ಅತಿಥಿ ಮಂಜು ಕಾಟಕ್ಕೆ ಕಣ್ಣೀರಿಟ್ಟ ಮ್ಯಾನೇಜರ್ ಭವ್ಯ ಗೌಡ; ರಿವೇಂಜ್ ಇದೆ ಎಂದು ರಜತ್ ವಾರ್ನಿಂಗ್

author-image
Ganesh
Updated On
ಅತಿಥಿ ಮಂಜು ಕಾಟಕ್ಕೆ ಕಣ್ಣೀರಿಟ್ಟ ಮ್ಯಾನೇಜರ್ ಭವ್ಯ ಗೌಡ; ರಿವೇಂಜ್ ಇದೆ ಎಂದು ರಜತ್ ವಾರ್ನಿಂಗ್
Advertisment
  • ಬಿಗ್​​ಬಾಸ್​ ಮನೆ ಇದೀಗ ರೆಸಾರ್ಟ್​ ಆಗಿ ಬದಲಾಗಿದೆ
  • ರೆಸಾರ್ಟ್​ನಲ್ಲಿ ಇದೀಗ ಅತಿಥಿಗಳ ದರ್ಬಾರ್ ಶುರುವಾಗಿದೆ
  • ‘ಹಣ್ಣುಗಾಯಿ, ನೀರುಗಾಯಿ ಮಾಡಿಲ್ಲ ಅಂದ್ರೆ..’ ಹೇಳಿದ್ಯಾರು?

ಬಿಗ್​​ಬಾಸ್​ ಮನೆ ಇದೀಗ ರೆಸಾರ್ಟ್​ ಆಗಿ ಬದಲಾಗಿದೆ. ಈ ರೆಸಾರ್ಟ್​ನಲ್ಲಿ ಮೋಜು, ಮಸ್ತಿ ಮಾಡಲು ಭವ್ಯ ಗೌಡ ಹಾಗೂ ಚೈತ್ರಾ ಕುಂದಾಪುರ ನೇತೃತ್ವದಲ್ಲಿ ಎರಡು ತಂಡಗಳಾಗಿ ವಿಂಗಡಿಸಲಾಗಿದೆ.

ಭವ್ಯ ಗೌಡ ಟೀಂ, ರೆಸಾರ್ಟ್​ನಲ್ಲಿ ಕೆಲಸ ಮಾಡುವ ಉದ್ಯೋಗಿಗಳಾಗಿದ್ದು ಚೈತ್ರಾ ಟೀಂ ಅತಿಥಿಗಳಾಗಿದ್ದಾರೆ. ಅತಿಥಿಗಳು ತಮಗೆ ಬೇಕಾದ ರೀತಿಯಲ್ಲಿ ಸರ್ವೆಂಟ್​ಗಳನ್ನು ನಡೆಸಿಕೊಳ್ತಿದ್ದಾರೆ. ಚೈತ್ರಾ ಕುಂದಾಪುರ ತಂಡದಲ್ಲಿರುವ ಉಗ್ರಂ ಮಂಜು ಕೊಡ್ತಿರುವ ಕಾಟಕ್ಕೆ, ಟಾರ್ಚರ್​​ಗೆ ಸೇವೆ ಮಾಡುವ ಸಿಬ್ಬಂದಿ ಸುಸ್ತಾಗಿ ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ:ಕೊಹ್ಲಿ ಫಾರ್ಮ್​ ಕಳೆದುಕೊಂಡಿದ್ದಾರೆ ಅನ್ನುವುದನ್ನು ನಾನು ನಂಬುವುದಿಲ್ಲ; ಹೀಗೆ ಹೇಳಿದ ಮಾಜಿ ಕ್ರಿಕೆಟಿಗ ಯಾರು?

publive-image

ವಿಪರಿತ ಕಾಟ ತಾಳಲಾರದೇ ರೆಸಾರ್ಟ್​ನ ಮ್ಯಾನೇಜರ್ ಭವ್ಯ ಗೌಡ ಕಣ್ಣೀರು ಇಟ್ಟಿದ್ದಾರೆ. ಮಧ್ಯರಾತ್ರಿ ಏನೇ ಕೇಳಿದ್ರೂ ಮಾಡಿಕೊಡಬೇಕು ಎಂದು ಅತ್ತಿದ್ದಾರೆ. ಇತ್ತ ಚೈತ್ರಾ ತಮ್ಮ ದರ್ಬಾರ್ ನಡೆಸಿದ್ದಾರೆ. ರಾತ್ರಿ ಲೈಟ್ಸ್ ಆಫ್ ಆದರೂ ನೀವು ನಮ್ಮ ಸೇವೆ ಮಾಡಬೇಕು. ಇನ್ನೂ ಐಶ್ವರ್ಯ ನನ್ನ ತಲೆ ಒತ್ತಬೇಕು ಎಂದು ಆರ್ಡರ್ ಮಾಡಿದ್ದಾಳೆ. ಮಂಜು ನಂಗೆ ಇವತ್ತು ಮ್ಯೂಜಿಕಲ್ ನೈಟ್ ಬೇಕು ಎಂದಿದ್ದಾರೆ. ಇತ್ತ ರೊಚ್ಚಿಗೆದ್ದಿರುವ ರಜತ್, ನಮಗೂ ಬರುತ್ತೆ ಚಾನ್ಸ್​. ನಿಮ್ಮನ್ನು ಹಣ್ಣುಗಾಯಿ, ನೀರುಗಾಯಿ ಮಾಡಿಲ್ಲ ಅಂದ್ರೆ ನನ್ನ ಹೆಸರು ಬುಜ್ಜಿ ಅಲ್ಲ ನೋಡಿಕೋ ಎಂದು ಉಗ್ರಂ ಮಂಜುಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:BBK11: ಬಿಗ್ ಬಾಸ್ ಮನೆಯಲ್ಲಿ ಧನರಾಜ್‌ ಯಡವಟ್ಟು.. ಬಿದ್ದು, ಬಿದ್ದು ನಕ್ಕ ಭವ್ಯಾ; ಆಗಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment