/newsfirstlive-kannada/media/post_attachments/wp-content/uploads/2025/05/karna-serial3.jpg)
ಕರ್ಣ.. ಶ್ರುತಿ ನಾಯ್ಡು ಸಂಸ್ಥೆಯಿಂದ ಮೂಡಿ ಬರ್ತಿರೋ ಬಹುನಿರೀಕ್ಷಿತ ಧಾರಾವಾಹಿ. ನಾವು ಮಾಹಿತಿ ನೀಡಿದಂತೆ ಕಿರಣ್​ ರಾಜ್​ಗೆ ನಾಯಕಿಯರಾಗಿ ಭವ್ಯಾ ಗೌಡ ಹಾಗೂ ನಮ್ರತಾ ಗೌಡ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/05/karna5.jpg)
ಇದೀಗ ಬಹುನಿರೀಕ್ಷಿತ ಧಾರಾವಾಹಿ ಕರ್ಣ ತೆರೆಗೆ ಬರೋಕೆ ಸಜ್ಜಾಗ್ತಿದ್ದಾನೆ. ಅಕ್ಕ-ತಂಗಿಯರಾದ ನಿತ್ಯಾ, ನಿಧಿ ಕರ್ಣನಿಗೆ ಜೋಡಿಯಾಗಲಿದ್ದಾರೆ. ಕರ್ಣ ಪಾತ್ರದಲ್ಲಿ ಕಿರಣ್​ ರಾಜ್​ ಕಾಣಿಸಿಕೊಳ್ತಿದ್ದು, ನಿತ್ಯಾ, ನಿಧಿ ಪಾತ್ರಕ್ಕೆ ಭವ್ಯಾ ಗೌಡ ಹಾಗೂ ನಮ್ರತಾ ಗೌಡ ಬಣ್ಣ ಹಚ್ಚಿದ್ದಾರೆ.
/newsfirstlive-kannada/media/post_attachments/wp-content/uploads/2025/05/karna7.jpg)
ಶ್ರುತಿ ನಾಯ್ಡು ಕರ್ಣ ಧಾರಾವಾಹಿಯನ್ನ ನಿರ್ಮಾಣ ಮಾಡ್ತಿದ್ದಾರೆ. ನಮ್ರತಾ ಮಾಡ್ತಿರೋ ಪಾತ್ರ ಸಿಕ್ಕಾಪಟ್ಟೆ ಪ್ರಾಕ್ಟಿಕಲ್​ ಆಗಿರೋ ಹುಡುಗಿಯದ್ದು. ಭವ್ಯಾ ಮಾಡ್ತಿರೋದು ಭಾವನೆಗಳಿಗೆ ಹೆಚ್ಚು ಬೆಲೆ ಕೊಡೋ ನಾಯಕಿ ಪಾತ್ರ. ಡಾಕ್ಟರ್​ ಕರ್ಣನಿಗೆ ಭವ್ಯಾ ಹೇಗೆ ಪರಿಚಯ ಆಗ್ತಾಳೆ ಆನ್ನೋದನ್ನ ಬ್ಯೂಟಿಫುಲ್​ ಹಾಡಿನ ಮೂಲಕ ತೋರಿಸಿದೆ ತಂಡ. ಇನ್ನು, ನಮ್ರತಾ ಇಂಟ್ರಡಕ್ಷನ್​ ಪ್ರೋಮೋ ಹೊರ ಬರಬೇಕಿದೆ.
/newsfirstlive-kannada/media/post_attachments/wp-content/uploads/2025/04/karna-serial2.jpg)
ಇತ್ತೀಚಿಗೆ ಕರ್ಣ ಶೂಟಿಂಗ್​ ಸೆಟ್​ನ ಫೋಟೋಗಳು ವೈರಲ್​ ಆಗ್ತಿವೆ. ಕಿರಣ್​ ರಾಜ್​, ಭವ್ಯಾ ಹಾಗೂ ನಮ್ರತಾ ಜೊತೆಗೆ ನಿರ್ಮಾಪಕಿ ಶ್ರುತಿ ನಾಯ್ಡು ಕ್ಲಿಕ್ಕಿಸಿದ ಫೋಟೋಗಳು ಇಲ್ಲಿವೆ. ಇನ್ನೂ ಕರ್ಣ ಇದೇ ಮೇ ತಿಂಗಳ ಕೊನೆಯ ವಾರದಲ್ಲಿ ತೆರೆಗೆ ಬರಲಿದೆ ಅಂತ ಹೇಳಲಾಗ್ತಿತ್ತು. ಆದ್ರೆ ಈಗ ಮತ್ತೇ ಡೇಟ್​ ಬದಲಾಯಿಸಿದೆ ತಂಡ.
/newsfirstlive-kannada/media/post_attachments/wp-content/uploads/2025/04/karna-serial.jpg)
ಜೂನ್​ ಮೊದಲ ವಾರದಲ್ಲಿ ಕರ್ಣ ತೆರೆಗೆ ಬರಲಿದೆ. ಯಾವ ಧಾರಾವಾಹಿ ಎಂಡ್​ ಆಗುತ್ತೆ ಅನ್ನೋದಕ್ಕೆ ಇನ್ನು ಖಚಿತ ಮಾಹಿತಿ ಸಿಕ್ಕಿಲ್ಲ. ಆದ್ರೆ ಮೂಲಗಳ ಪ್ರಕಾರ ಪುಟ್ಟಕ್ಕನ ಮಕ್ಕಳು ಹಾಗೂ ಶ್ರೀರಸ್ತು ಶುಭಮಸ್ತು ಮುಕ್ತಾಯ ಆಗಲಿದೆ ಎಂದು ಎನ್ನಲಾಗ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us