/newsfirstlive-kannada/media/post_attachments/wp-content/uploads/2025/02/bhuvanam_gaganam.jpg)
ಫೆಬ್ರುವರಿ 14 ಅಂದರೆ ಪ್ರೇಮಿಗಳ ದಿನಾಚರಣೆ. ಪ್ರೇಮಿಗಳಿಗಾಗಿಯೇ ಇರುವಂತ ವಿಶೇಷವಾದ ದಿನವಾಗಿದೆ. ವಿಶ್ವದೆಲ್ಲೆಡೆ ಪ್ರೇಮಿಗಳು ಒಂದೊಳ್ಳೆ ಗಿಫ್ಟ್ ಕೊಡುವ ಮೂಲಕ ಸಂಭ್ರಮದಿಂದ ಈ ದಿನವನ್ನು ಕಳೆಯುತ್ತಾರೆ. ಇಂತಹ ಸುಮಧುರ ದಿನದಂದು ಸ್ಯಾಂಡಲ್ವುಡ್ನಿಂದ 2 ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ಸಿನಿಮಾಗಳಂತೂ ಪ್ರೇಮಿಗಳಿಗೆ ಸ್ಪೆಷಲ್ ಎನ್ನಬಹುದು.
ಭುವನಂ ಗಗನಂ ಸಿನಿಮಾ ಸೂಪರ್ ಆಗಿದೆ. ಇದರಲ್ಲಿ ಎರಡು ಮಾತಿಲ್ಲ. ಏಕೆಂದರೆ ದುಬೈನಲ್ಲಿನ ಇತ್ತೀಚೆಗೆ ಇದೇ ಸಿನಿಮಾದ ಪ್ರೀಮಿಯರ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಅಲ್ಲಿನ ಕನ್ನಡಿಗರು ಸಿನಿಮಾ ನೋಡಿ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಅದರಂತೆ ಇಂದು ರಾಜ್ಯಾದ್ಯಂತ ಭುವನಂ ಗಗನಂ ಬಿಡುಗಡೆ ಆಗುತ್ತಿದ್ದು ಭರ್ಜರಿ ಓಪನಿಂಗ್ ಪಡೆಯುವ ನಿರೀಕ್ಷೆ ಹೆಚ್ಚು ಇದೆ.
ಗಿರೀಶ್ ಮೂಲಿಮನಿ ನಿರ್ದೇಶನದಲ್ಲಿ ಭುವನಂ ಗಗನಂ ಸಿನಿಮಾದಲ್ಲಿ ಪೃಥ್ವಿ ಅಂಬರ್ ಹಾಗೂ ಪ್ರಮೋದ್ ಅಭಿನಯ ಮಾಡಿದ್ದಾರೆ. ಈ ಸಿನಿಮಾ ಲವ್, ರೋಮ್ಯಾನ್ಸ್, ಕುಟುಂಬದ ಸೆಂಟಿಮೆಂಟ್ ನಡುವಿನ ಕಥಾಹಂದರದಲ್ಲಿ ಎರಡು ಮುಗ್ದ ಮನಸ್ಸುಗಳ ಪಯಣದ ಸಿನಿಮಾವಾಗಿದೆ. ಇನ್ನು ಸಿನಿಮಾದಲ್ಲಿ ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಪರ್ಶ ರೇಖಾ, ಪ್ರಜ್ವಲ್ ಶೆಟ್ಟಿ, ಚೇತನ್ ದುರ್ಗ ನಟಿಸಿದ್ದಾರೆ.
ಭುವನಂ ಗಗನಂ ಸಿನಿಮಾ ಜೊತೆ ರಾಜು ಜೇಮ್ಸ್ ಬಾಂಡ್ ಸಿನಿಮಾ ಕೂಡ ತೆರೆಗೆ ಅಪ್ಪಳಿಸುತ್ತಿದೆ. ಫಸ್ಟ್ ರ್ಯಾಂಕ್ ರಾಜು ಮೂವಿ ಮೂಲಕ ಪ್ರಸಿದ್ಧಿ ಪಡೆದಿದ್ದ ನಟ ಗುರುನಂದನ್ ಅವರು ಮತ್ತೊಮ್ಮೆ ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಗುರುನಂದನ್ ಅವರಿಗೆ ಹುಬ್ಬಳ್ಳಿಯ ಮೃದುಲಾ ಪಟ್ಟಣಶೆಟ್ಟಿ ನಾಯಕಿಯಾಗಿದ್ದಾರೆ. ಈಗಾಗಲೇ ಈ ಸಿನಿಮಾದ ಟ್ರೈಲರ್, ಸಾಂಗ್ಸ್ ಹಿಟ್ ಆಗಿದ್ದು ಮೂವಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುವ ನಿರೀಕ್ಷೆ ಎಲ್ಲ ಇದೆ.
ದೀಪಕ್ ಮಧುವನಹಳ್ಳಿ ಡೈರೆಕ್ಷನ್ನಲ್ಲಿ`ರಾಜು ಜೇಮ್ಸ್ ಬಾಂಡ್ ಮೂವಿ ಮೂಡಿಬಂದಿದೆ. ಕನ್ನಡದ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಕಿರಣ್ ಭರ್ತೂರ್ ಹಾಗೂ ಮಂಜುನಾಥ್ ವಿಶ್ವಕರ್ಮ ಅವರು ಈ ಸಿನಿಮಾಕ್ಕೆ ಹಣ ಹೂಡಿದ್ದಾರೆ. ಸಿನಿಮಾದ ನಾಯಕ ಜೇಮ್ಸ್ ಬಾಂಡ್ ಹೇಗೆ ಆಗುತ್ತಾನೆ ಎನ್ನುವುದೇ ಸಿನಿಮಾದ ಎಳೆಯಾಗಿದೆ. ಸಿನಿ ಪ್ರೇಕ್ಷಕರಿಗೆ ಈ ಸಿನಿಮಾ ಪಕ್ಕಾ ಮನರಂಜನೆ ನೀಡುತ್ತದೆ. ಅದರಲ್ಲಿ ಪ್ರೇಮಿಗಳಿಗೂ ಖುಷಿ ಕೊಡುವ ದೃಶ್ಯಗಳು ಕೂಡ ಇವೆ.
ಇದನ್ನೂ ಓದಿ: ಮಧೋಳದಲ್ಲಿ ಮಧ್ಯರಾತ್ರಿ ದೊಣ್ಣೆ ಹಿಡಿದು ನಾರಿಯರು ಗಸ್ತು.. ಹೆದರುವ ಮಾತೇ ಇಲ್ಲ.. ಕಾರಣ ಏನು?
ಸ್ಯಾಂಡಲ್ವುಡ್ ಸಿನಿಮಾಗಳ ಜೊತೆ ಟಾಲಿವುಡ್, ಬಾಲಿವುಡ್ ಸಿನಿಮಾಗಳು ಕೂಡ ಇಂದು ತೆರೆಗೆ ಅಪ್ಪಳಿಸುತ್ತಿವೆ. ವಿಶ್ವಕ್ ಸೇನ್ ನಟನೆಯ ಲೈಲಾ, ತೆಲುಗಿನ ಹಿರಿಯ ನಟ ಬ್ರಹ್ಮನಂದಂ ಅವರ ಮಗ ರಾಜ ಗೌತಮ್ ಅಭಿನಯದ ಬ್ರಹ್ಮ ಆನಂದಂ, ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ನಟನೆಯ ಚಾವಾ ಸಿನಿಮಾಗಳು ಕೂಡ ಇಂದು ಎಲ್ಲೆಡೆ ರಿಲೀಸ್ ಆಗುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ