BBK11: ಬಿಗ್​ಬಾಸ್​ ಓಟದಲ್ಲಿ ಬಿಗ್​ ಟ್ವಿಸ್ಟ್; ಈ ವಾರದ ಕ್ಯಾಪ್ಟನ್ಸಿ ಪಟ್ಟ ಸಿಕ್ಕಿದ್ದು ಯಾರಿಗೆ?

author-image
Veena Gangani
Updated On
BBK11: ಬಿಗ್​ಬಾಸ್​ ಓಟದಲ್ಲಿ ಬಿಗ್​ ಟ್ವಿಸ್ಟ್; ಈ ವಾರದ ಕ್ಯಾಪ್ಟನ್ಸಿ ಪಟ್ಟ ಸಿಕ್ಕಿದ್ದು ಯಾರಿಗೆ?
Advertisment
  • ಈ ವಾರದ ಕ್ಯಾಪ್ಟನ್ಸಿ ಪಟ್ಟವನ್ನು ಹೇಗೆ ನಿಭಾಯಿಸುತ್ತಾರೆ ಈ ಸ್ಪರ್ಧಿ
  • ಮೊದಲ ಬಾರಿಗೆ ಜೋಡಿಯಾಗಿ ಟಾಸ್ಕ್​ ಗೆದ್ದು ಕ್ಯಾಪ್ಟನ್​ ಆದ ನಟಿ
  • ಕೊನೆಯ ಹಂತದಲ್ಲಿ ಬಿಗ್​ಬಾಸ್​ ಕೊಟ್ಟಿದ್ದ ಟಾಸ್ಕ್​ ಗೆದ್ದಿದ್ದು ಯಾರು?

8ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 8ನೇ ವಾರಕ್ಕೆ ಕಾಲಿಡುತ್ತಿದೆ. ಈ 47 ದಿನಗಳಲ್ಲಿ ಬಿಗ್​ಬಾಸ್​ ಮನೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಸದ್ಯ ಬಿಗ್​ಬಾಸ್​ ಮನೆಯಲ್ಲಿ ಒಟ್ಟು 13 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಇವರ ಪೈಕಿ ಇದೀಗ 8ನೇ ವಾರಕ್ಕೆ ಬಿಗ್​ಬಾಸ್​ ಮನೆಯ ಕ್ಯಾಪ್ಟನ್​ ಆಗಿ ಭವ್ಯಾ ಗೌಡ ಅವರು​ ಹೊರ ಹೊಮ್ಮಿದ್ದಾರೆ.

ಇದನ್ನೂ ಓದಿ: ಮನೆ ಹಿತ್ತಲಲ್ಲಿ ಮಹಿಳೆಯ 6 ತುಂಡು ಕತ್ತರಿಸಿ ಹೂತಿಟ್ಟಿದ್ದ; ಈ ಭಯಾನಕ ಕೃತ್ಯ ಬೆಳಕಿಗೆ ಬಂದಿದ್ದೇ ರೋಚಕ!

publive-image

ಇದೇ ಮೊದಲ ಬಾರಿಗೆ ಭವ್ಯಾ ಗೌಡ ​ಅವರು ಕ್ಯಾಪ್ಟನ್​ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಬಿಗ್​ಬಾಸ್​ ಕೊಟ್ಟ ಟಾಸ್ಕ್​ನಲ್ಲಿ ಉತ್ತಮ ಪ್ರದರ್ಶನ ನೀಡಿ ಬಿಗ್​ಬಾಸ್​ ಮನೆಯ ಕ್ಯಾಪ್ಟನ್ಸಿ ಪಟ್ಟ ಪಡೆದುಕೊಂಡಿದ್ದಾರೆ. ಬಿಗ್​ಬಾಸ್​ ಕ್ಯಾಪ್ಟನ್ಸಿ ಓಟಕ್ಕಾಗಿ ಟಾಸ್ಕ್ ನೀಡಿದ್ದರು. ಟಾಸ್ಕ್​ನ ಕೊನೆಯ ಹಂತದಲ್ಲಿ ಭವ್ಯಾ ಗೌಡ ಹಾಗೂ ಗೌತಮಿ ಅವರ ಮಧ್ಯೆ ಪೈಪೋಟಿ ನಡೆದಿತ್ತು.

publive-image

ಕೊನೆಯ ಕ್ಷಣದಲ್ಲಿ ಯಾರು ಬಿಗ್​ಬಾಸ್​ ಮನೆಯ ಕ್ಯಾಪ್ಟನ್​ ಆಗುತ್ತಾರೆ ಅಂತ ಕುತೂಹಲ ಮೂಡಿತ್ತು. ಕೊನೆಯ ಕ್ಷಣದಲ್ಲಿ ಭವ್ಯಾ ಗೌಡ ಕ್ಯಾಪ್ಟನ್​ ಆಗಿ ಹೊರ ಹೊಮ್ಮಿದ್ದಾರೆ. ಇನ್ನು ಕ್ಯಾಪ್ಟನ್ಸಿ ಟಾಸ್ಕ್​ ಗೆದ್ದುಕೊಂಡಿದ್ದ ಭವ್ಯಾ ಗೌಡಗೆ ಬಿಗ್​ಬಾಸ್​ ಅಭಿನಂದನೆ ತಿಳಿಸಿದ್ದಾರೆ. ಜೊತೆಗೆ ಮನೆಯ ಎಲ್ಲ ಸ್ಪರ್ಧಿಗಳು ಕೂಡ ಕಂಗ್ರಾಜುಲೇಷನ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment