/newsfirstlive-kannada/media/post_attachments/wp-content/uploads/2024/12/Bibek-Pangeni.jpg)
ಇಂದು ಇಡೀ ಸೋಷಿಯಲ್ ಮೀಡಿಯಾ ಬಳಕೆಯಾದರರು ಕಂಬನಿ ಮಿಡಿದ ದಿನ. ಏಕೆಂದರೆ ಇನ್ಸ್ಟಾಗ್ರಾಮ್ನಲ್ಲಿ ಪ್ರಸಿದ್ಧ ನೇಪಾಳಿ ಪ್ರಭಾವಿ ಬಿಬೇಕ್ ಪಂಗೇನಿ ಮೆದುಳಿನ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. ಬಿಬೇಕ್ ಮತ್ತು ಅವರ ಪತ್ನಿ ಸೃಜನಾ ಸುವೇದಿ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ದಂಪತಿಯಾಗಿ ಗುರುತಿಸಿಕೊಂಡಿದ್ದರು.
ಇದನ್ನೂ ಓದಿ: ಲಕ್ಷ್ಮೀ ಹೆಬ್ಬಾಳ್ಕರ್ ದಿಢೀರ್ ಸುದ್ದಿಗೋಷ್ಠಿ, ಕಣ್ಣೀರಿಟ್ಟ ಸಚಿವೆ.. ಅಳುತ್ತ ಹೇಳಿದ್ದೇನು..?
ಬಿಬೆಕ್ ಪಂಗೇನಿ ಹಾಗೂ ಸೃಜನಾ ಸುಬೇದಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ನೇಪಾಳದ ನಿವಾಸಿಯಾಗಿರುವ ಈ ಜೋಡಿ ಮದುವೆಯಾದ ಬಳಿಕ ಅಮೆರಿಕದಲ್ಲಿ ನೆಲೆಸಿದ್ದರು. ಮೃತ ಬಿಬೆಕ್ ಪಂಗೇನಿ ಜಾರ್ಜಿಯಾ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರ ಮತ್ತು ಖಗೋಳಶಾಸ್ತ್ರದಲ್ಲಿ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದರು.
ಆದರೆ 2022ರಲ್ಲಿ ಏಕಾಏಕಿ ಬಿಬೇಕ್ ಪಂಗೇನಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಆದರೆ ಈ ವಿಚಾರ ತಿಳಿದ ಕೂಡಲೇ ಸೃಜನಾ ತನ್ನ ಗಂಡನಿಗೆ ಧೈರ್ಯ ತುಂಬಿದ್ದಾಳೆ. ಕ್ಯಾನ್ಸರ್ ಪೀಡಿತ ಗಂಡನನ್ನು ಮಗುವಿನಂತೆ ಆರೈಕೆ ಮಾಡುತ್ತಿದ್ದಳು ಸೃಜನಾ. ಕ್ಯಾನ್ಸರ್ ಬಂದ ಮೊದಲ ದಿನದಿಂದಲೂ ಕೊನೆಯವರೆಗೂ ಬಿಬೇಕ್ಗೆ ಪತ್ನಿ ಆಸ್ಪತ್ರೆಯಲ್ಲಿ ಆರೈಕೆ ಮಾಡಿಕೊಂಡೆ ಬಂದಿದ್ದಾರೆ. ಇದೇ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದ ಪತ್ನಿ ಸೃಜನಾ. ಆದರೆ ಇದೀಗ ಬಿಬೇಕ್ ಮೃತಪಟ್ಟಿದ್ದಾರೆ.
ಇನ್ನೂ, ಇದೇ ವಿಡಿಯೋ ನೋಡಿದ ಅಭಿಮಾನಿಗಳು, ನೆಟ್ಟಿಗರು ಬಿಬೇಕ್ ಶೀಘ್ರವೇ ಗುಣಮುಖರಾ ಬರಲಿ ಎಂದು ಸಾರ್ವಜನಿಕರು ಸದಾ ಪ್ರಾರ್ಥಿಸುತ್ತಿದ್ದರು. ಸೃಜನ ಯಾವಾಗಲೂ ತನ್ನ ಪತಿಗೆ ಭರವಸೆ, ಧೈರ್ಯ ಮತ್ತು ಪ್ರೀತಿಯನ್ನು ನೀಡುತ್ತಿದ್ದಳು. ಆದರೆ ಇಂದು ಬಿಬೇಕ್ ನಿಧನಾಗಿದ್ದಾರೆ. ಇದೇ ವಿಚಾರ ತಿಳಿದ ನೆಟ್ಟಿಗರು ತೀವ್ರ ದುಃಖಿತರಾಗಿದ್ದಾರೆ. ಇನ್ನೂ ಕ್ಯಾನ್ಸರ್ ಪೀಡಿತ ಗಂಡನನ್ನು ಬದುಕುಳಿಸಲು ಜೀವನವನ್ನೇ ಮುಡಿಪಾಗಿಟ್ಟಿದ್ದ ಹೆಂಡತಿಯನ್ನು ಸ್ಪೂರ್ತಿದಾಯಕ ಕಥೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಅಲ್ಲದೇ ತನ್ನ ಗಂಡನ ಆರೈಕೆ ಮಾಡಿದ ಮಹಿಳೆಗೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ