RCB ಗೆದ್ದರೆ ಪತಿಗೆ ಇನ್ನೊಂದು ಮದುವೆ ಮಾಡಿಸ್ತೀನಿ ಎಂದಿದ್ದ ಪತ್ನಿಗೆ ಫಜೀತಿ; ಈಗ ಆಗಿದ್ದೇನು..?

author-image
Veena Gangani
Updated On
RCB ಗೆದ್ದರೆ ಪತಿಗೆ ಇನ್ನೊಂದು ಮದುವೆ ಮಾಡಿಸ್ತೀನಿ ಎಂದಿದ್ದ ಪತ್ನಿಗೆ ಫಜೀತಿ; ಈಗ ಆಗಿದ್ದೇನು..?
Advertisment
  • 18 ವರ್ಷಗಳ ಬಳಿಕ ವಿಜಯ ಪತಾಕೆ ಹಾರಿಸಿದ ಆರ್​ಸಿಬಿ
  • ಪಾಂಡುರಂಗ ಹಾಗೂ ಜ್ಯೋತಿ ದಂಪತಿಗೆ ನೆಟ್ಟಿಗರು ಏನಂದ್ರು?
  • RCB ಕಪ್ ಗೆದ್ದರೆ.. ಒಬ್ಬರಿಗೊಬ್ಬರು ಸವಾಲ್​ ಹಾಕಿಕೊಂಡಿದ್ದ ದಂಪತಿ

ಬೀದರ್: ಬರೋಬ್ಬರಿ 18 ವರ್ಷಗಳ ಬಳಿಕ ಆರ್​ಸಿಬಿ ವಿಜಯ ಪತಾಕೆ ಹಾರಿಸಿತ್ತು. ಪ್ರತಿ ವರ್ಷವು ಅಭಿಮಾನಿಗಳು ಈ ಸಲ ಕಪ್ ನಮ್ದೇ ಅಂತ ಹೇಳುತ್ತಿದ್ದರು. ಆದರೆ ಈ ಬಾರಿ ಕೋಟ್ಯಾಂತರ ಅಭಿಮಾನಿಗಳು ಹೆಮ್ಮೆಯಿಂದ ಈ ಸಲ ಕಪ್ ನಮ್ದು ಅಂತ ಹೇಳಿದ್ದರು.

ಇದನ್ನೂ ಓದಿ:ಕನ್ನಡ ಕೋಗಿಲೆ ಸಿಂಗರ್​ ಅಖಿಲಾ ಪಜಿಮಣ್ಣು ದಾಂಪತ್ಯದಲ್ಲಿ ಬಿರುಕು.. ಡಿವೋರ್ಸ್​ಗೆ ಅರ್ಜಿ

publive-image

ಬೀದರ್​ನ ದಂಪತಿ ತಮಗೆ ತಾವೇ ಸವಾಲ್ ಹಾಕಿಕೊಂಡಿದ್ದರು. ಪತ್ನಿ ಆರ್‌ಸಿಬಿ ಗೆದ್ದರೆ ಪತಿಗೆ ಇನ್ನೊಂದು ಮದುವೆ ಮಾಡ್ತೀನಿ ಅಂತ ಹೇಳಿದ್ದರು. ಇತ್ತ ಆರ್​ಸಿಬಿ ಸೋತರೆ ತಲೆ ಬೋಳಿಸಿಕೊಳ್ಳುತ್ತೇನೆ ಅಂತ ಸವಾಲು ಹಾಕಿಕೊಂಡು ಈ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದರು.

publive-image

ಇದೀಗ ಹುಮನಾಬಾದ್ ನಿವಾಸಿಗಳಾದ ಪಾಂಡುರಂಗ ಹಾಗೂ ಜ್ಯೋತಿ ದಂಪತಿ ಫಜೀತಿ ಸಿಕ್ಕಿಹಾಕಿಕೊಂಡಿದ್ದಾರೆ. ಆರ್‌ಸಿಬಿ ಕಪ್ ಗೆದ್ರೆ ಪತಿಗೆ ಇನ್ನೊಂದು ಮದುವೆ ಅಂತ ಪತ್ನಿ ಹೇಳಿದ್ದಳು. ಆರ್‌ಸಿಬಿ ಕಪ್ ಸೋತ್ರೆ ತಲೆಬೊಳಿಸುತ್ತೇನೆ ಅಂತ ಪತಿ ಹೇಳಿದ್ದ. ಈಗ ಆರ್​ಸಿಬಿ ಗೆದ್ದಿದೆ ಇನ್ನೊಂದು ಮದುವೆ ಮಾಡುವಂತೆ ಪತಿ ಪಟ್ಟು ಹಿಡಿದಿದ್ದಾನೆ. ಇನ್ನೂ, ಎರಡು ದಿನಗಳ ಹಿಂದಷ್ಟೇ ಮತ್ತೆ ರೀಲ್ಸ್ ಮಾಡಿ ವೀಕ್ಷಕರು ಹೇಗೆ ಹೇಳಿರೋ ಹಾಗೇ ಮಾಡುತ್ತೇನೆ ಅಂತ ಪಾಂಡುರಂಗ ವಿಡಿಯೋ ಹರಿಬಿಟ್ಟಿದ್ದಾನೆ.

publive-image

ಇದನ್ನೂ ನೋಡಿದ ನೆಟ್ಟಿಗರು ಬೇಡಾ ಅಣ್ಣ ಪಾಪ ಅತ್ತಿಗೆ, ನೀವು ಹಾಗೇ ಮಾಡಬೇಡಿ ಅಣ್ಣ ಅಂತ ಕಾಮೆಂಟ್ಸ್​ ಮಾಡಿದ್ದಾರೆ. ಮತ್ತೊಬ್ಬ ನೆಟ್ಟಿಗ ಚಾಲೆಂಜ್ ಕಟ್ಟಿದ್ ಮೇಲೆ ಆಗಲೇಬೇಕು ಆಗು ಅಣ್ಣ ಅಂತ ತಮಾಷೆ ಮಾಡುತ್ತಿದ್ದಾರೆ. ಇದೇ ವಿಡಿಯೋ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. ಸದ್ಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment