ನಟ ಕಿರಣ್​ ರಾಜ್ ಜೊತೆಗಿರೋ​​ ಭವ್ಯಾ ಗೌಡ ಮೊದಲ ಸೀನ್ ವೈರಲ್.. ಬಿಗ್​ಬಾಸ್​ ಬೆಡಗಿಯ ಪಾತ್ರವೂ ರಿವೀಲ್​!

author-image
Veena Gangani
Updated On
ನಟ ಕಿರಣ್​ ರಾಜ್ ಜೊತೆಗಿರೋ​​ ಭವ್ಯಾ ಗೌಡ ಮೊದಲ ಸೀನ್ ವೈರಲ್.. ಬಿಗ್​ಬಾಸ್​ ಬೆಡಗಿಯ ಪಾತ್ರವೂ ರಿವೀಲ್​!
Advertisment
  • ಗೀತಾ ಸೀರಿಯಲ್​ ಮೂಲಕ ಎಲ್ಲರ ಮನೆ ಮಾತಾಗಿದ್ದ ಭವ್ಯಾ ಗೌಡ
  • ಬಿಗ್​ಬಾಸ್​ ಬೆನ್ನಲ್ಲೇ ಹೊಚ್ಚ ಹೊಸ ಸೀರಿಯಲ್​ನಲ್ಲಿ ಭವ್ಯಾ ಗೌಡ
  • ಬಿಗ್​ಬಾಸ್​ ಮೂಲಕ ಅಭಿಮಾನಿಗಳನ್ನು ಸಂಪಾದಿಸಿಕೊಂಡ ನಟಿ

ಕನ್ನಡತಿ ಸೀರಿಯಲ್​ ಮೂಲಕ ಸ್ಟಾರ್​ ಆಗಿ ಮಿಂಚಿದ ನಟ ಕಿರಣ್​ ರಾಜ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡೋದಕ್ಕೆ ಸಜ್ಜಾಗಿದ್ದಾರೆ​. ಸಾಲು ಸಾಲು ಸಿನಿಮಾಗಳ ಆಫರ್​ ನಡುವೆಯೂ ಡಾಕ್ಟರ್​ ಕರ್ಣನ ಪಾತ್ರದ ಮೂಲಕ ಮತ್ತೆ ಸೀರಿಯಲ್​ ಲೋಕಕ್ಕೆ ಬರ್ತಿದ್ದಾರೆ.

ಇದನ್ನೂ ಓದಿ:ಮತ್ತೆ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ಬಿಗ್​ಬಾಸ್​ ಖ್ಯಾತಿಯ ಭವ್ಯಾ ಗೌಡ; ಯಾವ ಸೀರಿಯಲ್?

publive-image

ಈಗಂತೂ ಮಹಿಳಾ ಪ್ರಧಾನ ಕಥೆಗಳೇ ಹೆಚ್ಚು. ಧಾರಾವಾಹಿ ಟೈಟಲ್​ ಕೂಡ ನಾಯಕಿಯ ಮೂಲಕ ಶುರುವಾಗ್ತಿರುತ್ತೆ. ಆದ್ರೆ, ಎಲ್ಲೋ ಬೆರಳಿಣಿಕೆಯಷ್ಟು ನಾಯಕನನ್ನ ಒಳಗೊಂಡ ಶೀರ್ಷಿಕೆಗಳು ಬರುತ್ತೆ. ಈಗ ಕರ್ಣ ಟೋಟಲಿ ವಿಭಿನ್ನ ಧಾರಾವಾಹಿ. ನಾಯಕನ ಪಾತ್ರ ಹಲವು ಆಯಾಮಗಳಲ್ಲಿ ಸಾಗುತ್ತೆ. ಕಿರಣ್​ ರಾಜ್​ ಅವರದ್ದು ತೂಕ ಇರೋ ಪಾತ್ರ. ಇನ್ನೂ ಕಿರಣ್​ ರಾಜ್​ಗೆ ಜೋಡಿಯಾಗಿ ಯಾವ ಹೀರೋಯಿನ್​​ ಬರಲಿದ್ದಾರೆ ಎಂದು ಕುತೂಹಲ ಮನೆಮಾಡಿತ್ತು.

publive-image

ಅದರಲ್ಲೂ ಮುಖ್ಯವಾಗಿ ಸೋಷಿಯಲ್​ ಮೀಡಿಯಾದಲ್ಲಿ ಕೇಳಿ ಬಂದಿರೋ ಹೆಸರುಗಳು ರಂಜಿನಿ ರಾಘವನ್​, ಮೋಕ್ಷಿತಾ ಪೈ ಹಾಗೂ ಭವ್ಯಾ ಗೌಡ. ಕಿರಣ್​ ಫ್ಯಾನ್ಸ್ ಸೇರಿದಂತೆ ಮೂವರು ನಾಯಕಿರ ಅಭಿಮಾನಿಗಳೂ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಮಾಡಿದ್ರು. ಸದ್ಯ ಫೈನಲಿ ನಾಯಕಿ ಯಾರು ಅನ್ನೋದು ರಿವೀಲ್​ ಆಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಭವ್ಯಾ ಗೌಡ ಅವರು ಮತ್ತೆ ಸೀರಿಯಲ್​ಗೆ ಕಂಬ್ಯಾಕ್ ಮಾಡಿದ್ದಾರೆ. ನಟಿ ಭವ್ಯಾ ಗೌಡ ಹಾಗೂ ಕಿರಣ್​ ರಾಜ್​ ಅವರ ಕರ್ಣ ಸೀರಿಯಲ್​ ಮೊದಲ ಸೀನ್​ವೊಂದು ವೈರಲ್ ಆಗಿದೆ.

publive-image

ವೈರಲ್​ ಆದ ಸೀನ್​ನಲ್ಲಿ ಭವ್ಯಾ ಗೌಡ ಮಳೆಯಲ್ಲಿ ನೆನೆದು ಡ್ಯಾನ್ಸ್​ ಮಾಡುತ್ತಾ ಇರುತ್ತಾರೆ. ಆಗ ಆಕಸ್ಮಿಕವಾಗಿ ಕಾಲು ಜಾರಿ ಬೀಳುವಷ್ಟರಲ್ಲಿ ಕಿರಣ್​ ರಾಜ್​ ಅಂದ್ರೆ ಕರ್ಣನ ಎಂಟ್ರಿ ಆಗುತ್ತೆ. ಹೀಗೆ ಕಿರಣ್​ ರಾಜ್​ ಹಾಗೂ ಭವ್ಯಾ ಗೌಡ ಮುಖಾಮುಖಿಯಾಗುತ್ತದೆ. ಕರ್ಣ ಸೀರಿಯಲ್​ನಲ್ಲಿ ಭವ್ಯಾ ಗೌಡ ಮೆಡಿಕಲ್ ಸ್ಟೂಡೆಂಟ್ ಆಗಿತ್ತಾರೆ. ಹಳದಿ ಬಣ್ಣದ ಚೂಡಿದಾರ್​ನಲ್ಲಿ ಭವ್ಯಾ ಗೌಡ ಕಾಣಿಸಿಕೊಂಡಿದ್ದಾರೆ. ಇದೇ ಕ್ಲಿಪ್​ ನೋಡಿದ ಭವ್ಯಾ ಗೌಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಗೀತಾ ಸೀರಿಯಲ್​ ಮೂಲಕ ಸಖತ್ ಫೇಮಸ್ ಆಗಿದ್ದರು ಭವ್ಯಾ ಗೌಡ. ಈ ಮೂಲಕವೇ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿಕೊಂಡು ಬಿಗ್​ಬಾಸ್​ ಮನೆಗೂ ಎಂಟ್ರಿ ಕೊಟ್ಟು ಸೂಪರ್​ ಪರ್ಪಾಮೆನ್ಸ್ ಕೂಡ ಕೊಟ್ಟಿದ್ದರು. ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟು ಕಮಾಲ್​ ಮಾಡಿದ್ದ ಭವ್ಯಾ ಗೌಡಗೆ ಇದೀಗ ಮತ್ತೆ ಕಿರುತೆರೆ ಲೋಕಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment