ಆರ್​​ಸಿಬಿಗೆ ಬಂತು ಆನೆಬಲ; ಫ್ರಾಂಚೈಸಿ ಭರವಸೆಯ ಆಟಗಾರ ತಂಡಕ್ಕೆ ಕಂಬ್ಯಾಕ್..!

author-image
Ganesh
Updated On
ಆರ್​​ಸಿಬಿಗೆ ಬಂತು ಆನೆಬಲ; ಫ್ರಾಂಚೈಸಿ ಭರವಸೆಯ ಆಟಗಾರ ತಂಡಕ್ಕೆ ಕಂಬ್ಯಾಕ್..!
Advertisment
  • ಚೆನ್ನೈನಲ್ಲಿ ಸಿಎಸ್​ಕೆ ವಿರುದ್ಧ ಇಂದು ಆರ್​ಸಿಬಿ ಸೆಣಸಾಟ
  • ಭುವಿ ಫಿಟ್ನೆಸ್​​ ಬಗ್ಗೆ ಮೆಂಟರ್ ದಿನೇಶ್ ಕಾರ್ತಿಕ್ ಏನಂದ್ರು?
  • ಆರ್​ಸಿಬಿ ಪ್ಲೇಯಿಂಗ್-11ನಲ್ಲಿ ಬದಲಾವಣೆ ಸಾಧ್ಯತೆ

ಆರ್​ಸಿಬಿ ಅಭಿಮಾನಿಗಳಿಗೆ ಗುಡ್​​ನ್ಯೂಸ್​ ಸಿಕ್ಕಿದೆ. ಗಾಯದ ಸಮಸ್ಯೆಯಿಂದ ಮೊದಲ ಪಂದ್ಯದಿಂದ ಹೊರಗುಳಿದಿದ್ದ ಸ್ಟಾರ್​ ವೇಗಿ ಭುವನೇಶ್ವರ್ ಕುಮಾರ್ ಇವತ್ತಿನ ಪಂದ್ಯಕ್ಕೆ ಕಂಬ್ಯಾಕ್ ಮಾಡ್ತಿದ್ದಾರೆ. ಆ ಮೂಲಕ ಸಿಎಸ್​ಕೆ ವಿರುದ್ಧದ ಪಂದ್ಯಕ್ಕೆ ಆರ್​ಸಿಬಿ ಮತ್ತಷ್ಟು ಸ್ಟ್ರಾಂಗ್ ಆಗಿದೆ.

ಆರ್​ಸಿಬಿ ಫ್ರಾಂಚೈಸಿ ಭುವಿ ಆಡುವುದರ ಬಗ್ಗೆ ಅಧಿಕೃತವಾಗಿ ಖಚಿತಪಡಿಸಿಲ್ಲ. ಆದರೆ ಅವರು ಆಡೋದು ಬಹುತೇಕ ಪಕ್ಕಾ ಆಗಿದೆ. ತಂಡದ ಮೆಂಟರ್​ ದಿನೇಶ್ ಕಾರ್ತಿಕ್, ಭುವಿ ಫಿಟ್ನೆಸ್ ಬಗ್ಗೆ ಮಾಹಿತಿ ನೀಡಿದ್ದಾರೆ. ಭುವಿ ಈಗ ಸಂಪೂರ್ಣ ಫಿಟ್ ಆಗಿದ್ದಾರೆ. ಅವರು ಯಾವುದೇ ಗಾಯದ ಸಮಸ್ಯೆಯಿಂದ ತೊಂದರೆಗೆ ಒಳಗಾಗಿಲ್ಲ. ಅವರು ಫಿಟ್ ಅಂಡ್ ಫೈನ್ ಇದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಸಿಎಸ್​​ಕೆಗೆ ಆರ್​ಸಿಬಿ ಮೇಲಿದೆ ಭಯಂಕರ ಕೋಪ.. ಯಾಕೆ ಅಷ್ಟೊಂದು ಸಿಟ್ಟು ಗೊತ್ತಾ..?

publive-image

ಅಲ್ಲದೇ ಕೆಲವು ಗಂಟೆಗಳ ಹಿಂದೆ ಆರ್​​ಸಿಬಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದೆ. ಅದರಲ್ಲಿ ಭುವಿ ಫಿಟ್ ಆಗಿರೋದು ಕಂಡುಬಂದಿದೆ. ಅಲ್ಲದೇ, ಪ್ರ್ಯಾಕ್ಟೀಸ್​ ಅವಧಿಯಲ್ಲಿ ಭರ್ಜರಿ ಬೌಲಿಂಗ್ ಮಾಡಿದ್ದಾರೆ. ಹೀಗಾಗಿ ಇಂದು ಭುವಿ ತಂಡಕ್ಕೆ ಕಂಬ್ಯಾಕ್ ಮಾಡಲಿದ್ದಾರೆ.

ಭುವಿ ಎಂಟ್ರಿ ಹಿನ್ನೆಲೆಯಲ್ಲಿ ಇಂದಿನ ಪ್ಲೇಯಿಂಗ್-11ನಲ್ಲಿ ಬದಲಾವಣೆ ಆಗಲಿದೆ. ಕಳೆದ ಪಂದ್ಯದಲ್ಲಿ ಗಮನ ಸೆಳೆದಿದ್ದ ರಸಿಕ್ ಸಲಾಮ್ ಅವರು ಪ್ಲೇಯಿಂಗ್-11ನಿಂದ ಔಟ್ ಆಗಲಿದ್ದಾರೆ. ಇನ್ನು, ಆರ್​ಸಿಬಿ ಪ್ಲೇಯಿಂಗ್-11ನಲ್ಲಿ ಯಾರಿಗೆಲ್ಲ ಅವಕಾಶ ಸಿಗಲಿದೆ ಅಂತಾ ನೋಡೋದಾದ್ರೆ, ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಲಿಯಾಮ್ ಲಿವಿಂಗ್​ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೆವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸುಯೇಶ್ ಶರ್ಮಾ, ಜೋಶ್ ಹೇಜಲ್​ವುಡ್, ಯಶ್ ದಯಾಳ್.

ಇದನ್ನೂ ಓದಿ: ಏಪ್ರಿಲ್​​ನಿಂದ ಕರ್ನಾಟಕದಲ್ಲಿ ದುಬಾರಿ ದುನಿಯಾ ದರ್ಶನ.. ಬೆಂಗಳೂರಲ್ಲಿ ಕಸಕ್ಕೂ ತೆರಿಗೆ..! 

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment