BBK11: ಎಲ್ಲರ ಮುಂದೆ ಭವ್ಯಾ ಗೌಡ ಅಸಲಿ ಮುಖವಾಡ ಕಳಚಿದ ಕಿಚ್ಚ ಸುದೀಪ್​; ಕ್ಯಾಪ್ಟನ್ಸಿಗೆ ಕುತ್ತು?

author-image
Veena Gangani
Updated On
BBK11: ಎಲ್ಲರ ಮುಂದೆ ಭವ್ಯಾ ಗೌಡ ಅಸಲಿ ಮುಖವಾಡ ಕಳಚಿದ ಕಿಚ್ಚ ಸುದೀಪ್​; ಕ್ಯಾಪ್ಟನ್ಸಿಗೆ ಕುತ್ತು?
Advertisment
  • ಈ ಬಾರಿಯ ಬಿಗ್​ಬಾಸ್ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಪಡೆದುಕೊಂಡು ಮುನ್ನುಗ್ಗುತ್ತಿದೆ
  • ಎಲ್ಲರ ಮುಂದೆಯೇ ಭವ್ಯಾ ಗೌಡ ಮುಖವಾಡ ಕಳಚಿದ ಕಿಚ್ಚ ಸುದೀಪ್
  • ಭವ್ಯಾ ಗೌಡ ಮೋಸ ಮಾಡಿದ್ದು ಅಂತ ಗೊತ್ತಿದ್ದರು ಸೈಲೆಂಟ್​ ಆಗಿದ್ದೇಕೆ?

ದಿನದಿಂದ ದಿನಕ್ಕೆ, ವಾರದಿಂದ ವಾರಕ್ಕೆ ಈ ಬಾರಿಯ ಬಿಗ್​ಬಾಸ್ ಟ್ವಿಸ್ಟ್​ ಪಡೆದುಕೊಂಡು ಮುನ್ನುಗ್ಗುತ್ತಿದೆ. ವಾರದ ಕೊನೆಯಲ್ಲಿ ಕಿಚ್ಚ ಸುದೀಪ್​ ಅವರು ಬಂದು ತಪ್ಪು ಮಾಡಿದ್ದು ಯಾರು? ಸರಿ ಮಾಡಿದ್ದು ಯಾರು ಅಂತ ಹೇಳುತ್ತಾರೆ. ಆದ್ರೆ ಈ ಬಾರಿ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಭವ್ಯಾ ಗೌಡ ಮೋಸ ಮಾಡಿದ್ದು ವೀಕ್ಷಕರ ಮುಂದೆ ಕಂಡಿದೆ.

ಇದನ್ನೂ ಓದಿ:BBK11; ಚೈತ್ರಾ ಮತ್ತೆ ಕಣ್ಣೀರು, ಮಂಜು ಮುಖಕ್ಕೆ ಟೀ ಚೆಲ್ಲಿದ ಗೌತಮಿ.. ಇವತ್ತು ಕಿಚ್ಚನ ಪಂಚಾಯತಿ ಏನಾಗುತ್ತೆ?

publive-image

ಆದ್ರೆ ಇದನ್ನೇ ಕಿಚ್ಚ ಸುದೀಪ್​ ಅವರು ವಾರದ ಕತೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಜೊತೆಗೆ ಸಾಕ್ಷಿಗೆ ವಿಡಿಯೋ ಕ್ಲಿಪ್​ ಕೂಡ ಎಲ್ಲರ ಮುಂದೆ ಹಾಕಿದ್ದಾರೆ. ಇದನ್ನೂ ನೋಡಿದ ಮನೆ ಮಂದಿ ಶಾಕ್​ ಆಗಿದ್ದಾರೆ. ಜೊತೆಗೆ ಈ ವಿಚಾರ ರಜತ್​ಗೆ ಗೊತ್ತಿದ್ದರು ಮಾತಾಡಿಲ್ಲ ಏಕೆ ಅಂತ ಕಿಚ್ಚ ಸುದೀಪ್​ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಇಬ್ಬರು ಉಸ್ತುವಾರಿಗಳಿಗೂ ತರಾಟೆ ತೆಗೆದುಕೊಂಡಿದ್ದಾರೆ.

publive-image

ಇನ್ನೂ, ಬಾಲ್ ನಂಬರ್ 9ರಿಂದ ಬಿದ್ದಿಲ್ಲ ಅಂತ ಗೊತ್ತಿದ್ದರು ಭವ್ಯಾ ಗೌಡ ಮೋಸದ ಆಟ ಆಡಿದ್ದಾರೆ. ಇದೇ ವಿಚಾರ ಕಿಚ್ಚ ಸುದೀಪನ ಮುಂದೆ ಹೇಳಿದ್ದಾಗ ಅದಕ್ಕೆ ಉತ್ತರ ಎಂಬಂತೆ ರಜತ್​ ಅವರ ಬಾಯಿಂದ ಸತ್ಯ ಆಚೆ ಬಂದಿದೆ. ಇನ್ನೂ, ಕೊನೆಯ ಕ್ಷಣದಲ್ಲಿ ಕಿಚ್ಚ ಸುದೀಪ್​ ವೀಕ್ಷಕರು ನಿಮ್ಮ ಆಟವನ್ನು ನೋಡಿದ್ದಾರೆ ಅವರಿಗೆ ಬಿಟ್ಟಿದ್ದು ಅಂತ ಇಲ್ಲಿಗೆ ಮಾತನ್ನು ಮುಗಿಸಿದ್ದಾರೆ. ಆದರೆ ಭಾನುವಾರದ ಸಂಚಿಕೆಯಲ್ಲಿ ಕಳೆದ ಸೀನನ್​ ವರ್ತೂರು ಸಂತೋಷ್​ ಅವರಿಗೆ ಕೊಟ್ಟಿ ಶಿಕ್ಷೆಯನ್ನೇ ಭವ್ಯಾ ಗೌಡಗೂ ಬರುತ್ತಾ ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment