಲಸ ಮಾಡಿದ್ದಾರೆ.
ಇದಾದ ಬಳಿಕ ಪ್ರವೀಣ್ ಇದ್ದ ಜಾಗಕ್ಕೆ ಕರೆದುಕೊಂಡು ಬಂದು ಸರ್ಪ್ರೈಸ್ ಕೊಟ್ಟಿದ್ದಾರೆ. ಅಮ್ಮನನ್ನು ನೋಡಿದ ಕೂಡಲೇ ಪ್ರವೀಣ್ ಭಾವುಕರಾದರು. ನಂತರ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ನಟಿ ರಚಿತಾ ರಾಮ್ ವೇದಿಕೆ ಬಂದು ಡ್ಯಾನ್ಸ್ ಮಾಡಿ ಖುಷಿ ಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ