ಒಂದೇ ವೇದಿಕೆಯಲ್ಲಿ ಮೂವರು ಸ್ಟಾರ್ಸ್​.. ಕಿರಣ್ ರಾಜ್, ಭವ್ಯಾ, ನಮ್ರತಾ ಗೌಡರನ್ನು ನೋಡಿ ಫ್ಯಾನ್ಸ್​ ಖುಷ್​!

author-image
Veena Gangani
Updated On
‘ಕರ್ಣಗೆ ಮೊದಲೇ ಸೆಲೆಕ್ಟ್ ಆಗಿದ್ದೆ ಆದ್ರೆ’.. ನಮ್ರತಾ ಗೌಡ ಹೊಸ ಪಾತ್ರದ​ ಬಗ್ಗೆ ಏನಂದ್ರು?
Advertisment
  • ಸಿಂಧನೂರಿನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮ ಈ ಮೂವರು ಭಾಗಿ
  • ಮೋಡಿ ಮಾಡೋಕೆ ಸಜ್ಜಾಗಿದ್ದಾರೆ ಕಿರಣ್​ ರಾಜ್​-ಭವ್ಯಾ ಜೋಡಿ
  • ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡ ಕಿರಣ್​, ಭವ್ಯಾ, ನಮ್ರತಾ

ಭವ್ಯಾ ಗೌಡ ಗೀತಾ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ. ನಂತರ ಬಿಗ್​ ಬಾಸ್​ ಸೀಸನ್​ 11ಕ್ಕೆ ಕಾಲಿಟ್ಟರು. ಡೊಂಟ್​ ಕೇರ್​ ಆ್ಯಟಿಟ್ಯೂಡ್​ ಜೊತೆಗೆ ಧೈರ್ಯವಾಗಿ ಮುನ್ನುಗ್ಗೋ ಗುಣದಿಂದ ಅಪಾರ ಅಭಿಮಾನಿ ಬಳಗ ಸಂಪಾದಿಸಿದ್ರು. ಅಲ್ಲದೇ ತ್ರಿವಿಕ್ರಮ್ ಹಾಗೂ​ ಭವ್ಯಾ ಜೋಡಿ ಸೂಪರ್ ಹಿಟ್​ ಆಗಿತ್ತು.

ಇದನ್ನೂ ಓದಿ:‘ಲಕ್ಷ್ಮೀ ಪಾತ್ರಕ್ಕೆ ಆಡಿಷನ್ ಕೊಟ್ಟು ಕೀರ್ತಿಯಾಗಿ ಸೆಲೆಕ್ಟ್​ ಆದೆ’.. ತನ್ವಿ ರಾವ್ ಸೀರಿಯಲ್ ರೋಚಕ ಜರ್ನಿ ಹೇಗಿತ್ತು?

publive-image

ಸದ್ಯ ಜೀ ವಾಹಿನಿಯಲ್ಲಿ ಶೀಘ್ರದಲ್ಲೇ ಮೂಡಿಬರಲಿರೋ ಬಹು ನಿರೀಕ್ಷಿತ ಧಾರಾವಾಹಿಯಲ್ಲಿ ಡಾಕ್ಟರ್​ ಪಾತ್ರ ನಿರ್ವಹಿಸುತ್ತಿದ್ದಾರೆ. ಕಿರಣ್​ ರಾಜ್​-ಭವ್ಯಾ ಜೋಡಿ ಮೋಡಿ ಮಾಡೋಕೆ ಸಜ್ಜಾಗ್ತಿದೆ. ಇವರ ಜೊತೆಗೆ ನಾವು ಮೊದಲೇ ಹೇಳಿದಂತೆ ನಮ್ರತಾ ಗೌಡ ಕೂಡ ನಟಿಸುತ್ತಿದ್ದಾರೆ. ಇಬ್ಬರೂ ನಾಯಕಿಯರು ಇರಲಿದ್ದಾರೆ. ಸದ್ಯದಲ್ಲೇ ಎರಡನೇ ಪ್ರೋಮೋ ವಿಶೇಷವಾಗಿ ರಿಲೀಸ್​ ಆಗಲಿದೆ.

publive-image

ಸರಿಗಮಪ ಕಾರ್ಯಕ್ರಮ ಮಾಹಾಮನರಂಜನೆ ಹೊತ್ತು ತಂದಿದೆ. ಇದರ ಪ್ರಯುಕ್ತ ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇದೇ ವೇದಿಕೆಯಲ್ಲಿ ಕಿರಣ್​ ರಾಜ್​, ಭವ್ಯಾ ಗೌಡ ಹಾಗೂ ನಮ್ರತಾ ಗೌಡ ಫಾರ್​ ದಿ ಫಸ್ಟ್​ ಟೈಮ್​ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಮೂವರನ್ನು ಒಂದೇ ವೇದಿಕೆಯಲ್ಲಿ ನೋಡಿದ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.

ಇನ್ನೂ ಈ ಮೂವರು ಒಟ್ಟಿಗೆ ವೇದಿಕೆಗೆ ಬರುತ್ತಿದ್ದಂತೆ ಅಭಿಮಾನಿಗಳು ಜೋರಾಗಿ ಕೂಗಾಡಿದ್ದಾರೆ. ವೇದಿಕೆ ಬಂದು ಮಾತಾಡಿದ ಕಿರಣ್ ರಾಜ್, ಧಾರಾವಾಹಿ ಶುರುವಾಗೋ ಮುನ್ನವೇ ಈ ರೀತಿ ಪ್ರೀತಿ ಕೊಟ್ಟಿದ್ದಾರೆ ಎಂದು ಖುಷಿಪಟ್ಟಿದ್ದಾರೆ. ಜೊತೆಗೆ ಮಾತಾಡಿದ ನಮ್ರತಾ ಗೌಡ, ನಾನು ಕರ್ಣ ತಂಡ ಸೇರಿರೋದು ತುಂಬಾನೇ ಖುಷಿಇದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment