/newsfirstlive-kannada/media/post_attachments/wp-content/uploads/2024/10/bbk-119.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಶುರುವಾಗಿ 5 ದಿನ ಕಳೆದಿದೆ. ಆದರೆ ಬಿಗ್​ಬಾಸ್​ ಶುರುವಾದ ದಿನದಿಂದಲೇ ಸ್ಪರ್ಧಿಗಳ ಮಧ್ಯೆ ಗಲಾಟೆ ನಡೆದಿದೆ. ಸ್ವರ್ಗ ಹಾಗೂ ನರಕ ಎಂಬ ಎರಡು ಕಾನ್ಸೆಪ್ಟ್​ ಮೂಲಕವೇ ಸ್ಪರ್ಧಿಗಳ ಮಧ್ಯೆ ಮೈಮನಸ್ಸು ಮೂಡಿದಂತೆ ಆಗಿದೆ.
ಸದ್ಯ ಬಿಗ್​ಬಾಸ್​ ಮನೆಯಲ್ಲಿ ಒಟ್ಟು 17 ಸ್ಪರ್ಧಿಗಳು ಇದ್ದಾರೆ. ಏಳು ಮಂದಿ ಬಿಗ್​ಬಾಸ್​ ನರಕಕ್ಕೆ ಸೇರಿದ್ದಾರೆ. ಇನ್ನೂ 10 ಜನ ಸ್ವರ್ಗದಲ್ಲಿ ಇದ್ದಾರೆ. ಆದರೆ ಇದೇ ಸ್ವರ್ಗದಲ್ಲಿ ಇರೋ 10 ಸ್ಪರ್ಧಿಗಳಲ್ಲಿ ಕ್ರಿಮಿನಲ್​ ಲಾಯರ್​ ಜಗದೀಶ್​ ಕೂಡ ಒಬ್ಬರು. ಇದೇ ಜಗದೀಶ್​ ಬಿಗ್​ಬಾಸ್​ ಮನೆಯಲ್ಲಿರೋ ಎಲ್ಲರ ಜೊತೆ ಗಲಾಟೆ ಮಾಡಿಕೊಳ್ಳುತ್ತಿದ್ದಾರೆ.
ನಿನ್ನೆ ನಡೆದ ಎಪಿಸೋಡ್​ನಲ್ಲಿಯೂ ಜಗದೀಶ್​ ಅವರು ಸುಖಾ ಸುಮ್ಮನೆ ಉಗ್ರಂ ಮಂಜು ಅವರ ಮೇಲೆ ರೇಗಾಡಿದ್ದಾರೆ. ಬಳಿಕ ಬಿಗ್​ಬಾಸ್​ ಮನೆಯಲ್ಲಿರೋ ಕನ್ಫೆಷನ್ ರೂಂನ ಬಾಗಿಲು ಮುರಿದು ಹಾಕಿದ್ದಾರೆ. ಅಷ್ಟೇ ಅಲ್ಲದೇ ಸ್ಪರ್ಧಿಗಳ ಬಗ್ಗೆ ವೈಯಕ್ತಿಕವಾಗಿ ಮಾತಾಡಿದ್ದಾರೆ. ಕೆಲ ಹೊತ್ತಿನ ಬಳಿಕ ಬಂದು ಮತ್ತೆ ಕ್ಷಮೆ ಕೇಳಿದ್ದಾರೆ.
ಜಗದೀಶ್​ ಅವರು ಕ್ಷಮೆ ಕೇಳುತ್ತಿದ್ದ ವೇಳೆ ಭವ್ಯಾ ಗೌಡ ಅವರು ಇವರು ಹೀಗೆ ಮಾಡ್ತಾ ಇರೋದನ್ನು ನೋಡಿ ಸುದೀಪ್​ ಸರ್​ ಇವರನ್ನೇ ಒದ್ದು ಹೊರಗಡೆ ಹಾಕ್ತಾರೆ ಅಂತ ಹೇಳಿದ್ದಾರೆ. ಅಷ್ಟರ ಮಟ್ಟಿಗೆ ಬಿಗ್​ಬಾಸ್​ ಮನೆಯಲ್ಲಿ ಸೌಂಡ್​ ಮಾಡ್ತಾ ಇದ್ದಾರೆ. ನಾಳೆಯ ಸಂಚಿಕೆಯಲ್ಲಿ ಕಿಚ್ಚ ಸುದೀಪ್​ ಅವರು ನಿರ್ಧಾರ ಏನಾಗುತ್ತೆ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ