newsfirstkannada.com

ಗೋವಾ ಬದಲು ಅಯೋಧ್ಯೆಯಲ್ಲಿ ಹನಿಮೂನ್​​.. ಗಂಡನಿಂದ ಡಿವೋರ್ಸ್​ ಕೇಳಿದ ಹೆಂಡತಿ!

Share :

Published January 25, 2024 at 7:12pm

Update January 25, 2024 at 7:13pm

  10 ದಿನಗಳ ಪ್ರವಾಸ ಮುಗಿಸಿ ಮನೆಗೆ ಬಂದವಳು ಸೀದಾ ಹೋಗಿದ್ದು ಎಲ್ಲಿಗೆ?

  ಐದು ತಿಂಗಳ ಹಿಂದೆ ಅದ್ಧೂರಿಯಾಗಿ ಮದುವೆಯಾಗಿದ್ದ ನೂತನ ದಂಪತಿ

  ರಾಮಮಂದಿರ ಉದ್ಘಾಟನೆಗೆ ಮುನ್ನವೇ ಅಯೋಧ್ಯೆಗೆ ಹೋದ ಪತಿ, ಪತ್ನಿ!

ಭೋಪಾಲ್: ಐದು ತಿಂಗಳ ಹಿಂದೆ ವಿವಾಹವಾದ ಮಹಿಳೆಯೊಬ್ಬರು ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿರೋ ವಿಚಿತ್ರ ಘಟನೆ ನಡೆದಿದೆ. ಪತಿ ತನ್ನನ್ನು ಹನಿಮೂನ್​ಗೆಂದು ಗೋವಾಗೆ ಕರೆದುಕೊಂಡು ಹೋಗುತ್ತೇನೆ ಎಂದು ಭರವಸೆ ನೀಡಿ, ಅಯೋಧ್ಯೆ ಹಾಗೂ ವಾರಣಾಸಿಯ ತೀರ್ಥ ಕ್ಷೇತ್ರ ಯಾತ್ರೆಗಳಿಗೆ ಕರೆದುಕೊಂಡು ಹೋಗಿದ್ದಾನೆ. ಇಷ್ಟಕ್ಕೆ ಕೋಪಗೊಂಡ ಪತ್ನಿ ಪತಿಗೆ ಶಾಕ್​ ಕೊಟ್ಟಿದ್ದಾಳೆ.

ಇದನ್ನು ಓದಿ: ಟಿ20 ವಿಶ್ವಕಪ್​​.. ದ್ರಾವಿಡ್​​, ರೋಹಿತ್​ ಶರ್ಮಾಗೆ ವಾರ್ನಿಂಗ್​ ಕೊಟ್ಟ ದಿನೇಶ್​ ಕಾರ್ತಿಕ್​

ಹೌದು, ಗೋವಾಗೆ ಹೋಗುತ್ತೇವೆ ಎಂದು ಕನಸ್ಸು ಕಂಡ ಹೆಂಡತಿ ಧಾರ್ಮಿಕ ಸ್ಥಳಗಳನ್ನು ನೋಡಿ ಕಕ್ಕಾಬಿಕ್ಕಿಯಾಗಿದ್ದಳು. ಈ ದಂಪತಿ ಕಳೆದ ಆಗಸ್ಟ್ 2023ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಳಿಕ ಹನಿಮೂನ್​ಗೆ ಹೋಗಬೇಕೆಂದು ಪ್ಲಾನ್​ ಮಾಡಿಕೊಂಡಿದ್ದರು. ಆಗ ಪತಿಯು ನಿನ್ನನ್ನು ಗೋವಾಗೆ ಕರೆದುಕೊಂಡು ಹೋಗುತ್ತೇನೆ ಅಂತಾ ಹೇಳಿದ್ದಾರೆ. ಆದರೆ ಪತ್ನಿಗೆ ಗೊತ್ತಾಗದ ಹಾಗೆ ಅಯೋಧ್ಯೆ ಹಾಗೂ ವಾರಣಾಸಿಗೆ ವಿಮಾನದ ಟಿಕೆಟ್ ಬುಕ್ ಮಾಡಿದ್ದಾನೆ. ಇನ್ನು ವಿಮಾನದಿಂದ ಇಳಿದ ಮೇಲೆ ಪತ್ನಿ ಶಾಕ್​ ಆಗಿದ್ದಾಳೆ. ಆದರೆ ಹೆಂಡತಿ ಅಲ್ಲಿ ಏನನ್ನೂ ಮಾತಾಡದೇ 10 ದಿನಗಳ ಪ್ರವಾಸ ಮುಗಿಸಿ ಮನೆಗೆ ಬಂದವಳು ನೇರವಾಗಿ ಕೋರ್ಟ್‌ಗೆ ಹೋಗಿದ್ದಾಳೆ. ಪತಿ ಐ.ಟಿ. ಉದ್ಯಮ ವಲಯದಲ್ಲಿ ಕೆಲಸ ಮಾಡುತ್ತಿದ್ದ. ಜೊತೆಗೆ ಉತ್ತಮ ಸಂಬಳ ಪಡೆಯುತ್ತಿದ್ದಾನೆ. ಪತ್ನಿ ಕೂಡ ನೌಕರಿಯಲ್ಲಿದ್ದು, ಉತ್ತಮ ಸಂಪಾದನೆ ಇದೆಯಂತೆ.

ಈ ವಿಚಿತ್ರ ಘಟನೆ ನಡೆದಿದ್ದು ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ. ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಮುನ್ನವೇ ಜನವರಿ 19ರಂದೇ ಅಯೋಧ್ಯೆಗೆ ಹೋಗಿ ವಾಪಸ್ ಬಂದ ಬಳಿಕ ತನ್ನ ಪತಿ ವಿರುದ್ಧ ಕೋಪಗೊಂಡು ನ್ಯಾಯಾಲಯಕ್ಕೆ ಹೋಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಹನಿಮೂನ್‌ಗೆ ಗೋವಾ ಬದಲು ಅಯೋಧ್ಯೆಗೆ ಕರೆದುಕೊಂಡು ಹೋಗಿದ್ದು ಮಾತ್ರವಲ್ಲ, ಇನ್ನೂ ಹಲವು ಕಾರಣಗಳನ್ನೂ ಈಕೆ ಕೊಟ್ಟಿದ್ದಾಳಂತೆ. ನನ್ನ ಪತಿರಾಯ ನನಗಿಂತಾ ಹೆಚ್ಚಾಗಿ ಆತನ ತಂದೆ ತಾಯಿ ಹಾಗೂ ಕುಟುಂಬಸ್ಥರ ಕಾಳಜಿ ಮಾಡುತ್ತಾರೆ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೋವಾ ಬದಲು ಅಯೋಧ್ಯೆಯಲ್ಲಿ ಹನಿಮೂನ್​​.. ಗಂಡನಿಂದ ಡಿವೋರ್ಸ್​ ಕೇಳಿದ ಹೆಂಡತಿ!

https://newsfirstlive.com/wp-content/uploads/2024/01/casual-picture.jpg

Load More