ಒಂದೇ ಫ್ರೇಮ್​ನಲ್ಲಿ ಭವ್ಯಾ ಗೌಡ ಹಾಗೂ ನಮ್ರತಾ ಗೌಡ.. ಕರ್ಣನಿಗೆ ಜೋಡಿಯಾಗೋದು ಯಾರು? VIDEO

author-image
Veena Gangani
Updated On
ಒಂದೇ ಫ್ರೇಮ್​ನಲ್ಲಿ ಭವ್ಯಾ ಗೌಡ ಹಾಗೂ ನಮ್ರತಾ ಗೌಡ.. ಕರ್ಣನಿಗೆ ಜೋಡಿಯಾಗೋದು ಯಾರು? VIDEO
Advertisment
  • ಜಸ್ಟ್​ ಒಂದೇ ಪ್ರೋಮೋದಿಂದ ಹವಾ ಕ್ರಿಯೇಟ್ ಮಾಡಿದ ಸೀರಿಯಲ್
  • ಕರ್ಣ ಕಿರಣ್​ ರಾಜ್​ಗೆ ಜೋಡಿಯಾದ ಇಬ್ಬರು ಸ್ಟಾರ್​ ನಾಯಕಿಯರು
  • ಕರ್ಣ ಧಾರಾವಾಹಿಯ ಮತ್ತೊಂದು ಶೂಟಿಂಗ್​ ಝಲಕ್​ ಆಯ್ತು ವೈರಲ್

ಜೀ ವಾಹಿನಿಯ ಬಹು ನಿರೀಕ್ಷಿತ ಧಾರಾವಾಹಿ ಕರ್ಣ. ಕಿರಣ್​ ರಾಜ್​​ ಹಾಗೂ ಭವ್ಯಾ ಮುಖ್ಯ ಪಾತ್ರದಲ್ಲಿ ಅಭಿನಯಿಸ್ತಿದ್ದಾರೆ. ಮತ್ತೋರ್ವ ನಾಯಕಿ ಪಾತ್ರಕ್ಕೆ ನಮ್ರತಾ ಗೌಡ ಎಂಟ್ರಿ ಕೊಟ್ಟಿದ್ದಾರೆ. ಜನಪ್ರಿಯ ನಟ, ನಟಿ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿರೋದು ಕರ್ಣನಿಗೆ ದೊಡ್ಡ ಪ್ಲಸ್​ ಪಾಯಿಂಟ್​. ಅದಕ್ಕೆ ಸಹಜವಾಗಿಯೇ ಕರ್ಣ ಸದ್ದು ಮಾಡ್ತಿದ್ದಾನೆ.

publive-image

ಈಗಾಗಲೇ ಶೂಟಿಂಗ್ ಪ್ರಾರಂಭವಾಗಿದೆ. ನೆಚ್ಚಿನ ನಟ-ನಟಿಯ ಸಣ್ಣ ಝಲಕ್​ಗೋಸ್ಕರ ಅಭಿಮಾನಿಗಳು ಕಾಯ್ತಿದ್ದಾರೆ. ಜಸ್ಟ್​ ಒಂದೇ ಒಂದು ಪ್ರೋಮೋ ರಿಲೀಸ್​ ಆಗಿದೆ ಅಷ್ಟೇ. ಬೇಗ ಇನ್ನೊಂದು ಪ್ರೋಮೋ ಬಿಡುಗಡೆ ಮಾಡಿ ಅಂತ ಫ್ಯಾನ್ಸ್​ ಮೊರೆ ಇಡು. ಅಷ್ಟರ ಮಟ್ಟಿಗೆ ಕರ್ಣ ಹೈಪ್​ ಕ್ರಿಯೇಟ್​ ಮಾಡಿದೆ.

publive-image

ಮೊನ್ನೆಯಷ್ಟೇ ಭವ್ಯಾ ಮಳೆಯಲ್ಲಿ ಡ್ಯಾನ್ಸ್​ ಮಾಡ್ತಿರೋದು, ಕಿರಣ್​ ರಾಜ್​ ಬೈಕ್​ನಲ್ಲಿ ಭವ್ಯಾನೇ ನೋಡ್ತಾ ಮೈಮರೆಯೋ ವಿಶ್ವಲ್ಸ್​ ವೈರಲ್​ ಆಗಿದ್ವು. ಮೆಡಿಕಲ್​ ಕಾಲೇಜ್​ನಲ್ಲಿ ನಡೆಯೋ ದೃಶ್ಯ. ಕಿರಣ್​ ಹಾಗೂ ಭವ್ಯಾ ಕಾಲೇಜ್ ​ಮೇಟ್ಸ್​. ಇಬ್ಬರಿಗೂ ಲವ್​ ಆ್ಯಟ್​ ಫಸ್ಟ್​ ಸೈಟ್​ ಆಗುತ್ತೆ ಎಂಬುದು ದೃಶ್ಯಗಳನ್ನ ಗಮನಿಸಿದರೇ ಅರ್ಥ ಆಗುತ್ತೆ. ​ಆ ದೃಶ್ಯವೇ ಭವ್ಯಾ ಇಂಟ್ರೊಡಕ್ಷನ್​ ಪ್ರೊಮೋ.

publive-image

ಇದನ್ನೂ ಓದಿ: 9 ಸಾವಿರಕ್ಕೂ ಹೆಚ್ಚು ಸಹಾಯಕ ಲೋಕೋ ಪೈಲಟ್ ಹುದ್ದೆಗಳು.. SSLC ಪಾಸ್ ಆಗಿದ್ರೆ ಸಾಕು…!

ಇನ್ನೂ, ಇಬ್ಬರೂ ನಾಯಕಿಯರಲ್ಲಿ ನಮ್ರತಾ ಗೌಡ ಕೂಡ ಒಬ್ರು. ನಮ್ರತಾ ಹಾಗೂ ಭವ್ಯಾ ಇರೋ ಒಂದು ಸಣ್ಣ ವಿಶ್ವಲ್​ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಬ್ರಹ್ಮಗಂಟು, ಶ್ರೀಗೌರಿ ಖ್ಯಾತಿಯ ಹಿರಿಯ ನಟಿ ಗಾಯತ್ರಿ ಪ್ರಭಾಕರ್ ಮಡಿಲಲ್ಲಿ ಫೋನ್​ ನೋಡ್ತಾ ನಮ್ರತಾ ಮಲಗಿದ್ದಾರೆ. ಇನ್ನೊಂದು ಬದಿಯಲ್ಲಿ ಭವ್ಯಾ ಮುದ್ದು ಮುದ್ದಾಗಿ ಅದೇನೋ ಹೇಳ್ತಿದ್ದಾರೆ. ಇದು ಕರ್ಣ ಧಾರಾವಾಹಿಯ ಶೂಟಿಂಗ್​ ಝಲಕ್​ ಅನ್ನೋದು ಮೇಲ್ನೋಟಕ್ಕೆ ಕಂಡುಬರ್ತಿದೆ.

publive-image

ಇದರ ಜೊತೆಗೆ ಭವ್ಯಾ ಹಾಗೂ ನಮ್ರತಾ ಒಟ್ಟೊಟ್ಟಿಗೆ ಕಾಣಿಸಿಕೊಂಡಿರೋ ಮತ್ತೊಂದು ವಿಡಿಯೋ ವೈರಲ್​ ಆಗಿದೆ. ಇಬ್ಬರೂ ಅಕ್ಕ-ತಂಗಿಯ ಪಾತ್ರ ಮಾಡ್ತಿದ್ದಾರೆ ಅನ್ನೋದು ಬಲ್ಲ ಮೂಲಗಳ ಮಾಹಿತಿ. ಒಟ್ಟಿನಲ್ಲಿ ಕರ್ಣ ಬರೋದಕ್ಕೂ ಮೊದಲೇ ಸಾಕಷ್ಟು ಕೌತುಕ ಸೃಷ್ಟಿಸಿದ್ದಾನೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment