newsfirstkannada.com

5 ಗಂಟೆಗಳ ಕಾಲ ಭವಾನಿ ರೇವಣ್ಣ ವಿಚಾರಣೆ.. ತನಿಖೆ ವೇಳೆ ಏನು ಹೇಳಿದ್ರು ಗೊತ್ತಾ?

Share :

Published June 8, 2024 at 7:27am

    ಬಂಧನದ ಭೀತಿಯಿಂದ ಪಾರಾಗಿ ಎಸ್​​ಐಟಿ ಮುಂದೆ ಹಾಜರು

    ಕೋರ್ಟ್​​​ನ ನಿರ್ದೇಶನದಂತೆ ನಡೀತು ಭವಾನಿ ವಿಚಾರಣೆ

    SIT ಮುಂದೆ ಭವಾನಿ ರೇವಣ್ಣ ನೀಡಿರುವ ಹೇಳಿಕೆಗಳೇನು?

ತಿಂಗಳಿನಿಂದ ನಾಪತ್ತೆ ಆಗಿದ್ದ ಭವಾನಿ ನಿನ್ನೆ ಪ್ರತ್ಯಕ್ಷರಾದ್ರು. ಕೆ.ಆರ್​.ನಗರ ಸಂತ್ರಸ್ತೆ ಕಿಡ್ನಾಪ್​​ ಕೇಸ್​​ ಹೊತ್ತು ಊರೂರು ಸುತ್ತಿದ ಭವಾನಿಗೆ ಕೋರ್ಟ್​​ ಬಂಧನ ಭೀತಿ ದೂರ ಮಾಡಿತ್ತು. ಈ ಬೆನ್ನಲ್ಲೇ ಎಸ್​​ಐಟಿ ಮುಂದೆ ಹಾಜರಾದ ಭವಾನಿ ವಿಚಾರಣೆ ಎದುರಿಸಿದ್ದಾರೆ.

ಗೌಡರ ಕುಟುಂಬಕ್ಕೆ ಸಂಕಷ್ಟ-ಸಂಭ್ರಮ ಜಂಟಿಯಾಗಿ ಅಪ್ಪಳಿಸಿದೆ. ನಾಳೆ ಡೆಲ್ಲಿಯಲ್ಲಿನ ಪದಗ್ರಹಣಕ್ಕೆ ಇಡೀ ಕುಟುಂಬ ತೆರಳ್ತಿದೆ. ಇತ್ತ, ಪ್ರಜ್ವಲ್​ ಅನಾಚಾರ ಮನೆ ಮಂದಿಗೆಲ್ಲಾ ಸಂಕಷ್ಟಕ್ಕೆ ದೂಡಿದೆ. ತಾಯಿ ಭವಾನಿ ಬಂಧನದ ಭೀತಿಯಿಂದ ಪಾರಾಗಿ ಎಸ್​​ಐಟಿ ಮುಂದೆ ಹಾಜರಾಗಿದ್ದಾರೆ.

ಮಧ್ಯಾಹ್ನ 1 ಗಂಟೆಯಿಂದ ಸಂಜೆ 5ರವರೆಗೆ ಪ್ರಶ್ನೆಗಳ ಮಳೆ

ಕೆ.ಆರ್‌.ನಗರ ಮಹಿಳೆಯ ಕಿಡ್ನಾಪ್​​​ ಕೇಸ್​​​​ ಭವಾನಿಗೆ ಬೇತಾಳನಂತೆ ಬೆನ್ನಟ್ಟಿದೆ. ಸಂತ್ರಸ್ತೆ ಹೇಳಿಕೆ ಆಧಾರದಲ್ಲಿ ನಿನ್ನೆ ಭವಾನಿ ವಿಚಾರಣೆ ನಡೆದಿದೆ. ಬರೋಬ್ಬರಿ ಐದು ಗಂಟೆಗಳ ಕಾಲ ಎಸ್​​ಐಟಿ ಪ್ರಶ್ನೆ ಮಾಡಿದೆ. ಅಗತ್ಯವಿದ್ದಾಗ ಮತ್ತೆ ವಿಚಾರಣೆಗೆ ಬರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಅಷ್ಟಕ್ಕೂ ವಿಚಾರಣೆಯಲ್ಲಿ ಭವಾನಿ ಏನೆಲ್ಲಾ ಹೇಳಿದ್ರು ಅನ್ನೋದನ್ನ ನೋಡೋದಾದ್ರೆ,

SITಗೇ ಭವಾನಿ ಹೇಳಿದ್ದೇನು?

ಕಿಡ್ನಾಪ್​​ ಕೇಸ್​ನಲ್ಲಿ ನನ್ನ ಪಾತ್ರವಿಲ್ಲ. ನನ್ನ ಮೇಲೆ ಬಂದಿರುವ ಆರೋಪಗಳೆಲ್ಲಾ ಸುಳ್ಳು ಅಂತ ವಾದಿಸಿದ್ದಾರೆ. ನಮ್ಮ ಮನೆಯಲ್ಲಿ ಸಂತ್ರಸ್ತೆ ಕೆಲಸ ಮಾಡುತ್ತಿದ್ದುದು ನಿಜ. ಆದರೆ ಅಪಹರಣಕ್ಕೂ ನನಗೂ ಸಂಬಂಧವಿಲ್ಲ ಅಂತ ಭವಾನಿ ಹೇಳಿದ್ದಾರೆ ಎನ್ನಲಾಗ್ತಿದೆ. ಯಾರನ್ನೂ ನಾವು ಅಪಹರಿಸಿಲ್ಲ. ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ ಎಂದಷ್ಟೇ ಭವಾನಿ ಉತ್ತರಿಸಿದರು ಎನ್ನಲಾಗ್ತಿದೆ.

ಭವಾನಿ ಹೇಳಿಕೆಯನ್ನ ಎಸ್​ಐಟಿ ಅಧಿಕಾರಿಗಳು ಸಂಪೂರ್ಣವಾಗಿ ದಾಖಲಿಸಿಕೊಂಡಿದ್ದಾರೆ. ಅಗತ್ಯಬಿದ್ದಲ್ಲಿ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಅದಕ್ಕೆ ಭವಾನಿ ರೇವಣ್ಣ ಸಹ ಸಮ್ಮತಿಸಿದ್ದಾರೆ.

ಈ ಹಿಂದೆ ಕೆ.ಆರ್.ನಗರ ಸಂತ್ರಸ್ತ ಮಹಿಳೆ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿ ಎಸ್​​ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ಭವಾನಿ ಅವರಿಗೆ ನೋಟಿಸ್ ನೀಡಿದ್ರು. ಆದ್ರೆ, ವಿಚಾರಣೆಗೆ ಹಾಜರಾಗದೇ ತಿಂಗಳಿಂದ ತಲೆಮರೆಸಿಕೊಂಡಿದ್ರು. ಮೊಬೈಲ್‌ ಲೊಕೇಶನ್ ಆಧರಿಸಿ ಹಾಸನ, ಬೆಂಗಳೂರು, ಮೈಸೂರು ಸೇರಿ ಹಲವೆಡೆ ಎಸ್‌ಐಟಿ ಹುಡುಕಾಟ ನಡೆಸಿತ್ತು.

ಇದೇ ಕೇಸ್​​ನಲ್ಲೇ ರೇವಣ್ಣ ಜೈಲು ಯಾತ್ರೆ ಮುಗಿಸಿ ಬಂದಿದ್ದಾರೆ. ಇದೀಗ ಕೋರ್ಟ್​​ ಬಂಧನ ಭೀತಿ ದೂರ ಮಾಡಿದ ಬಳಿಕ ಭವಾನಿ ಪ್ರತ್ಯಕ್ಷರಾಗಿ ವಿಚಾರಣೆ ಎದುರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

5 ಗಂಟೆಗಳ ಕಾಲ ಭವಾನಿ ರೇವಣ್ಣ ವಿಚಾರಣೆ.. ತನಿಖೆ ವೇಳೆ ಏನು ಹೇಳಿದ್ರು ಗೊತ್ತಾ?

https://newsfirstlive.com/wp-content/uploads/2024/05/BHAVANI_REVANNA.jpg

Load More