/newsfirstlive-kannada/media/post_attachments/wp-content/uploads/2025/01/Bidar-ATM-Robbery-Bihar-Gang-2.jpg)
ಬೀದರ್ SBI ಎಟಿಎಂ ಬಳಿ 93 ಲಕ್ಷ ರೂಪಾಯಿ ದರೋಡೆ ಮಾಡಿರುವ ಖದೀಮರು ಕಷ್ಟ ಪಟ್ಟು ಕರ್ನಾಟಕದ ಗಡಿಯನ್ನು ದಾಟಿದ್ದಾರೆ. ಗಡಿ ದಾಟಿದ ಮೇಲೂ ಈ ದರೋಡೆಕೋರರಿಗೆ ಸ್ವಲ್ಪವೂ ಗಡಿಬಿಡಿ ಆಗಿಲ್ಲ. ಖದೀಮರ ಸುಳಿದಾಡಿದ ಸಿಸಿಟಿವಿ ದೃಶ್ಯಗಳು ಬಿಹಾರಿ ಗ್ಯಾಂಗ್‌ನ ಸ್ಫೋಟಕ ಸುಳಿವು ಬಿಟ್ಟು ಕೊಟ್ಟಿದೆ.
ಬೈಕ್‌ನಲ್ಲಿ ಬೀದರ್‌ನಿಂದ ಹೈದರಾಬಾದ್‌ಗೆ ಹೋಗಿರುವ ದರೋಡೆಕೋರರು ಕಬ್ಬಿಣದ ಪೆಟ್ಟಿಗೆಯಲ್ಲಿದ್ದ 93 ಲಕ್ಷ ರೂಪಾಯಿ ಹಣವನ್ನ ಬ್ಯಾಗ್‌ಗೆ ಶಿಫ್ಟ್ ಮಾಡಿದ್ದಾರೆ. ಹೈದರಾಬಾದ್‌ನಿಂದ ಉತ್ತರ ಭಾರತದ ಕಡೆ ಹೋಗುವಾಗ ಖದೀಮರು ದೋಸೆ ತಿಂದಿದ್ದಾರೆ.
ಇದನ್ನೂ ಓದಿ: ಮಂಗಳೂರು ಬ್ಯಾಂಕ್ ದರೋಡೆ.. ತನಿಖೆಯ ಹಾದಿ ತಪ್ಪಿಸೋಕೆ ಮಾಸ್ಟರ್ ಪ್ಲಾನ್; ಏನದು?
ದರೋಡೆಕೋರರು ಅಫ್ಜಗಂಜ್‌ನಲ್ಲಿ ಟ್ರಾವೆಲ್ಸ್ ಸಿಬ್ಬಂದಿ ಮೇಲೆ ಫೈರಿಂಗ್ ಮಾಡುವ ಮುನ್ನ ದೋಸೆ ತಿಂದಿದ್ದಾರೆ. ಅಫ್ಜಲ್‌ಗಂಜ್‌ನ ದೋಸೆ ಕಿಂಗ್ ಹೋಟೆಲ್‌ನಲ್ಲಿ 30 ರೂಪಾಯಿಗೆ ಒಂದೊಂದು ದೋಸೆ ತೆಗೆದುಕೊಂಡ ದರೋಡೆಕೋರರು ಬಿಲ್ ಪೇ ಮಾಡಿದ್ದಾರೆ.
ದೋಸೆ ಕಿಂಗ್ ಹೋಟೆಲ್‌ಲ್ಲಿ ದರೋಡೆಕೋರರು 30 ರೂಪಾಯಿ ದೋಸೆ ತಿಂದು ಬಿಲ್ ಕೊಟ್ಟಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಖದೀಮರು ಬೀದರ್‌ನಿಂದ ಹೈದರಾಬಾದ್‌ಗೆ ಹೋಗಿ ಬಟ್ಟೆ ಬದಲಾಯಿಸಿದ್ದಾರೆ. ಸಿಸಿಟಿವಿಯಲ್ಲಿ ಈ ಸುಳಿವು ಸ್ಪಷ್ಟವಾಗಿದೆ.
ಬೀದರ್‌ನಿಂದ ಬೈಕ್ ಮೇಲೆ ಹೋಗುವಾಗ ಖದೀಮರು ಜಾಕೆಟ್ ಹಾಕಿದ್ದರು. ಹೈದ್ರಾಬಾದ್‌ಗೆ ಹೋಗಿ ಫೈರಿಂಗ್ ಮಾಡಿದ ಮೇಲೆ ಬಟ್ಟೆ ಬದಲಾಯಿಸಿದ್ದು, ಪರಾರಿಯಾಗಿರುವವರು ಹಾಗೂ ದೋಸೆ ತಿಂದಿರುವವರಿಗೂ ಸಾಮ್ಯತೆ ಇದೆ. ಪೊಲೀಸರ ತನಿಖೆಯಲ್ಲಿ ಬೀದರ್ ದರೋಡೆಕೋರರು ಇವರೇ ಅನ್ನೋ ಮಾಹಿತಿ ಬಹಿರಂಗವಾಗಿದೆ. ಈ ಎಕ್ಸ್‌ಕ್ಲೂಸಿವ್ ಸಿಸಿಟಿವಿ ವಿಡಿಯೋ ನ್ಯೂಸ್ ಫಸ್ಟ್ ಚಾನೆಲ್‌ಗೆ ಲಭ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ