/newsfirstlive-kannada/media/post_attachments/wp-content/uploads/2024/11/Fake-Police.jpg)
ಭೋಪಾಲ್​ನ ಟಿಟಿ ನಗರದಲ್ಲಿ ಪೊಲೀಸರು ಪೊಲೀಸರ ಸಮವಸ್ತ್ರವನ್ನು ಹಾಕಿಕೊಂಡು ಅಡ್ಡಾಡುತ್ತಿದ್ದ ಯುವತಿಯನ್ನು ಬಂಧಿಸಿದ್ದಾರೆ. ಯುವತಿ ಹೆಚ್ಚುವರಿ ಪೊಲೀಸ್ ಆಯುಕ್ತರ ಸಮವಸ್ತ್ರವನ್ನು ಧರಿಸಿಕೊಂಡು ಮಾರುಕಟ್ಟೆಯಲ್ಲಿ ಓಡಾಡುತ್ತಿದ್ದಳು ಈ ವೇಳೆ ಸಂಶಯಗೊಂಡ ಪೊಲೀಸರು ಆಕೆಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಅಸಲಿ ಮಾಹಿತಿ ಹೊರ ಬಿದ್ದಿದೆ.
ವಿಚಾರಣೆ ವೇಳೆ ಯುವತಿಯು ಬಾಯಿಬಿಟ್ಟ ಸತ್ಯಗಳನ್ನು ಕೇಳಿ ಅಸಲಿಗೆ ಪೊಲೀಸರಿಗೆ ಗಾಬರಿಯಾಗಿದೆ. ನಾನು ನಿರುದ್ಯೋಗಿ ನಾನು ಪೊಲೀಸ್ ಆಗಿದ್ದೇನೆ ಎಂದು ಹೇಳಿ ನನ್ನ ತಾಯಿಯನ್ನು ಖುಷಿಪಡಿಸಲು ಈ ನಾಟಕ ಮಾಡಿದ್ದೇನೆ. ನನಗೆ ಟಿಟಿ ನಗರ ಪೊಲೀಸ್ ಠಾಣೆಯಲ್ಲಿ ಕೆಲಸ ಸಿಕ್ಕಿದ್ದು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಹೇಳಿ ನನ್ನ ತಾಯಿಯನ್ನು ನಂಬಿಸಿದ್ದೇನೆ ಎಂದು ಹೇಳಿದ್ದಾಳೆ. ಪೊಲೀಸರು ಯುವತಿಯ ವಿರುದ್ಧ ಬಿಎನ್​ಎಸ್​ ಸೆಕ್ಷನ್ 205ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ:ಆಹಾ ಎಂಥಾ ಮದುವೆ.. ತೆಂಗಿನಕಾಯಿ ವ್ಯಾಪಾರಿಯ ಊಟೋಪಚಾರಕ್ಕೆ ದಂಗಾದ ನೆಟ್ಟಿಗರು; ವಿಡಿಯೋ ಮಿಸ್ ಮಾಡ್ದೇ ನೋಡಿ!
ಪೊಲೀಸರು ನೀಡಿದ ಮಾಹಿತಿ ಪ್ರಕಾರ ಶುಕ್ರವಾರ ಸಂಜೆ ಟಿಟಿ ನಗರ ಮಾರುಕಟ್ಟೆಯಲ್ಲಿ ಎಎಸ್​ಪಿ ಯುನಿಫಾರ್ಮ್​ ಧರಿಸಿ ಯುವತಿಯೊಬ್ಬಳು ಓಡಾಡುತ್ತಿರುವುದನ್ನು ಠಾಣೆಯ ಮಹಿಳಾ ಕಾನ್ಸ್​ಟೇಬಲ್ ಒಬ್ಬರು ನೋಡಿದ್ದಾರೆ. ಕೊನೆಗೆ ಯುವತಿ 28 ವರ್ಷದ ಶಿವಾನಿ ಎಂದು ಗುರುತಿಸಲಾಗಿದೆ. ಆದರೂ ಲೇಡಿ ಕಾನ್ಸ್​ಟೇಬಲ್ ಆಕೆಯನ್ನು ಕಂಡು ಸೆಲ್ಯೂಟ್ ಕೂಡ ಮಾಡಿದ್ದಾರೆ. ಈ ವೇಳೆ ಆಕೆಯ ವರ್ತನೆಯನ್ನು ಕಂಡು ಕಾನ್ಸ್​ಟೇಬಲ್​ಗೆ ಸಂಶಯ ಬಂದಿದೆ. ಯುವತಿ ಧರಿಸಿದ್ದ ಯುನಿಫಾರ್ಮ್​ನಲ್ಲಿ ನೇಮ್​ಪ್ಲೆಟ್ ಆಕೆಯ ವರ್ತನೆ ಎಲ್ಲವೂ ಕೂಡ ಸಂಶಯ ಮೂಡಿಸಿದೆ. ಕೂಡಲೇ ಟಿಟಿ ನಗರ ಪೊಲೀಸ್ ಠಾಣೆಗೆ ಸುದ್ದಿಯನ್ನು ಮುಟ್ಟಿಸಿದ್ದಾರೆ. ನಂತರ ಶಿವಾನಿಯನ್ನು ಪ್ರಶ್ನಿಸಿದಾಗ ನಾನು 2020ರಲ್ಲಿ ಪೊಲೀಸ್ ಫೋರ್ಸ್ ಸೇರಿದ್ದೇನೆ ಕಳೆದ ಎರಡು ವರ್ಷಗಳ ಹಿಂದೆ ನನಗೆ ಪ್ರಮೋಷನ್ ಆಗಿದೆ ಎಂದೆಲ್ಲಾ ಹೇಳಿದ್ದಾಳೆ. ಇದು ಕೂಡ ಇನ್ನಷ್ಟು ಸಂಶಯವನ್ನು ಮೂಡಿಸಿದೆ.
ಇದನ್ನೂ ಓದಿ:ನೀರಿನ ಬಾಟಲಿಗೆ ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ; ಕ್ಯಾಟರಿಂಗ್ ಸಂಸ್ಥೆಗೆ ಬಿದ್ದ ದಂಡವೆಷ್ಟು ಗೊತ್ತಾ?
ಟಿಟಿ ನಗರದ ಎಸ್​ಹೆಚ್​ಓ ಬದೋರಿಯಾವ ಅವರು ಹೇಳುವ ಪ್ರಕಾರ ಶಿವಾನಿ ಚೌಹಾಣ್ ಇಂದೋರ್ ಮೂಲದವಳು. 2019ರಿಂದಲೂ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರಂತೆ. ಈ ಹಿಂದೆ ಎಂಪಿಪಿಸಿ ಪರೀಕ್ಷೆಯನ್ನು ಕೂಡ ಬರೆದು ಫೇಲ್ ಆಗಿದ್ದರು. ಈ ವೇಳೆ ಅವರ ತಾಯಿ ಆರೋಗ್ಯ ತೀವ್ರ ಹಾಳಾಗಿದೆ. ಅವಳ ತಾಯಿಯಿಗೆ ಆತ್ಮಸ್ಥೈರ್ಯ ತುಂಬಲು ಅಂತ ನಾನು ಡಿಎಸ್​ಪಿಯಾಗಿ ಪೊಲೀಸ್ ಇಲಾಖೆ ಸೇರಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಇದಾದ ಬಳಿಕ ಪೊಲೀಸ್ ಯುನಿಫಾರ್ಮ ಖರೀದಿಸಿ ಆಗಾಗ ಅದನ್ನು ಧರಿಸಿ ಆಚೆ ಬಂದು ತಾಯಿಗೆ ಸಂಶಯ ಬಾರದಂತೆ ನೋಡಿಕೊಂಡಿದ್ದಾರೆ.
ಶುಕ್ರವಾರ ಇಂದೋರ್​ನಿಂದ ಭೂಪಾಲ್​ಗೆ ತನ್ನ ಸೋದರ ಸಂಬಂಧಿಯೊಂದಿಗೆ ಬಂದ ಯುವತಿ ಅವರನ್ನು ಹೋಟೆಲ್​ನಲ್ಲಿ ಇರಿಸಿ ಮಾರುಕಟ್ಟೆಗೆ ಪೊಲೀಸ್ ಧಿರಿಸಿನಲ್ಲಿ ಬಂದು ಓಡಾಡುತ್ತಿದ್ದಾರೆ. ಯುವತಿಯ ವರ್ತನೆ ಹಾಗೂ ಹಲವು ವಿಚಾರಗಳನ್ನು ಗಮನಿಸಿದಾಗ ಸಂಶಯ ಬಂದು ಅವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಬದೊರಿಯಾ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us