/newsfirstlive-kannada/media/post_attachments/wp-content/uploads/2024/12/bhavya-gowda1-1.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಇನ್ನೇನೋ ಫಿನಾಲೆಗೆ ಹತ್ತಿರ ಬರುತ್ತಿದೆ. ಇದೇ ಹೊತ್ತಲ್ಲಿ ಭಾನುವಾರದ ಎಪಿಸೋಡ್​ನಲ್ಲಿ ಐಶ್ವರ್ಯಾ ಸಿಂಧೋಗಿ ಬಿಗ್​ಬಾಸ್​ ಮನೆಯಿಂದ ಆಚೆ ಬಂದಿದ್ದಾರೆ. ಸದ್ಯ ಈಗ ಬಿಗ್​ಬಾಸ್​ ಮನೆಯಲ್ಲಿ 9 ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದಾರೆ.
ಇದನ್ನೂ ಓದಿ:ವಿಶ್ವದ ವೇಗದ ಬೌಲರ್ ರೆಕಾರ್ಡ್​ ಬ್ರೇಕ್ ಮಾಡಿದ ಬೂಮ್ರಾ.. ಮುಂಬೈಕರ್ ಬೆಸ್ಟ್ ಇನ್ ಟೆಸ್ಟ್
/newsfirstlive-kannada/media/post_attachments/wp-content/uploads/2024/12/bhavya-gowda2-1.jpg)
ಭವ್ಯಾ ಗೌಡ, ಉಗ್ರಂ ಮಂಜು, ತ್ರಿವಿಕ್ರಮ್​, ಧನರಾಜ್​, ಹನುಮಂತ, ರಜತ್​, ಗೌತಮಿ, ಚೈತ್ರಾ ಕುಂದಾಪುರ ಹಾಗೂ ಮೋಕ್ಷಿತಾ ಪೈ ಉಳಿದುಕೊಂಡಿದ್ದಾರೆ. ಹೀಗೆ ವಾರ ವಾರಕ್ಕೂ ಬಿಗ್​ಬಾಸ್​ ಮನೆಯಿಂದ ಒಬ್ಬರಾದ ಮೇಲೆ ಒಬ್ಬರು ಆಚೆ ಹೋಗಲಿದ್ದಾರೆ. ಈ 9 ಜನರಲ್ಲಿ 5 ಸ್ಪರ್ಧಿಗಳು ಮಾತ್ರ ಬಿಗ್​ಬಾಸ್​ ಟಾಪ್​ 5 ಫೈನಲಿಸ್ಟ್​ ಆಗಲಿದ್ದಾರೆ.
/newsfirstlive-kannada/media/post_attachments/wp-content/uploads/2024/12/bhavya-gowda-3.jpg)
ಆದ್ರೆ, ರಿಲೀಸ್​ ಆದ ಹೊಸ ಪ್ರೋಮೋದಲ್ಲಿ ಭವ್ಯಾ ಗೌಡ ಹಾಗೂ ಉಗ್ರಂ ಮಂಜು ನಡುವೆ ಸಖತ್ ವಾರ್ ನಡೆದಿದೆ. ನಕರಾತ್ಮಕ ಗುಣಗಳು ಒಂದು ರೀತಿಯ ರೋಗವೇ ಸರಿ. ಆ ರೋಗಗಳಿಗೆ ಅನುಗುಣವಾಗಿ ಕಷಾಯವನ್ನು ಕುಡಿಸಬೇಕು ಅಂತ ಬಿಗ್​ಬಾಸ್​ ಹೇಳಿದ್ದರು.
View this post on Instagram
ಅದರಂತೆ ಭವ್ಯಾ ಗೌಡ ಉಗ್ರಂ ಮಂಜುಗೆ ದುರಹಂಕಾರ ನಿರ್ವಹಣೆ ಕಷಾಯವನ್ನು ಕುಡಿಸಿದ್ದಾರೆ. ನಾನು ಅಂತ ತುಂಬಾ ನಿಮಗೆ ದುರಹಂಕಾರ ಇದೆ ಅಂತ ಹೇಳಿದ್ದಾರೆ. ಅಲ್ಲದೇ ನಾನು ಇಷ್ಟು ಚಿಕ್ಕೋಳು ಆದ್ರು ಎಲ್ಲರ ಸರಿ ಸಮಾನವಾಗಿ ನಿಂತಿದ್ದೀನಿ ಅಂತ ಮಂಜುಗೆ ಟಾಂಗ್​ ಕೊಟ್ಟಿದ್ದಾರೆ. ಆಗ ಮಂಜು ನಾನು ಇರೋದೇ ಹಿಂಗೆ ನೀನು ನನಗೆ ಹೇಳೋದು ಬೇಡ, ನಿನಗೆ ಇದೆ ದುರಹಂಕಾರ ಎಂದು ಹೇಳಿದ್ದಾರೆ. ದುರಹಂಕಾರ ಒಪ್ಪಿಕೊಳ್ಳದ ಮಂಜು ಭವ್ಯಾ ಗೌಡ ಮೇಲೆ ಕೆಂಡ ಹಾಕಿದ್ದಾರೆ. ಇದೇ ವಿಚಾರಕ್ಕೆ ಈ ಇಬ್ಬರ ಮಧ್ಯೆ ಜೋರು ಗಲಾಟೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us