ಅವರ ಮಕ್ಕಳಿಗೆ ಹೀಗಾಗಿದ್ರೆ ಫೋಟೋ ತೆಗೆಸಿಕೊಳ್ತಿದ್ರಾ? CM, DCM ವಿರುದ್ಧ ಭೂಮಿಕ್ ತಂದೆ ಆಕ್ರೋಶ

author-image
admin
Updated On
ಅವರ ಮಕ್ಕಳಿಗೆ ಹೀಗಾಗಿದ್ರೆ ಫೋಟೋ ತೆಗೆಸಿಕೊಳ್ತಿದ್ರಾ? CM, DCM ವಿರುದ್ಧ ಭೂಮಿಕ್ ತಂದೆ ಆಕ್ರೋಶ
Advertisment
  • ಆ್ಯಂಬುಲೆನ್ಸ್ ಇಲ್ಲದೆ ನನ್ನ ಮಗ ಒದ್ದಾಡಿ ಒದ್ದಾಡಿ ಸತ್ತಿದ್ದಾನೆ
  • ಇದು ನನ್ನೊಬ್ಬನ ಕಣ್ಣೀರಲ್ಲ.. 11 ಕುಟುಂಬ ಸದಸ್ಯರ ಕಣ್ಣೀರು
  • ಅವರ ಮಕ್ಕಳು ಮೊಮ್ಮಕ್ಕಳಿಗಾಗಿ ಕಾರ್ಯಕ್ರಮ ಮಾಡಿದ್ರು

ಹಾಸನ: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. RCB ಅಭಿಮಾನಿ ಭೂಮಿಕ್‌ ತಂದೆ ಲಕ್ಷ್ಮಣ್ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಸನದಲ್ಲಿ ಮಗನ ನೆನೆದು ಕಣ್ಣೀರಿಡುತ್ತಿರುವ ಲಕ್ಷ್ಮಣ್ ಅವರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಇಬ್ಬರು ಆ ಸ್ಥಾನದಲ್ಲಿ ಕೂರಲು ಯೋಗ್ಯತೆ ಇಲ್ಲ. ಆ್ಯಂಬುಲೆನ್ಸ್ ಇಲ್ಲದೆ ನನ್ನ ಮಗ ಒದ್ದಾಡಿ ಒದ್ದಾಡಿ ಸತ್ತಿದ್ದಾನೆ. ಅವನ ಸ್ನೇಹಿತ ಕೈ ಕಾಲು ಹಿಡಿದು ಹೇಗೋ ಕರೆದೊಯ್ದಿದ್ದಾನೆ.

ಆ್ಯಂಬುಲೆನ್ಸ್ ಇದ್ದಿದ್ದರೆ ನನ್ನ ಮಗ ಉಳಿತಿರಲಿಲ್ಲವೇ. ಅವರ ಮಕ್ಕಳಿಗೆ ಹೀಗೆ ಆಗಿದ್ರೆ ಅವರು ಫೋಟೊ ತೆಗೆಸಿಕೊಳ್ತಿದ್ರಾ? ಕಪ್ ಹಿಡಿದು ಎಂಜಾಯ್ ಮಾಡ್ತಿದ್ರಾ? ಇದು ನನ್ನೊಬ್ಬನ ಕಣ್ಣೀರಲ್ಲ. ಇದು ಮೃತಪಟ್ಟ 11 ಕುಟುಂಬ ಸದಸ್ಯರ ಕಣ್ಣೀರು.

publive-image

ಯಾರಿಗೂ ಈ ಸ್ಥಿತಿ ಬರೋದು ಬೇಡ. ಅವರ ತಪ್ಪು ಮುಚ್ಚಿಕೊಳ್ಳಲು ಪೊಲೀಸರ ಅಮಾನತು ಮಾಡಿದ್ದಾರೆ. ನಾನು ಮಗನಿಗಾಗಿ ಎಷ್ಟೆಲ್ಲಾ ಕಷ್ಟ ಪಟ್ಟಿದ್ದೆ. ಯಾವ ತಂದೆ ತಾಯಿಯು ಮಕ್ಕಳನ್ನ ಸಾಯಲಿ ಎಂದು ಕಳಿಸಲ್ಲ. ನನ್ನ ಮಗನಿಗೆ ಕ್ರಿಕೆಟ್ ಹುಚ್ಚಿರಲಿಲ್ಲ. ಕ್ರಿಕೆಟ್ ಆಡ್ತಿದ್ದ ಅಷ್ಟೇ.

ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಕೇಸ್​.. ಸಿಐಡಿ ತನಿಖೆ ಬೆನ್ನಲ್ಲೇ ಕೆಎಸ್​ಸಿಎ ಕಾರ್ಯದರ್ಶಿ, ಖಜಾಂಚಿ ದಿಢೀರ್ ರಾಜೀನಾಮೆ 

ನನ್ನ ಹೆಂಡತಿ ಪರಿಸ್ಥಿತಿ ಏನು? ನನ್ನ ಅಣ್ಣನ ಪರಿಸ್ಥಿತಿ ಏನು? ಸರ್ಕಾರವೇ 11 ಜನರನ್ನ ಕೊಲೆ ಮಾಡಿದೆ. ಇವರೇ ದೊಡ್ಡ ಟೆರರಿಸ್ಟ್‌ಗಳಾಗಿದ್ದಾರೆ. ಇಷ್ಟು ಅನಾಹುತ ಆದ ಮೇಲೂ ಇವರು ಫೋಟೋ ತೆಗೆಸಿಕೊಳ್ತಾರಲ್ಲ ಇದು ಎಷ್ಟು ನ್ಯಾಯ. ನಮ್ಮಂತವರ ಮಕ್ಕಳು ಬೀದಿಯಲ್ಲಿ ಸಾಯುತ್ತಿದ್ದರೆ, ಇವರು ಎಂಜಾಯ್ ಮಾಡ್ತಾರೆ. ಅವರ ಮಕ್ಕಳು ಮೊಮ್ಮಕ್ಕಳಿಗಾಗಿ ಕಾರ್ಯಕ್ರಮ ಮಾಡಿದ್ರು. ನಾವು ಹೇಗೆ ಸಮಾಧಾನ ಮಾಡಿಕೊಳ್ಳೋದು ಹೇಳಿ ಎಂದು ಭೂಮಿಕ್ ತಂದೆ ಮಗನ ನೆಗೆದು ಕಣ್ಣೀರಿಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment