newsfirstkannada.com

ಕೊನೆಯ ಭಾಷಣ ಮಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್.. ಚಪ್ಪಾಳೆಯ ಸುರಿಮಳೆಗೆ ಕಣ್ಣೀರು – VIDEO

Share :

Published August 20, 2024 at 6:04pm

    ಸಕ್ರಿಯ ರಾಜಕಾರಣದ ಕೊನೆಯ ಭಾಷಣ ಮಾಡಿದ ಜೋ ಬೈಡನ್

    ಸಭಿಕರಿಂದ ನಿರಂತರ 4 ನಿಮಿಷಗಳ ಕರತಾಡನಕ್ಕೆ ಬೈಡನ್ ಭಾವುಕ

    ಥ್ಯಾಂಕ್ಯು ಜೋ ಎಂದ ಜನರು, ಲವ್ ಯೂ ಅಮೆರಿಕಾ ಎಂದ ಬೈಡನ್!

ಚಿಕಾಗೊ: ಸೋಮವಾರ ರಾತ್ರಿ ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ತಮ್ಮ ರಾಜಕೀಯದ ಕೊನೆಯ ಭಾಷಣ ಮಾಡಿದ್ರು. ಡೆಮಾಕ್ರಟಿಕ್ ನ್ಯಾಷನಲ್ ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಜೋ ಬೈಡನ್​ಗೆ ಅಮೆರಿಕಾದ ಪ್ರಜೆಗಳು ಮನದುಂಬಿ ವಿದಾಯ ಹೇಳಿದರು. ಸಮಾವೇಶದಲ್ಲಿ ನೆರೆದಿದ್ದ ಸಹಸ್ರ ಸಹಸ್ರ ಸಂಖ್ಯೆಯ ಡೆಮಾಕ್ರಟಿಕ್ ನ್ಯಾಷನಲ್ ಪಕ್ಷದ ಬೆಂಬಲಿಗರು ನಿರಂತರ 4 ನಿಮಿಷಗಳ ಕಾಲ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ತಮ್ಮ ಅಧ್ಯಕ್ಷನನ್ನು ಬೀಳ್ಕೊಟ್ಟರು.

ಇದನ್ನೂ ಓದಿ: ಈ ಭಯೋತ್ಪಾದಕನ ಭಾರತಕ್ಕೆ ಒಪ್ಪಿಸಲು ಅಮೆರಿಕ ಒಪ್ಪಿಗೆ; ಈತ ಎಂಥ ಕ್ರಿಮಿ..?

ನಿರಂತರ 4 ನಿಮಿಷಗಳ ಕಾಲ ಕರಡತಾನ! 

81 ವರ್ಷದ ಜೋ ಬೈಡನ್ ಹಲವು ವಾರಗಳ ಹಿಂದೆಯೇ ಎಲೆಕ್ಷನ್ ಅಂಗಳದಿಂದ ಹಿಂದೆ ಸರಿಯಬೇಕು ಎಂಬ ವಾದಗಳು ಕೇಳಿ ಬಂದಿದ್ದವು. ಕೊನೆಗೆ ಜೋ ಬೈಡನ್ ಆ ನಿರ್ಧಾರಕ್ಕೂ ಬಂದರು. ನ್ಯಾಷನಲ್ ಡೆಮಾಕ್ರಟಿಕ್ ಪಕ್ಷದ ಮುಂದಿನ ಅಧ್ಯಕ್ಷ ಅಭ್ಯರ್ಥಿಯನ್ನಾಗಿ ಕಮಲಾ ಹ್ಯಾರಿಸ್​ ಹೆಸರು ಸೂಚಿಸುವ ಮೂಲಕ ಸಕ್ರಿಯ ರಾಜಕಾರಣದಿಂದ ಜೋ ಬೈಡನ್ ದೂರ ಸರಿದರು. ದೂರ ಸರಿದ ನಾಯಕನಿಗೆ ಹೃದಯತುಂಬಿ ವಿದಾಯ ಹೇಳುವುದಕ್ಕೂ, ಒಂದು ಪ್ರೀತಿ ಭರಿತ ನಿರ್ಗಮನಕ್ಕೂ ಸೋಮವಾರ ಅಂದ್ರೆ ಆಗಸ್ಟ್ 19 ರ ರಾತ್ರಿ ಚಿಕಾಗೋದಲ್ಲಿ ನಡೆದ ನ್ಯಾಷನಲ್ ಡೆಮಾಕ್ರಟಿಕ್ ಸಮಾವೇಶ ಸಾಕ್ಷಿಯಾಗಿತ್ತು.

ನಾನು ನನ್ನ ಬದುಕಿನಲ್ಲಿ ಅನೇಕ ತಪ್ಪುಗಳನ್ನು ಮಾಡಿದ್ದೇನೆ. ಆದ್ರೆ ನಾನು ದೇಶಕ್ಕೆ ಹೆಚ್ಚು ಒಳ್ಳೆಯದನ್ನೇ ನೀಡಿದ್ದೇನೆ ಎಂದು ಬೈಡನ್ ತಮ್ಮ ಭಾಷಣದಲ್ಲಿ ಹೇಳಿದ್ರು. ತಮ್ಮ ಭಾಷಣದುದ್ದಕ್ಕೂ ನೇರ ಹಾಗೂ ಧೈರ್ಯವಂತಿಕೆಯನ್ನೇ ಕಾಯ್ದುಕೊಂಡು ಮಾತನಾಡಿದ ಜೋ ಬೈಡನ್, ತಮ್ಮ ಆಡಳಿತಾವಧಿಯಲ್ಲಿ ತೆಗೆದುಕೊಂಡು ನಿರ್ಧಾರಗಳ ಸಮರ್ಥನೆಯನ್ನು ಮಾಡುವುದರ ಜೊತೆಗೆ, ಎದುರಾಳಿ ಡೊನಾಲ್ಡ್ ಟ್ರಂಪ್​ ವಿರುದ್ದವೂ ಹರಿಹಾಯ್ದರು.

ಇದನ್ನೂ ಓದಿ:ಅಮೆರಿಕಾದ ಈ ಮ್ಯಾಪ್​ನಲ್ಲಿದೆ​ ಒಂದು ಲವ್ ಸ್ಟೋರಿ; ಏನೆಂದು ಹುಡುಕಿ ನೋಡೋಣ..!

ಅಮೆರಿಕ ಅಧ್ಯಕ್ಷ ಜೋ ಬೈಡನ್ ತಮ್ಮ ಭಾಷಣ ಮುಗಿಸುವ ವೇಳೆಗೆ ನೆರೆದಿದ್ದ ಜನರೆಲ್ಲಾ ಎದ್ದು ನಿಂತು ಕರಡತಾನ ಮಾಡಿದರು. ನಿರಂತರ 4 ನಿಮಿಷಗಳ ಕಾಲ ಚಪ್ಪಾಳೆ ತಟ್ಟುವ ಮೂಲಕ ಥ್ಯಾಂಕ್ಯು ಜೋ ಎಂಬ ಘೊೋಷಣೆಯೂ ಕೂಡ ಸಭಿಕರಿಂದ ಕೇಳಿ ಬಂತು. ಅದಕ್ಕೆ ಥ್ಯಾಂಕ್ಯು ಅಮೆರಿಕಾ ಎಂದ ಜೋ ಬೈಡನ್ ಮನದುಂಬಿ ಕೃತಜ್ಞತೆ ಸಲ್ಲಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊನೆಯ ಭಾಷಣ ಮಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್.. ಚಪ್ಪಾಳೆಯ ಸುರಿಮಳೆಗೆ ಕಣ್ಣೀರು – VIDEO

https://newsfirstlive.com/wp-content/uploads/2024/08/JOE-BIDEN.jpg

Load More