Breaking: ಕಿಡ್ನ್ಯಾಪ್ ಕೇಸ್​ನಲ್ಲಿ ಕಣ್ತಪ್ಪಿಸಿಕೊಂಡಿದ್ದ ಭವಾನಿ ರೇವಣ್ಣಗೆ ಬಿಗ್​ ರಿಲೀಫ್!

author-image
AS Harshith
Updated On
ಭವಾನಿ ಅಜ್ಞಾತವಾಸಿ.. ಇವರ ಕಾರು ಡ್ರೈವರ್​ಗೂ ಶುರುವಾಗಿದೆ ಢವಢವ.. ಏನಿದು ಪ್ರಕರಣ..?
Advertisment
  • ಮಹಿಳೆಯ ಕಿಡ್ನ್ಯಾಪ್ ಪ್ರಕರಣದಲ್ಲಿ ತಗಲಾಕಿಕೊಂಡಿದ್ದ ಭವಾನಿ ರೇವಣ್ಣ
  • SIT ತನಿಖೆಗೆ ಹಾಜರಾಗದಗೆ ಕಣ್ತಪ್ಪಿಸಿಕೊಂಡಿದ್ದ ಭವಾನಿ ರೇವಣ್ಣ
  • ಹೈಕೋರ್ಟ್​ ಏಕಸದಸ್ಯ ಪೀಠದಿಂದ ಜಾಮೀನು ಮಂಜೂರು

ಬೆಂಗಳೂರು: ಹಾಸನ ಮಹಿಳೆಯ ಕಿಡ್ನ್ಯಾಪ್ ಕೇಸ್​ನಲ್ಲಿ ಭವಾನಿ ರೇವಣ್ಣ ಕಣ್ತಪ್ಪಿಸಿಕೊಂಡಿದ್ದರು. ಆದರೀಗ ಈ ಪ್ರಕರಣದ ಸಂಬಂಧ ಅವರಿಗೆ ಬಿಗ್​ ರಿಲೀಫ್ ಸಿಕ್ಕಿದೆ. ಮಧ್ಯಂತರ ಜಾಮೀನು ಮಂಜೂರಾಗಿದೆ.

ಹೈಕೋರ್ಟ್​ ಏಕಸದಸ್ಯ ಪೀಠದಿಂದ ಭವಾನಿ ರೇವಣ್ಣ ಅವರಿಗೆ ಜಾಮೀನು ಸಿಕ್ಕಿದೆ. ಹೀಗಾಗಿ 1 ಗಂಟೆ ವೇಳೆಗೆ SIT ಮುಂದೆ ಹಾಜರಾಗಲು ಸೂಚನೆ ನೀಡಲಾಗಿದೆ. ಜೊತೆಗೆ ತನಿಖೆಗೆ ಸಹಕರಿಸುವಂತೆ ಕೋರ್ಟ್​ನಿಂದ ಸೂಚನೆ ಹೊರಡಿಸಲಾಗಿದೆ.

ಹಾಸನ ಮಹಿಳೆಯ ಕಿಡ್ನಾಪ್​ ಕೇಸ್​ಗೆ ಸಂಬಂಧಿಸಿ ಭವಾನಿ ರೇವಣ್ಣ ಅವರನ್ನು ಎಸ್​ಐಟಿ ತನಿಖೆಗೆ ಕರೆದಿತ್ತು. ಆದರೆ ಬಂಧನದ ಭೀತಿಯಲ್ಲಿದ್ದ ಭವಾನಿಯವರು ತನಿಖೆ ಸಹಕರಿಸಿದೆ ಕಣ್ಮರೆಯಾಗಿದ್ದರು. ನಂತರ ಎಸ್​ಐಟಿ ತಂಡ ಅವರನ್ನು ಬಂಧಿಸಲು ಮುಂದಾಗಿತ್ತು. ಆದರೆ ಭವಾನಿಯವರು ಎಲ್ಲೂ ಸಿಕ್ಕಿರಲಿಲ್ಲ. ಇದೀಗ ಹೈಕೋರ್ಟ್​ ಏಕಸದಸ್ಯ ಪೀಠದಿಂದ ಭವಾನಿ ರೇವಣ್ಣ ಅವರಿಗೆ ಜಾಮೀನು ಸಿಕ್ಕಿದೆ. ತನಿಖೆಗೆ ಸಹಕರಿಸುವಂತೆ ಕೋರ್ಟ್​ ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment