/newsfirstlive-kannada/media/post_attachments/wp-content/uploads/2024/12/bigg-boss-bhavya2.jpg)
ಕನ್ನಡದ ಬಿಗ್​ಬಾಸ್​ ಶುರುವಾಗಿ 85 ದಿನಗಳನ್ನು ಪೂರೈಸಿದೆ. ವಾರದಿಂದ ವಾರಕ್ಕೆ ಬಿಗ್​ಬಾಸ್​ ಮನೆಯಿಂದ ಸ್ಪರ್ಧಿಗಳು ಆಚೆ ಬರುತ್ತಲೇ ಇದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ಬಿಗ್​ಬಾಸ್​ ಮನೆಯಿಂದ ಅಚ್ಚರಿಯ ರೀತಿಯಲ್ಲಿ ತ್ರಿವಿಕ್ರಮ್ ಆಚೆ ಬಂದಿದ್ದರು. ಆದರೆ ಅವರನ್ನು ಸೀಕ್ರೆಟ್ ರೂಮ್​ಗೆ ಕಳುಹಿಸಿಲಾಗಿದೆ.
ಹೌದು, ಕಳೆದ ವಾರ ವೀಕ್ಷಕರು ವೋಟ್ ಮಾಡಲು ವೋಟಿಂಗ್ ಲೈನ್ಸ್ ತೆರೆದಿರಲಿಲ್ಲ. ಹೀಗಾಗಿ ತ್ರಿವಿಕ್ರಮ್​ ಅವರನ್ನು ಸೀಕ್ರೆಟ್ ರೂಂಗೆ ಕಳಿಸಿರಬಹುದು. ಮುಂದಿನ ಸಂಚಿಕೆಯಲ್ಲಿ ತ್ರಿವಿಕ್ರಮ್​ ಮತ್ತೆ ಬಿಗ್​ಬಾಸ್​ ಮನೆಗೆ ವಾಪಸ್​ ಬರುತ್ತಾರಾ ಅಥವಾ ಮತ್ತೆ ಬಿಗ್​ಬಾಸ್​ ಟ್ವಿಸ್ಟ್​ ಇಡುತ್ತಾರಾ ಅಂತ ಕಾದು ನೋಡಬೇಕಿದೆ.
ಆದರೆ ಬಿಗ್​ಬಾಸ್​ ಮುಖ್ಯ ದ್ವಾರದಿಂದ ತ್ರಿವಿಕ್ರಮ್​ ಹೋಗುತ್ತಿದ್ದಂತೆ ಮನೆ ಮಂದಿ ಫುಲ್ ಶಾಕ್ ಆಗಿದ್ದಾರೆ. ಅದರಲ್ಲೂ ಭವ್ಯಾ ಗೌಡ ಅಂತೂ ತ್ರಿವಿಕ್ರಮ್​ ಹೋಗುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಬಿಗ್​ಬಾಸ್​ ಮತ್ತೆ ತ್ರಿವಿಕ್ರಮ್​ ನನ್ನು ಮನೆಗೆ ವಾಪಸ್​ ಕಳುಹಿಸಿ ಅಂತ ಕಣ್ಣೀರು ಹಾಕಿದ್ದಾರೆ. ಇದನ್ನೇಲ್ಲಾ ವೀಕ್ಷಿಸಿದ ಕಿಚ್ಚ ಸುದೀಪ್​, ಕೊನೆಯಲ್ಲಿ ಮನೆ ಮಂದಿಗೆ ಪ್ರಶ್ನೆ ಮಾಡಿದ್ದಾರೆ.
ತ್ರಿವಿಕ್ರಮ್​ ಹೋಗಿದ್ದು ಯಾರಿಗೆಲ್ಲಾ ಖುಷಿ ಆಗಿದೆ. ಗೊತ್ತಿದೆ ಎಷ್ಟು ಜನ ಖುಷಿಯಾಗಿ ಇದ್ದೀರಿ ಅಂತ ನಾನು ನೋಡಿದ್ದೇನೆ ಅಂತ ಹೇಳಿದ್ದಾರೆ. ಆಗ ಮತ್ತೆ ಭವ್ಯಾ ಗೌಡಗೇ ನೀವ್​ ಯಾಕ್​ ರೀ ಅಷ್ಟು ಕಣ್ಣೀರು ಹಾಕಿದ್ರಿ ಅಂತ ಕಿಚ್ಚ ಕೇಳಿದ್ದಾರೆ. ಆಗ ಅವರು ಡಿಸರ್ವಿಂಗ್ ಕ್ಯಾಂಡಿಡೇಟ್ ಅಲ್ವಾ ಸರ್ ಅಂತ ಹೇಳಿದ್ರು, ಅದಕ್ಕೆ ಕಿಚ್ಚ ನೀವು ಯಾರು ಹೇಳೋದಕ್ಕೆ, ಅದನ್ನು ಜನ ಹೇಳಬೇಕು ಅಂತ ಎಲ್ಲರ ಮುಂದೆ ಖಡಕ್​ ಆಗಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ