BHEL ಅಲ್ಲಿ 500ಕ್ಕೂ ಅಧಿಕ ಉದ್ಯೋಗಗಳು.. 10th, ಐಟಿಐ ಪಾಸ್ ಆಗಿದ್ರೆ ಅಪ್ಲೇ ಮಾಡಬಹುದು

author-image
Bheemappa
CISF ನಲ್ಲಿ 1,161 ಉದ್ಯೋಗಗಳು.. SSLC ಪಾಸ್ ಆಗಿದ್ರೆ ಈ  ಖಾಲಿ ಹುದ್ದೆಗಳಿಗೆ ಪ್ರಯತ್ನಿಸಿ
Advertisment
  • ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ ಯಾವಾಗ..?
  • ಈ ಉದ್ಯೋಗಗಳಿಗೆ ಮಾಸಿಕ ವೇತನ ಶ್ರೇಣಿ ಎಷ್ಟು ಇರುತ್ತೆ?
  • ಬಿಹೆಚ್​ಇಎಲ್ ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿ ಇದೆ

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌ (ಬಿಹೆಚ್​ಇಎಲ್)ಗೆ ಹೊಸ ಉದ್ಯೋಗಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಈ ಉದ್ಯೋಗಗಳಿಗೆ ಆನ್​​ಲೈಲ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಕರ್ನಾಟಕ, ತಮಿಳುನಾಡು, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದಲ್ಲಿ ಇರುವ ಸಂಸ್ಥೆಯ ಇಲಾಖೆಗಳಿಗೆ ಆಯ್ಕೆ ಆದ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತಿದೆ.

ಬಿಹೆಚ್​ಇಎಲ್ ಗ್ರೇಡ್​-4 ವಿಭಾಗದ ಉದ್ಯೋಗಗಳನ್ನು ಭರ್ತಿ ಮಾಡಲು ಯೋಜಿಸಲಾಗಿದೆ. ಇದಕ್ಕಾಗಿ ಈಗಾಗಲೇ ನೋಟಿಫಿಕೇಶನ್ ಅನ್ನು ಬಿಹೆಚ್​ಇಎಲ್ ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವವರು ಈ ಕೆಲಸಗಳಿಗೆ ಪ್ರಯತ್ನ ಮಾಡಬಹುದು. ಹುದ್ದೆಯ ಜೊತೆಗೆ ಉತ್ತಮ ಮಟ್ಟದ ಮಾಸಿಕ ವೇತನ ಶ್ರೇಣಿ ಕೂಡ ಇದೆ.

ಒಟ್ಟು ಎಷ್ಟು ಉದ್ಯೋಗಗಳು ಇವೆ?

515 ಉದ್ಯೋಗಗಳು

ಉದ್ಯೋಗದ ಹೆಸರು- Artisans Grade- IV (ಕುಶಲಕರ್ಮಿಗಳು)

ಕೆಲಸ ಮಾಡುವ ಸ್ಥಳ-
ಕರ್ನಾಟಕ, ತಮಿಳುನಾಡು, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶ

ಇದನ್ನೂ ಓದಿ: ಸರ್ಕಾರಿ ಕೆಲಸ ಹುಡುಕುತ್ತಿದ್ರೆ ಇಲ್ಲಿದೆ ಸುವರ್ಣಾವಕಾಶ.. 2 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ

publive-image
ಮಾಸಿಕ ವೇತನ ಶ್ರೇಣಿ- 29,500 ಇಂದ 65,000 ರೂಪಾಯಿಗಳು

ಶೈಕ್ಷಣಿಕ ವಿದ್ಯಾರ್ಹತೆ
SSLC, ITI

ವಯಸ್ಸಿನ ಮಿತಿ ಎಷ್ಟು?
32 ವರ್ಷದ ಒಳಗಿನ ಅಭ್ಯರ್ಥಿಗಳು

ಅರ್ಜಿ ಶುಲ್ಕ ಎಷ್ಟು?

  • ಎಸ್​ಸಿ, ಎಸ್​​ಟಿ ಮಾಜಿ ಸೈನಿಕರು- 472 ರೂಪಾಯಿ
  • ಯುಆರ್, ಇಡಬ್ಲುಎಸ್​, ಒಬಿಸಿ- 1,072 ರೂಪಾಯಿ
  • ಆನ್​ಲೈನ್ ಮೂಲಕ ಹಣ ಪಾವತಿಸಬೇಕು

ಆಯ್ಕೆ ಪ್ರಕ್ರಿಯೆ ಹೇಗೆ?

  • ಕಂಪ್ಯೂಟರ್ ಬೇಸಡ್ ಟೆಸ್ಟ್
  • ಸ್ಕಿಲ್ ಟೆಸ್ಟ್​
  • ದಾಖಲಾತಿ ಪರಿಶೀಲನೆ
  • ಸಂದರ್ಶನ

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭದ ದಿನಾಂಕ- 16 ಜುಲೈ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 12 ಆಗಸ್ಟ್ 2025

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment