newsfirstkannada.com

×

ತಿರುಪತಿ ಲಡ್ಡು ವಿವಾದಕ್ಕೆ ಟ್ವಿಸ್ಟ್‌.. ಮಹಾಶಾಂತಿ ಬೆನ್ನಲ್ಲೇ ಪ್ರಮಾಣ ಮಾಡಿದ ಭೂಮಲ ಕರುಣಾಕರರೆಡ್ಡಿ!

Share :

Published September 23, 2024 at 8:41pm

    ಮೊದಲಿಗೆ ದೇವಸ್ಥಾನದಲ್ಲಿ ಶಾಂತಿ ಹೋಮ, ಬಳಿಕ ವಾಸ್ತು ಹೋಮ

    ಗೋವಿನ ಸಗಣಿ, ಗಂಜಲ, ಹಾಲು, ಮೊಸರು, ತುಪ್ಪದಿಂದ ಪಂಚಗವ್ಯ ತಯಾರಿ

    ಸಂಜೆ ಕಲ್ಯಾಣಿಯಲ್ಲಿ ಮುಳುಗಿ ಬಂದು ದೇವರ ಹೆಸರಿನಲ್ಲಿ ಪ್ರಮಾಣ

ಕಲಿಯುಗದ ವೈಕುಂಠ, ತಿರುಪತಿ ತಿಮ್ಮಪ್ಪ ದೇವಸ್ಥಾನದ ಲಡ್ಡು ಮೇಲೆಯೇ ಅಪವಾದ ಬಂದಿದೆ. ಆ ಅಪವಾದ, ಅಪಚಾರದಿಂದ ಮುಕ್ತವಾಗಲು ದೇವಸ್ಥಾನದಲ್ಲಿ ವಿವಿಧ ಯಾಗ-ಯಜ್ಞಗಳನ್ನು ಪುರೋಹಿತರು ಮಾಡಿದ್ದಾರೆ. ಇಂದು ಬೆಳಗ್ಗೆ 6 ಗಂಟೆಯಿಂದ ಸತತ 4 ಗಂಟೆಗಳ ಕಾಲ ಯಾಗ ಹಾಗೂ ಪಂಚಗವ್ಯ ಪ್ರೋಕ್ಷಣೆ ಮೂಲಕ ದೇಗುಲದ ಶುದ್ಧೀಕರಣ ಮಾಡಿದ್ದಾರೆ.

ಇದನ್ನೂ ಓದಿ: ಹೇ ಕೃಷ್ಣ.. ತಿರುಪತಿ ಬೆನ್ನಲ್ಲೇ ಮಥುರಾ ದೇವಾಲಯದ ಪ್ರಸಾದದ ಮೇಲೂ ಅನುಮಾನ! 

ತಿರುಮಲ ಸನ್ನಿಧಿಯಲ್ಲಿ ಮಹಾಶಾಂತಿ ಹೋಮ ಆಯೋಜನೆ
ಯಾಗದ ಬಳಿಕ ಪಂಚಗವ್ಯದಿಂದ ದೇವಸ್ಥಾನದ ಶುದ್ಧೀಕರಣ
ಕೋಟಿ ಕೋಟಿ ಭಕ್ತರು ಶ್ರದ್ಧಾಭಕ್ತಿಯಿಂದ ಪೂಜಿಸಿ ಆರಾಧಿಸಿ ಆ ತಿಮ್ಮಪ್ಪನ ಪ್ರಸಾದವೆಂದು ಸ್ವೀಕರಿಸುವ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಕಲಬೆರಕೆ ವಿಚಾರ ವ್ಯಾಪಕ ಚರ್ಚೆ, ಆಕ್ರೋಶಕ್ಕೆ ಕಾರಣವಾಗಿದೆ. ಈ ಸುದ್ದಿ ತಿಮ್ಮಪ್ಪನ ಭಕ್ತರಿಗೆ ಬರಸಿಡಿಲೇ ಅಪ್ಪಳಿಸುವಂತೆ ಮಾಡಿದೆ. ಹೀಗಾಗಿ ಭಕ್ತರಲ್ಲಿ ನಂಬಿಕೆ ಮೂಡಿಸುವ ಸಲುವಾಗಿ ಇಂದು ದೇವಸ್ಥಾನದಲ್ಲಿ ಟಿಟಿಡಿ ವತಿಯಿಂದ ಮಹಾಶಾಂತಿ ಹೋಮ ಮಾಡಲಾಗಿದೆ. ಆಂಧ್ರಪ್ರದೇಶದ ವಿವಿಧ ಪುರೋಹಿತರು ಈ ಮಹಾಶಾಂತಿ ಯಾಗ ನಡೆಸಿದ ಬಳಿಕ ಪಂಚಗವ್ಯವವನ್ನು ಸಂಪ್ರೋಕ್ಷಿಸಿ ದೇವಸ್ಥಾನದ ಶುದ್ಧೀಕರಣ ಮಾಡಿದ್ದಾರೆ.

ಆಗಮ ಶಾಸ್ತ್ರಜ್ಞರ ಸಲಹೆ ಮೇರೆಗೆ ಈ ಶಾಂತಿ ಹೋಮವನ್ನು ಇಂದು ಬೆಳಗ್ಗೆ 6 ರಿಂದ 10 ಗಂಟೆವರೆಗೆ ದೇವಾಲಯದ ಬಳಿ ಇರುವ ಬಂಗಾರ ಬಾವಿ ಯಾಗ ಶಾಲೆಯಲ್ಲಿ ನೆರವೇರಿಸಲಾಗಿದೆ. ವಾಸ್ತು ಕುಂಡ, ಸಭ್ಯಂ ಹೋಮ‌ ಕುಂಡ, ಪೌಣರಿಕಂ ಹೋಮ ಕುಂಡ ಎಂಬ 3 ಹೋಮ ಕುಂಡಗಳನ್ನು ರಚಿಸಿ ದೇವಾಲಯದ ಮುಖ್ಯ ಅರ್ಚಕರು ಯಾಗ ನಡೆಸಿದ್ದಾರೆ. ಹಸುವಿನ ತುಪ್ಪವನ್ನು ಮಂತ್ರ ಹೇಳೋ ಮೂಲಕ ಹೋಮಕುಂಡದಲ್ಲಿ ಹಾಕಿದ್ರು. ಬಳಿಕ ಪಂಚಗವ್ಯವನ್ನು ಗರ್ಭಗುಡಿ, ಲಡ್ಡು ಹಾಗೂ ಅನ್ನ ಪ್ರಸಾದ ತಯಾರಿ ಜಾಗ ಸೇರಿ ತುಪ್ಪ ಬಳಸುವ ದೇಗುಲದ ಎಲ್ಲ ಕಡೆ ಅರ್ಚಕರು ಸಂಪ್ರೋಕ್ಷಣೆ ಮಾಡಿದ್ರು. ಬಳಿಕ ದೇಗುಲದ ಸುತ್ತ ದರ್ಬೆ ಪಂಜಿನಿಂದ ಮೆರವಣಿಗೆ ಮಾಡಿ ಗಂಗಾಜಲದಿಂದ ಶುದ್ಧೀಕರಣ ಮಾಡಿದ್ದಾರೆ. ನಂತರ ದೇವಸ್ಥಾನಕ್ಕೆ ದೃಷ್ಟಿ ತೆಗೆದು ದೃಷ್ಟಿ ದೋಷ ಪೂಜೆ ಮಾಡುವ ಮೂಲಕ ಶುದ್ಧೀಕರಣ ಕಾರ್ಯವನ್ನು ಸಂಪನ್ನಗೊಳಿಸಿದ್ದಾರೆ.

ಮಹಾಶಾಂತಿ ಯಾಗ ಹೇಗಿತ್ತು? 

ಹೋಮ ಸಂಪನ್ನ ಬಳಿಕ ದೇವಸ್ಥಾನದಲ್ಲಿ ಪಂಚಗವ್ಯ ಸಂಪ್ರೋಕ್ಷಣೆ

ಅನ್ನ ಪ್ರಸಾದ, ಲಡ್ಡು ತಯಾರಿಕೆ ಸ್ಥಳ, ಗೋದಾಮು ಸೇರಿ ಎಲ್ಲೆಡೆ ಪ್ರೋಕ್ಷಣೆ
ತಿರುಪತಿ ದೇವಾಲಯದ ಸುತ್ತ ದರ್ಬೆ ಪಂಜಿನಿಂದ ಮೆರವಣಿಗೆ
ದರ್ಬೆ ಬೆಂಕಿಯಿಂದ ಸುತ್ತು ಹಾಕಿ ಗಂಗಾಜಲದಿಂದ ಶುದ್ಧೀಕರಣ
ದೇವಾಲಯದ ಆಗಮಿಕ ಪಂಡಿತರು, ಅರ್ಚಕರಿಂದ ಶುದ್ಧೀಕರಣ ಯಾಗ
ನಂತರ ತಿಮ್ಮಪ್ಪನ ದೇವಸ್ಥಾನಕ್ಕೆ ದೃಷ್ಟಿ ತೆಗೆದು ದೃಷ್ಟಿ ದೋಷ ಪೂಜೆ

ತಿರುಮಲದಲ್ಲಿ ಸಂಜೆ ಹೈಡ್ರಾಮಾ!
ಬೆಳಗ್ಗೆ ದೇವಸ್ಥಾನದ ಶುದ್ಧೀಕರಣ ನಡೆದ್ರೆ ಸಂಜೆಯಾಗುತ್ತಲೇ ತಿಮ್ಮಪ್ಪನ ದೇಗುಲದಲ್ಲಿ ಹೈಡ್ರಾಮಾ ನಡೆದಿದೆ. ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ಮಾಜಿ ಅಧ್ಯಕ್ಷ ಭೂಮಲ ಕರುಣಾಕರರೆಡ್ಡಿ ಅವರು ಇಂದು ತಿರುಮಲಕ್ಕೆ ಬಂದು ಕಲ್ಯಾಣಿಯಲ್ಲಿ ಮುಳುಗಿ ಬಂದು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದ್ದಾರೆ. ದೇವರ ಪ್ರಸಾದದಲ್ಲಿ ನಾನು ಏನಾದರೂ ತಪ್ಪು ಮಾಡಿದ್ದರೆ, ನನ್ನ, ನನ್ನ ಕುಟುಂಬದ ಜೀವವೇ ಹೋಗಲಿ ಎಂದು ಪ್ರಮಾಣ ಮಾಡಿದ್ದಾರೆ.
ತಿರುಮಲ ದೇವಸ್ಥಾನಕ್ಕೆ ತೆರಳಿದ ಭೂಮಲ ಕರುಣಾಕರರೆಡ್ಡಿ, ಆಲಗಾರತಿ ಹಿಡಿದು ದೇವರಿಗೆ ಪೂಜೆ ಸಲ್ಲಿಸಿ ಪ್ರಮಾಣ ಮಾಡಿದರು. ಆಗ ಮಧ್ಯಪ್ರವೇಶಿಸಿದ ಪೊಲೀಸರು ಭೂಮಲ ಕರುಣಾಕರರೆಡ್ಡಿಯನ್ನು ಅಲ್ಲಿಂದ ಬಲವಂತವಾಗಿ ಕಳುಹಿಸಿದರು. ಪೊಲೀಸರು ನೂಕುನುಗ್ಗಲಿನಲ್ಲೇ ಭೂಮಲ ಕರುಣಾಕರರೆಡ್ಡಿ ಅವರು ಸಿಎಂ ಚಂದ್ರಬಾಬು ನಾಯ್ಡು ಅವರ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಇದನ್ನೂ ಓದಿ: ಕನ್ನಡಿಗರನ್ನು ಕೆಣಕಿ ಉಳಿದವರು ಯಾರಿಲ್ಲ; ಬೆಂಗಳೂರನ್ನ ಲೇವಡಿ ಮಾಡಿ ಕೆಲಸ ಕಳೆದುಕೊಂಡ ರೀಲ್ಸ್ ರಾಣಿ! 

ಯಾರು ಈ ಭೂಮಲ ಕರುಣಾಕರರೆಡ್ಡಿ?
ಭೂಮಲ ಕರುಣಾಕರರೆಡ್ಡಿ ಅವರು ಈ ಹಿಂದೆ ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ TTD ಅಧ್ಯಕ್ಷರಾಗಿದ್ದರು. ತಿರುಪತಿ ಲಡ್ಡು ಅಪವಿತ್ರ ಆಗಿತ್ತು ಎಂಬ ವಿವಾದದ ಹಿನ್ನೆಲೆಯಲ್ಲಿ ಈ ಪ್ರಮಾಣ ಮಾಡಲು ಬಂದಿದ್ದರು. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ಭೂಮಲ ಕರುಣಾಕರರೆಡ್ಡಿ ಪತ್ನಿ ಬೈಬಲ್ ಹಿಡಿದು ಓಡಾಡುತ್ತಿದ್ದರು ಅನ್ನೋ ಆರೋಪ ಮಾಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಿರುಪತಿ ಲಡ್ಡು ವಿವಾದಕ್ಕೆ ಟ್ವಿಸ್ಟ್‌.. ಮಹಾಶಾಂತಿ ಬೆನ್ನಲ್ಲೇ ಪ್ರಮಾಣ ಮಾಡಿದ ಭೂಮಲ ಕರುಣಾಕರರೆಡ್ಡಿ!

https://newsfirstlive.com/wp-content/uploads/2024/09/Tirupati-TTD.jpg

Load More