/newsfirstlive-kannada/media/post_attachments/wp-content/uploads/2025/02/bhavya-.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಗಳು ಸಖತ್ ಬ್ಯುಸಿಯಾಗಿದ್ದಾರೆ. ಅದರಲ್ಲೂ ಭವ್ಯಾ ಗೌಡ, ತ್ರಿವಿಕ್ರಮ್ ಅಭಿಮಾನಿಗಳನ್ನು ಭೇಟಿ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಆದ್ರೆ ಇದರ ಮಧ್ಯೆ ಭವ್ಯಾ ಗೌಡ ಅಭಿಮಾನಿಗಳಿಗೆ ಗೊಂದಲ ಶುರುವಾಗಿದೆ
ಇದನ್ನೂ ಓದಿ:ತ್ರಿವಿಕ್ರಮ್ ಬಗ್ಗೆ ಶಾಕಿಂಗ್ ವಿಚಾರ ಬಿಚ್ಚಿಟ್ಟ ಅನುಷಾ ರೈ; ಬಿಗ್ಬಾಸ್ ಮುಗಿಯೋವರೆಗೂ ಯಾರಿಗೂ ಗೊತ್ತೇ ಇರಲಿಲ್ಲ!
ಹೌದು, ಬಿಗ್ಬಾಸ್ ಮನೆಯಲ್ಲಿ ಇದ್ದಾಗಲೇ ಸ್ಪರ್ಧಿಗಳಾಗಿದ್ದ ರಜತ್, ಹನುಮಂತು ಹಾಗೂ ಭವ್ಯಾ ಗೌಡಗೆ ಆಫರ್ ಒಂದು ಬಂದಿತ್ತು. ಈ ಮೂವರು ಬಾಯ್ಸ್ ವರ್ಸಸ್ ಗರ್ಲ್ಸ್ ಶೋಗೆ ಅಧಿಕೃತವಾಗಿ ಎಂಟ್ರಿ ಕೊಡಲಿದ್ದಾರೆ ಎಂದು ಘೋಷಣೆ ಮಾಡಿಲಾಗಿತ್ತು. ಆದ್ರೆ ಶನಿವಾರ ಹಾಗೂ ಭಾನುವಾರ ಪ್ರಸಾರವಾಗಿದ್ದ ಸಂಚಿಕೆಯಲ್ಲಿ ಭವ್ಯಾ ಗೌಡ ಬಂದಿರಲಿಲ್ಲ. ಬದಲಾಗಿ ಅನಿರೀಕ್ಷಿತವಾಗಿ ಚೈತ್ರಾ ಕುಂದಾಪುರ ಎಂಟ್ರಿ ಕೊಟ್ಟು ಎಲ್ಲರಿಗೂ ಶಾಕ್ ನೀಡಲಾಗಿತ್ತು. ಆದ್ರೆ ಇದೀಗ ಭವ್ಯಾ ಗೌಡ ಈ ಆಫರ್ ರಿಜೆಕ್ಟ್ ಮಾಡಿಬಿಟ್ರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
ಬಿಗ್ಬಾಸ್ನಲ್ಲಿ ಟಿಕೆಟ್ ಟು ಫಿನಾಲೆ ವಾರ ನಡೆಯುತ್ತಿದ್ದಾಗ ಅನುಪಮಾ ಗೌಡ ಎಂಟ್ರಿ ಕೊಟ್ಟಿದ್ದರು. ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋ ನಡೆಯಲಿದೆ ಎಂದು ಮಾಹಿತಿ ನೀಡಿದ್ದರು. ಜೊತೆಗೆ ಬಾಯ್ಸ್ ವರ್ಸಸ್ ಗರ್ಲ್ಸ್ ತಂಡ ಕೂಡ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟು ಹನುಮಂತು, ರಜತ್ ಕಿಶನ್ ಮತ್ತು ಭವ್ಯಾ ಗೌಡರನ್ನು ವೆಲ್ಕಮ್ ಆಯ್ಕೆ ಮಾಡಿದ್ದರು. ಹೀಗಾಗಿ ಬಿಗ್ಬಾಸ್ ಮನೆಯಲ್ಲಿದ್ದಾಗಲೇ ಈ ಮೂವರಿಗೆ ಬಂಪರ್ ಆಫರ್ ಬಂದಿತ್ತು. ಆದರೆ ಭವ್ಯಾ ಗೌಡ ಏಕೆ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ ಅಂತ ವೀಕ್ಷಕರು ತಲೆ ಕೆಡಿಸಿಕೊಂಡಿದ್ದಾರೆ. ಸದ್ಯ ಮುಂದಿನ ದಿನಗಳಲ್ಲಿ ಭವ್ಯಾ ಗೌಡ ಈ ಬಗ್ಗೆ ಏನಾದರೂ ಪ್ರತಿಕ್ರಿಯೆ ನೀಡುತ್ತಾರಾ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ