newsfirstkannada.com

ಭವಾನಿ ಅಜ್ಞಾತವಾಸಿ.. ಇವರ ಕಾರು ಡ್ರೈವರ್​ಗೂ ಶುರುವಾಗಿದೆ ಢವಢವ.. ಏನಿದು ಪ್ರಕರಣ..?

Share :

Published June 1, 2024 at 6:31am

    ಮಗನ ಬಳಿಕ ಅಮ್ಮ.. ಎಸ್​ಐಟಿ ಜೊತೆ ಕಣ್ಣಾಮುಚ್ಚಾಲೆ..!

    ಜಾಮೀನು ಅರ್ಜಿ ವಜಾ ಬೆನ್ನಲ್ಲೇ ಭವಾನಿ ರೇವಣ್ಣ ನಾಪತ್ತೆ​

    ಮೈಸೂರಿನಲ್ಲಿರೋ ಭವಾನಿ ರೇವಣ್ಣ ತವರು ಮನೆಗೆ ಬೀಗ!

ಸಂತ್ರಸ್ತ ಮಹಿಳೆಯ ಕಿಡ್ನಾಪ್‌ ಕೇಸ್​​​ನಲ್ಲಿ ನಿರೀಕ್ಷಣಾ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ಭವಾನಿ ರೇವಣ್ಣಗೆ ಕೋರ್ಟ್​ ಬಿಗ್ ಶಾಕ್ ನೀಡಿದೆ. ಭವಾನಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಪುತ್ರ ಪ್ರಜ್ವಲ್ ರೇವಣ್ಣ ಹಿಂದೆಯೇ ಇದೀಗ ತಾಯಿ ಭವಾನಿ ರೇವಣ್ಣಗೂ ಬಂಧನದ ಭೀತಿ ಎದುರಾಗಿದೆ.

ಇದನ್ನೂ ಓದಿ:ಗುದದ್ವಾರದಲ್ಲಿ ಬರೋಬ್ಬರಿ ಒಂದು ಕೆಜಿ ಚಿನ್ನ ಇಟ್ಕೊಂಡು ವಿಮಾನ ಹತ್ತಿದ್ದ ಗಗನ ಸಖಿ ಅರೆಸ್ಟ್..!

ಅಶ್ಲೀಲ ವಿಡಿಯೋದಲ್ಲಿನ ಸಂತ್ರಸ್ತೆಯ ಕಿಡ್ನ್ಯಾಪ್​ ಕೇಸ್​ನಲ್ಲಿ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಪತ್ನಿಗೆ ಬಂಧನ ಭೀತಿ ಶುರುವಾಗಿದೆ. ನಿರೀಕ್ಷಣಾ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ಭವಾನಿ ರೇವಣ್ಣಗೆ ಕೋರ್ಟ್​ ಆಘಾತ ನೀಡಿತ್ತು. ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಮಾಜಿ ಸಚಿವರ ಪತ್ನಿ ಭವಾನಿ ರೇವಣ್ಣ, ಎಸ್​ಐಟಿಯ ಕಣ್ಣು ತಪ್ಪಿಸಿ ಸದ್ಯ ಅಜ್ಞಾತವಾಸಿಯಾಗಿದ್ದಾರೆ.
ಸಂತ್ರಸ್ತೆಯ ಕಿಡ್ನಾಪ್ ಪ್ರಕರಣದಲ್ಲಿ ಒಳಸಂಚು ರೂಪಿಸಿದ್ದ ಆರೋಪ ಭವಾನಿ ರೇವಣ್ಣ ಮೇಲಿದೆ. ಇನ್ನು ಮೇ 8ರಿಂದ ಭವಾನಿ ರೇವಣ್ಣ ನಾಪತ್ತೆಯಾಗಿದ್ದಾರೆ. ಈಗಾಗಲೇ ಭವಾನಿಗೆ ನೋಟಿಸ್ ನೀಡಿರುವ ಎಸ್ಐಟಿ, ಇಂದು ವಿಚಾರಣೆಗೆ ಸಹಕರಿಸುವಂತೆ ನೋಟಿಸ್‌ ಜಾರಿಗೊಳಿಸಿದೆ.

ಇದನ್ನೂ ಓದಿ:ಫಾಫ್, ಮ್ಯಾಕ್ಸಿ ಸೇರಿ ನಾಲ್ವರನ್ನು RCB ಕೈಬಿಡಬೇಕು -ಟೀಂ ಇಂಡಿಯಾದ ಮಾಜಿ ಸ್ಟಾರ್​

ನೋಟಿಸ್​ನಲ್ಲಿ ಏನಿದೆ?

  • ಪ್ರಜ್ವಲ್ ರೇವಣ್ಣ ತಾಯಿ ಭವಾನಿಗೆ ಎಸ್‌ಐಟಿ ನೋಟಿಸ್
  • ಜೂನ್ 1 ರಂದು ಹೊಳೆನರಸೀಪುರದ ಮನೆಯಲ್ಲಿ ತನಿಖೆ
  • ವಿಚಾರಣೆಗೆ ಹಾಜರಿರುವಂತೆ ಭವಾನಿ ರೇವಣ್ಣಗೆ ತಿಳಿಸಿದೆ
  • ಈ ಹಿಂದೆಯೂ ನೀಡಿದ್ದ ನೋಟಿಸ್‌ಗೆ ನೀವು ಉತ್ತರಿಸಿಲ್ಲ
  • ಈ ಕೇಸ್​ನಲ್ಲಿ ನಿಮ್ಮನ್ನ ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ
  • ಬೆಳಗ್ಗೆ 10 ರಿಂದ ಸಂಜೆ 5 ರ ಒಳಗೆ ವಿಚಾರಣೆಗೆ ಬರುತ್ತೇವೆ
  • ಆ ಸಂದರ್ಭದಲ್ಲಿ ನೀವು ಮನೆಯಲ್ಲಿ ಖುದ್ದು ಹಾಜರಿರಬೇಕು

ಬಂಧನ ಭೀತಿಯಲ್ಲಿರುವ ಭವಾನಿ ರೇವಣ್ಣ ಎಲ್ಲಿದ್ದಾರೆ ಅನ್ನೋದು ಗೊತ್ತಿಲ್ಲ.. ಬಂಧನದ ಭೀತಿ ಎದುರಿಸುತ್ತಿರುವ ಭವಾನಿ ರೇವಣ್ಣ ಕೂಡ ನಾಪತ್ತೆಯಾಗಿದ್ದು ಅವರು ತಮ್ಮ ತವರು ಮನೆಯಲ್ಲಿರಬಹುದು ಎಂದು ಹೇಳಲಾಗಿತ್ತು. ಆದ್ರೆ ಮೈಸೂರಿನ ಸಾಲಿಗ್ರಾಮದಲ್ಲಿರುವ ಭವಾನಿ ರೇವಣ್ಣ ಅವರ ತವರು ಮನೆಗೂ ಕೂಡ ಬೀಗ ಜಡಿಯಲಾಗಿದೆ.. ಬೃಹತ್ ಬಂಗಲೆಯಲ್ಲಿ ಮನೆಯ ಕುಟುಂಬದ ಸದಸ್ಯರು ಯಾರೂ ಇಲ್ಲ. ಈ ಮೂಲಕ ಅಲ್ಲಿಯೂ ಭವಾನಿ ರೇವಣ್ಣ ಇಲ್ಲ ಎಂಬುದು ಸ್ಪಷ್ಟವಾಗಿದೆ.

ಭವಾನಿ ಕಾರ್ ಡ್ರೈವರ್ ವಶಕ್ಕೆ ಪಡೆಯೋದಕ್ಕೂ SIT ಪ್ಲಾನ್
ಸಂತ್ರಸ್ತೆಯ ಕಿಡ್ನ್ಯಾಪ್​ ಕೇಸ್​ನಲ್ಲಿ ಬಂಧನ ಭೀತಿಯಿಂದ ಅಜ್ಞಾತವಾಸಿ ಆಗಿರುವ ಭವಾನಿಗಾಗಿ ಎಸ್​ಐಟಿ ತೀವ್ರ ಹುಡುಕಾಟ ನಡೆಸುತ್ತಿದೆ. ಇನ್ನು ಭವಾನಿ ರೇವಣ್ಣ ಕಾರ್ ಡ್ರೈವರ್ ಅಜಿತ್​ನನ್ನ ಕೂಡ ವಶಕ್ಕೆ ಪಡೆಯಲು SIT ಮುಂದಾಗಿದೆ. ನಾಲ್ಕೈದು ದಿನಗಳ ಹಿಂದೆ ಭವಾನಿ ಕಾರ್ ಚಾಲಕ ಅಜಿತ್ ಚಿಕ್ಕಮಗಳೂರು ನಗರದ ಕಲ್ಯಾಣ ನಗರದಲ್ಲಿರೋ ತನ್ನ ಅತ್ತೆ ಮನೆಗೆ ಬಂದಿದ್ದ ಎಂಬ ಮಾಹಿತಿ ಎಸ್​ಐಟಿಗೆ ಲಭ್ಯವಾಗಿದೆ. ಈ ಮಾಹಿತಿ ಆಧಾರದ ಮೇಲೆ ಅಜಿತ್​ನನ್ನು ವಶಕ್ಕೆ ಪಡೆದು, ಆತನಿಂದ ಮಾಹಿತಿಗಳನ್ನ ಕಲೆ ಹಾಕಲು ಎಸ್​ಐಟಿ ಬಲೆ ಬೀಸಿದೆ.

ಇದನ್ನೂ ಓದಿ:ಪಾಪಿ ಗಂಡ.. ಹೆಂಡತಿಯ ತಲೆಗೆ ಸ್ಕ್ರೂಡ್ರೈವರ್​ನಿಂದ 20 ಬಾರಿ ಚುಚ್ಚಿಚುಚ್ಚಿ ಸಾಯಿಸಿದ

ಒಟ್ಟಾರೆ.. ಜಾಮೀನು ಅರ್ಜಿ ವಜಾ ಬೆನ್ನಲ್ಲೇ ಬಂಧನ ಭೀತಿಯಿಂದ ಭವಾನಿ ರೇವಣ್ಣ, ಅಜ್ಞಾತವಾಸಿಯಾಗಿದ್ದಾರೆ. ಅಷ್ಟೇ ಅಲ್ಲ ಹೈಕೋರ್ಟ್​ ಮೆಟ್ಟಿಲೇರಿ ನಿರೀಕ್ಷಣಾ ಜಾಮೀನು ಪಡೆದು.. ಬಳಿಕ ಎಸ್​ಐಟಿ ಮುಂದೆ ಪ್ರತ್ಯಕ್ಷರಾಗಲು ಪ್ಲಾನ್​ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭವಾನಿ ಅಜ್ಞಾತವಾಸಿ.. ಇವರ ಕಾರು ಡ್ರೈವರ್​ಗೂ ಶುರುವಾಗಿದೆ ಢವಢವ.. ಏನಿದು ಪ್ರಕರಣ..?

https://newsfirstlive.com/wp-content/uploads/2024/05/bhavani-revanna-1.jpg

Load More