Breaking: ಆರ್​ಸಿಬಿ ವಿರುದ್ಧ ಸರ್ಕಾರ ದೊಡ್ಡ ಕ್ರಮ -ಸರ್ಕಾರದಿಂದ 3 ಕಠಿಣ ಕ್ರಮ

author-image
Ganesh
Updated On
ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿಗೆ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್.. ಇನ್ನೊಂದು ಹೆಜ್ಜೆ ಬಾಕಿ ಅಷ್ಟೇ!
Advertisment
  • ನಿವೃತ್ತ ಜಸ್ಟೀಸ್ ಮೖಕಲ್ ಕುನ್ಹಾ ನೇತೃತ್ವದಲ್ಲಿ ಒನ್ ಮ್ಯಾನ್ ಕಮಿಷನ್
  • RCB, KSCA, DNA ಮ್ಯಾನೇಜ್ಮೆಂಟ್ ಮುಖ್ಯಸ್ಥರ ಬಂಧನಕ್ಕೆ ಸೂಚನೆ
  • ಮಹತ್ವದ ಸುದ್ದಿಗೋಷ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

ಚಿನ್ನಸ್ವಾಮಿಯಲ್ಲಿ ನಿನ್ನೆ ನಡೆದ ದುರಂತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂಬಂಧ ಇವತ್ತು ಮಹತ್ವದ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ.

ಸಭೆ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ.. ಪ್ರಕರಣ ಸಂಬಂಧ ಹೖಕೋರ್ಟ್​ನ ನಿವೃತ್ತ ನ್ಯಾಯಾಧೀಶರಾದ ಮೖಕಲ್ ಕುನ್ಹಾ ನೇತೃತ್ವದಲ್ಲಿ ‘ಒನ್ ಮ್ಯಾನ್ ಕಮಿಷನ್’ ರಚನೆ ಮಾಡಲಾಗಿದೆ. ಜೊತೆಗೆ ಆರ್​ಸಿಬಿ, ಡಿಎನ್​ಎ ಮ್ಯಾನೇಜ್ಮೆಂಟ್, ಕೆಎಸ್​ಸಿಎ ಮುಖ್ಯ ಅಧಿಕಾರಿಗಳ ಬಂಧನಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಎಫ್​ಐಆರ್ ತನಿಖೆಗೆ ಸಿಐಡಿ ಹೆಗಲಿಗೆ..

ಆರ್​ಸಿಬಿ ಮೇಲೆ, ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ ಡಿಎನ್​ಎ, ಕೆಎಸ್​ಸಿಎ ಅನ್ನು ಯಾರೆಲ್ಲ ಪ್ರತಿನಿಧಿಸುತ್ತಾರೋ ಅವರನ್ನ ಅರೆಸ್ಟ್ ಮಾಡಲು ಸರ್ಕಾರ ಸೂಚನೆ ನೀಡಿದೆ. ಜೊತೆಗೆ RCB, DNA, KSCA ವಿರುದ್ಧ ಎಫ್​ಐಆರ್ ದಾಖಲು ಮಾಡಲಾಗಿದೆ. ಇನ್ನು, ಕಾಲ್ತುಳಿತ ಪ್ರಕರಣದಲ್ಲಿ ಕಬ್ಬನ್ ಪಾರ್ಕ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಇದರ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಂಗಳೂರು ಪೊಲೀಸ್ ಕಮಿಷನರ್ ಅಮಾನತು

ಕಬ್ಬನ್ ಪಾರ್ಕ್ ಪೊಲೀಸ್ ಇನ್ಸ್​ಪೆಕ್ಟರ್, ಎಸಿಪಿ, ಸೆಂಟ್ರಲ್ ಡಿಸಿಪಿ, ಕ್ರಿಕೆಟ್ ಸ್ಟೇಡಿಯಂನ ಇನ್ಚಾರ್ಜ್, ಕಮಿಷನರ್ ಆಫ್ ಪೊಲೀಸ್ ಇವರನ್ನ ತಕ್ಷಣದಿಂದ ಅಮಾನತು ಮಾಡಲಾಗಿದೆ. ಜೊತೆಗೆ ಸಿಪಿಐ, ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್, ಬೆಂಗಳೂರು ನಗರದ ಕಮಿಷನರ್ ಆಫ್ ಪೊಲೀಸ್​ರನ್ನ ಅಮಾನತುಗೊಳಿಸುವ ತೀರ್ಮಾನ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: ಕಾಲ್ತುಳಿತ ಬಗ್ಗೆ ಗಂಭೀರ್ ಮೊದಲ ಪ್ರತಿಕ್ರಿಯೆ.. ಮುಖ್ಯ ಕೋಚ್​​ರಿಂದ ದೊಡ್ಡ ಹೇಳಿಕೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment