Advertisment

ಹಾಸನ ಅಶ್ಲೀಲ ವಿಡಿಯೋ ಕೇಸ್​​; ಅಜ್ಜಿಯನ್ನು ಬಿಡದ ರಾಕ್ಷಸನಿಗೆ ಶಿಕ್ಷೆಯಾಗಲಿ ಎಂದ ಭವ್ಯ ನರಸಿಂಹಮೂರ್ತಿ

author-image
Ganesh Nachikethu
Updated On
ಹಾಸನ ಅಶ್ಲೀಲ ವಿಡಿಯೋ ಕೇಸ್​​; ಅಜ್ಜಿಯನ್ನು ಬಿಡದ ರಾಕ್ಷಸನಿಗೆ ಶಿಕ್ಷೆಯಾಗಲಿ ಎಂದ ಭವ್ಯ ನರಸಿಂಹಮೂರ್ತಿ
Advertisment
  • ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ತನಿಖೆಗೆ ಎಸ್ಐಟಿ ರಚನೆ
  • ಈ ಬಗ್ಗೆ ಕಾಂಗ್ರೆಸ್​ ಮಹಿಳಾ ನಾಯಕಿಯರಿಂದ ತುರ್ತು ಸುದ್ದಿಗೋಷ್ಠಿ..!
  • ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದ ಕಾಂಗ್ರೆಸ್​​ ನಾಯಕಿಯರು

ಬೆಂಗಳೂರು: ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ತನಿಖೆಗೆ ಎಡಿಜಿಪಿ ಬಿ.ಕೆ ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರೋ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ತನಿಖೆ ನಡೆಸಲು ಎಸ್ಐಟಿ ರಚಿಸಿ ಆದೇಶಿಸಿದೆ. ಈ ಬಗ್ಗೆ ಖುದ್ದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಮಾಹಿತಿ ನೀಡಿದ್ದಾರೆ.

Advertisment

ಇನ್ನು, ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಕಾಂಗ್ರೆಸ್​​ ವಕ್ತಾರೆ ಭವ್ಯ ನರಸಿಂಹಮೂರ್ತಿ, ನಾವು ಹೆಣ್ಣುಮಕ್ಕಳು. ನಮಗೆ ಹೆಣ್ಣುಮಕ್ಕಳು ಎಂದು ಬಂದಾಗ ಯಾವ ಜಾತಿ ಇಲ್ಲ, ಯಾವ ಧರ್ಮ ಕೂಡ ಇಲ್ಲ. ಮಹಿಳೆಯರ ಮೇಲಿನ ದೌರ್ಜನ್ಯ ಲಿಂಗಾಧಾರಿತ ದೌರ್ಜನ್ಯ. ಅತ್ಯಾಚಾರ ನಡೆಸುವರು ಯಾವುದೇ ಧರ್ಮಕ್ಕೆ ಸೇರಿದ್ರೂ ಅತ್ಯಾಚಾರಿಗಳೇ ಎಂದು ಆಕ್ರೋಶ ಹೊರಹಾಕಿದ್ರು.

ಸಂಸದ ಪ್ರಜ್ವಲ್​ ರೇವಣ್ಣ ಮಾಡಿದ್ದು ಭಾರತ ಇತಿಹಾಸದಲ್ಲೇ ಅತ್ಯಂತ ಕ್ರೌರ್ಯವಾದ ಘಟನೆ. ಇವರು ಮಾಡಿದ ದೌರ್ಜನ್ಯ ಯಾವ ಜನಪ್ರತಿನಿಧಿ ಕೂಡ ಮಾಡಿಲ್ಲ. ಅತ್ಯಾಚಾರಕ್ಕೆ ಒಳಗಾದ ಸಾವಿರಾರು ಹೆಣ್ಣುಮಕ್ಕಳು ಧ್ವನಿ ಇಲ್ಲದವರು. ಅವರ ಪರವಾಗಿ ನಾವು ಧನಿ ಎತ್ತುತ್ತಿದ್ದೇವೆ. ಎಸ್​​ಐಟಿಯವ್ರು ಪ್ರಜ್ವಲ್​ ರೇವಣ್ಣನಿಗೆ ಸರಿಯಾದ ಶಿಕ್ಷೆ ನೀಡಬೇಕು. ಅತ್ಯಾಚಾರಕ್ಕೆ ಒಳಗಾದವರಲ್ಲಿ ಜೆಡಿಎಸ್​ ಮಹಿಳಾ ಕಾರ್ಯಕರ್ತರು ಇದ್ದಾರೆ. ಅಡಿಗೆ ಕೆಲಸ ಮಾಡೋ ಅಜ್ಜಿಯನ್ನು ಬಿಟ್ಟಿಲ್ಲ. ಇಂತಹ ರಾಕ್ಷಸನಿಗೆ ಶಿಕ್ಷೆಯಾಗಲಿ. ಇದು ಬೇರೆಯವರಿಗೆ ಒಂದು ಪಾಠ ಆಗಬೇಕು ಎಂದು ಭವ್ಯ ನರಸಿಂಹಮೂರ್ತಿ ಕಿಡಿಕಾರಿದ್ರು.

ಇದನ್ನೂ ಓದಿ: ಕೊನೆಗೂ ಹೊಳೆನರಸೀಪುರದಲ್ಲಿ ದೂರು ದಾಖಲಿಸಿದ ಸಂತ್ರಸ್ತೆ; SIT ತನಿಖೆಗೆ ಅಧಿಕೃತ ಆದೇಶ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment