/newsfirstlive-kannada/media/post_attachments/wp-content/uploads/2024/12/JOB_BHEL.jpg)
ಖಾಲಿ ಇರುವ ಉದ್ಯೋಗಗಳನ್ನು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಹೆಚ್ಇಎಲ್) ಭರ್ತಿ ಮಾಡುತ್ತಿದೆ. ಈ ಸಂಬಂಧ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಪ್ಲೇ ಮಾಡಬಹುದು. ವಿಜ್ಞಾನ ವಿಭಾಗದಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದವರಿಗೆ ಈ ಉದ್ಯೋಗಗಳಿಗೆ ಅವಕಾಶವಿದೆ.
ಬಿಹೆಚ್ಇಎಲ್ ಸಂಸ್ಥೆಯು FTA ಗ್ರೇಡ್ II (AUSC) ಹುದ್ದೆಗೆ ನೇಮಕಾತಿ ಮಾಡುತ್ತಿದೆ. ಈ ಹುದ್ದೆಗಳಿಗೆ ಬೇಕಾದ ಅರ್ಹತೆ, ಅರ್ಜಿ ಶುಲ್ಕ, ವೇತನ ಶ್ರೇಣಿ, ಹುದ್ದೆಯ ಸ್ಥಳ, ಆಯ್ಕೆ ಪ್ರಕ್ರಿಯೆ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿ ನೀಡಲಾಗಿದ್ದು ಗಮನಿಸಿ. ಇನ್ನು ಈ ಕೆಲಸಗಳಿಗೆ ಪರೀಕ್ಷೆ ಇರುವುದಿಲ್ಲ. ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಹುದ್ದೆಗೆ ನೇಮಕ ಮಾಡಲಾಗುತ್ತದೆ.
ಅರ್ಜಿ ಶುಲ್ಕ- ಇರುವುದಿಲ್ಲ
ಉದ್ಯೋಗದ ಹೆಸರು- FTA Grade-II (AUSC)
ಒಟ್ಟು ಹುದ್ದೆಗಳು= 05
/newsfirstlive-kannada/media/post_attachments/wp-content/uploads/2024/12/JOBS_BHEL.jpg)
ವಿದ್ಯಾರ್ಹತೆ-
- BE/ BTech/ B.Sc
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಮತ್ತು ಕನಿಷ್ಠ ಎರಡು ವರ್ಷಗಳ ಕಾಲ ಕೆಲಸದ ಅನುಭವ ಇರಬೇಕು.
ವಯಸ್ಸಿನ ಮಿತಿ
18 ವರ್ಷದಿಂದ 34 ವರ್ಷಗಳು
ಆಯ್ಕೆ ಪ್ರಕ್ರಿಯೆ ಹೇಗೆ.?
ಯಾವುದೇ ಪರೀಕ್ಷೆ, ಟೆಸ್ಟ್ ಇರುವುದಿಲ್ಲ
ಸಂದರ್ಶನದ ಮೂಲಕ ಆಯ್ಕೆ
ವೇತನ ಶ್ರೇಣಿ- 84,000 ರೂಪಾಯಿಗಳು
ಅರ್ಜಿ ಸಲ್ಲಿಸುವುದು ಹೇಗೆ..?
ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಬಳಿಕ recruitment ಎನ್ನುವುದನ್ನ ಕ್ಲಿಕ್ ಮಾಡಿ BHEL ಉದ್ಯೋಗಗಳ ಅಧಿಸೂಚನೆಯ ಮೇಲೆ ಕ್ಲಿಕ್ ಮಾಡಬೇಕು. ಹಾಗೇ ಕೆಳಗೆ ಸ್ಕ್ರಾಲ್ ಮಾಡಿ, ಉದ್ಯೋಗಕ್ಕೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ. ಯಾವುದೇ ತಪ್ಪುಗಳಿಲ್ಲದೆ ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಸಬ್ಮೀಟ್ ಮಾಡಿ. ಈ ವೇಳೆ ಅರ್ಜಿ ಸಲ್ಲಿಸುವ ಮೊದಲು ಕೊನೆಯ ದಿನಾಂಕ ನೆನಪಿಡಿ.
ಅನ್ಲೈನ್ ಅಪ್ಲೇ ಲಿಂಕ್-
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ- 09 ಡಿಸೆಂಬರ್ 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ