Advertisment

ಗುಡುಗು ಸಮೇತ ಭಾರೀ ಮಳೆ; ಬಿಸಿಲಿನ ಬೇಗೆಗೆ ತತ್ತರಿಸಿದ ಜನರಿಗೆ ತಂಪೆರೆದ ಜಲರಾಯ

author-image
Veena Gangani
Updated On
ಗುಡುಗು ಸಮೇತ ಭಾರೀ ಮಳೆ; ಬಿಸಿಲಿನ ಬೇಗೆಗೆ ತತ್ತರಿಸಿದ ಜನರಿಗೆ ತಂಪೆರೆದ ಜಲರಾಯ
Advertisment
  • ದಿಢೀರ್​ ಮಳೆಯಿಂದಾಗಿ ವಾಹನ ಸವಾರರು ಪರದಾಟ
  • ಧಾರಾಕಾರ ಮಳೆಗೆ ಕೆರೆಯಂತಾದ ನಗರದ ರಸ್ತೆಗಳು
  • ಔರಾದ್, ಕಮಲನಗರ, ಭಾಲ್ಕಿಯಲ್ಲಿ ಧಾರಾಕಾರ ಮಳೆ

ಬೀದರ್: ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಬೀದರ್ ಜನತೆಗೆ ಮಳೆರಾಯ ತಂಪನೆರೆದಿದ್ದಾನೆ. ಸೆಕೆ ತಾಳಲಾರದೆ ಬಿಸಿಲಿಗೆ ಹಿಡಿಶಾಪ ಹಾಕುತ್ತಿದ್ದ ಜನರ ಮನದಲ್ಲಿ ಸಂತಸ ಮನೆಮಾಡಿದೆ. ಸಾಯಂಕಾಲ ನಗರದಾದ್ಯಂತ ಧಾರಾಕಾರವಾಗಿ ಮಳೆ ಸುರಿದಿದೆ. ಸದ್ಯ ನಗರ ವಾತವರಣ ಕೂಲ್​​ ಕೂಲ್​ ಆಗಿದೆ.

Advertisment

publive-image

ಇನ್ನೂ ದಿಢೀರ್​ ಮಳೆಯಿಂದಾಗಿ ವಾಹನ ಸವಾರರು ಬೀದಿ ಬದಿ ವ್ಯಾಪಾರಿಗಳು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳು ಕೆರೆಯಂತಾಗಿದ್ದವು. ಸುಮಾರು ಒಂದು ಗಂಟೆ ಬೀದರ್ ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರೀ ಮಳೆಯಾಗಿದೆ. ಮಧ್ಯಾಹ್ನದಿಂದಲೇ ಮೋಡ ಮುಸುಕಿದ ವಾತಾವರಣ ಇತ್ತು. ಸಂಜೆ ಆಗುತ್ತಲೇ ಮಳೆರಾಯನ ಆರ್ಭಟ ಜೋರಾಗಿತ್ತು.

publive-image

ಧಾರಾಕಾರ ಮಳೆಯಿಂದ ಕೆರೆಯಂತಾದ ರಸ್ತೆಯಲ್ಲಿಯೇ ವಾಹನ ಸವಾರರ ಓಡಾಟ ನಡೆಸಿದ್ದರು. ಇನ್ನು, ಔರಾದ್, ಕಮಲನಗರ, ಭಾಲ್ಕಿ ತಾಲೂಕಿನಲ್ಲಿ‌ ಧಾರಾಕಾರ ಮಳೆಯಾಗಿದೆ. ಬಸವಕಲ್ಯಾಣ, ಹುಮನಾಬಾದ್‌, ಚಿಟಗುಪ್ಪಾ ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment