newsfirstkannada.com

ರಾಮಲಲ್ಲಾ ಪ್ರತಿಷ್ಠಾಪನೆ ಬೆನ್ನಲ್ಲೇ ಮೋದಿಯಿಂದ ಬಿಗ್​ ಅನೌನ್ಸ್​​ಮೆಂಟ್! 1 ಕೋಟಿ ಮನೆಗಳಿಗೆ ರೂಫ್‌ಟಾಪ್ ಸೋಲಾರ್

Share :

Published January 23, 2024 at 7:10am

Update January 23, 2024 at 7:27am

    ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ದಿನವೇ ಬೆಳಕಿನ ಉಡುಗೊರೆ

    1 ಕೋಟಿ ಮನೆಗಳಿಗೆ ಸೌರಶಕ್ತಿಯನ್ನು ಒದಗಿಸಲು ಮುಂದಾದ ನಮೋ

    ‘ಸೂರ್ಯೋದಯ ಯೋಜನೆ’ ನೀಡುವುದಾಗಿ ತಿಳಿಸಿದ ಪ್ರಧಾನಿ ಮೋದಿ

ಅಯೋಧ್ಯೆಯಲ್ಲಿ ಧಾರ್ಮಿಕ ಕಾರ್ಯ ಮುಗಿಸಿ ಬಂದ ಮೋದಿ, ಬಿಗ್​​​ ಅನೌನ್ಸ್​​ಮೆಂಟ್​​ ಮಾಡಿದ್ದಾರೆ. ದೆಹಲಿಗೆ ವಾಪಸಾದ ತಕ್ಷಣ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ ಪ್ರಕಟಿಸಿದ್ದಾರೆ. 1 ಕೋಟಿ ಮನೆಗಳಿಗೆ ರೂಫ್‌ಟಾಪ್ ಸೋಲಾರ್ ಅಳವಡಿಸುವ ಗುರಿಯನ್ನ ಹೊಂದಿರೋದಾಗಿ ತಿಳಿಸಿದ್ದಾರೆ.

2024 ಜನವರಿ 22. ಭಾರತದ ಕೋಟಿ ಕೋಟಿ ಹೃದಯಗಳ ಪಾಲಿಗೆ ಸುವರ್ಣಾಕ್ಷರದಲ್ಲಿ ಬರೆದ ಇತಿಹಾಸದ ಪುಟ. ಟೆಂಟ್​​ನಿಂದ ಮಂದಿರದಲ್ಲಿ ಪ್ರಭು ಶ್ರೀರಾಮ ಚಂದ್ರ ವಿರಾಜಮಾನನಾದ ಸಂಭ್ರಮದ ಘಳಿಗೆ. ಈ ಸುಮಧುರ ಘಳಿಗೆಯನ್ನ ಐತಿಹಾಸಿಕಗೊಳಿಸಲು ಬಹುದೊಡ್ಡ ಯೋಜನೆ ಪ್ರಕಟಿಸಿದ್ದಾರೆ. ಅಯೋಧ್ಯೆಯಿಂದ ನವದೆಹಲಿಗೆ ಹಿಂದಿರುಗಿದ ಕೂಡಲೇ ಪ್ರಧಾನಿ ಮೋದಿ ಈ ಹೊಸ ಯೋಜನೆ ಘೋಷಿಸಿದ್ದಾರೆ.

ಒಂದು ಕೋಟಿ ಮನೆಗಳಿಗೆ ರೂಫ್​ಟಾಪ್​ ಸೋಲಾರ್​ ಟಾರ್ಗೆಟ್​

ದೇಶದ ಬಡವರು, ಮಧ್ಯಮ ವರ್ಗಗಳ ಸುಮಾರು 1 ಕೋಟಿ ಮನೆಗಳನ್ನ, ಸೌರಶಕ್ತಿಯಿಂದ ಬೆಳಗಲಿವೆ. ಸೂರ್ಯವಂಶದ ಪ್ರಭು ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಬೆನ್ನಲ್ಲೆ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ ಎಂದು ಮೋದಿ ಹೆಸರಿಟ್ಟಿದ್ದಾರೆ. ಅಲ್ಲದೆ, ದೇಶದ ಅನೇಕ ಮನೆಗಳ ವಿದ್ಯುತ್ ದರವನ್ನ ಗಣನೀಯವಾಗಿ ಇಳಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

‘ಪ್ರಧಾನಮಂತ್ರಿ ಸೂರ್ಯೋದಯ’

ಪ್ರಪಂಚದ ಎಲ್ಲಾ ಭಕ್ತರು ಸೂರ್ಯವಂಶಿ ಭಗವಾನ್ ಶ್ರೀರಾಮನ ಬೆಳಕಿನಿಂದ ಯಾವಾಗಲೂ ಶಕ್ತಿಯನ್ನು ಪಡೆಯುತ್ತಾರೆ. ಇಂದು, ಅಯೋಧ್ಯೆಯಲ್ಲಿ ಜೀವನದ ಶುಭ ಸಂದರ್ಭದಲ್ಲಿ, ಭಾರತದ ಜನರು ತಮ್ಮ ಮನೆಗಳ ಛಾವಣಿಯ ಮೇಲೆ ತಮ್ಮದೇ ಆದ ಸೋಲಾರ್ ರೂಫ್ ಟಾಪ್ ವ್ಯವಸ್ಥೆಯನ್ನು ಹೊಂದಿರಬೇಕು ಎಂಬ ನನ್ನ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಲಾಗಿದೆ. ಅಯೋಧ್ಯೆಯಿಂದ ಹಿಂದಿರುಗಿದ ನಂತರ ನಾನು ತೆಗೆದುಕೊಂಡ ಮೊದಲ ನಿರ್ಧಾರವೆಂದರೆ ನಮ್ಮ ಸರ್ಕಾರವು 1 ಕೋಟಿ ಮನೆಗಳಿಗೆ ಮೇಲ್ಛಾವಣಿಯ ಸೋಲಾರ್ ಅನ್ನು ಸ್ಥಾಪಿಸುವ ಗುರಿಯೊಂದಿಗೆ ‘ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ’ಯನ್ನ ಪ್ರಾರಂಭಿಸುತ್ತದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದವರ ವಿದ್ಯುತ್ ಬಿಲ್ ಕಡಿಮೆಯಾಗುವುದಲ್ಲದೆ, ಇಂಧನ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿಯಾಗಲಿದೆ.
– ನರೇಂದ್ರ ಮೋದಿ, ಪ್ರಧಾನಿ

ಇಂಟ್ರಸ್ಟಿಂಗ್​​​ ಅಂದ್ರೆ, ಈಗಾಗಲೇ ಈ ಯೋಜನೆಯನ್ನ ಮೋದಿ ಅಧಿಕಾರಕ್ಕೆ ಬಂದಾಗಲೆ ಘೋಷಣೆ ಮಾಡಲಾಗಿದೆ. 2022ರ ಹೊತ್ತಿಗೆ ದೇಶದಲ್ಲಿ 1 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿತ್ತು. ಆದ್ರೆ, 2022ರ ಅಂತ್ಯದ ಹೊತ್ತಿಗೆ ಈ ಗುರಿಯನ್ನು ಈಡೇರಿಸುವಲ್ಲಿ ಭಾರತ ಕೊಂಚ ಹಿಂದೆ ಉಳಿದಿದೆ. ಇನ್ನು, ಮನೆಗಳ ಮೇಲೆ ಸೌರಫಲಕಗಳನ್ನ ಅಳವಡಿಸಿ 2022ರೊಳಗೆ 40 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯೂ ಸಹ ನಿರೀಕ್ಷಿತ ಮಟ್ಟ ಮುಟ್ಟಿಲ್ಲ. ಸದ್ಯ ಹೊಸ ಯೋಜನೆ ಪ್ರಕಟಿಸಲಾಗಿತ್ತು. ಸರ್ಕಾರ ಹೆಚ್ಚು ಫೋಕಸ್​​ ಮಾಡ್ತಿದೆ.

ಒಟ್ಟಾರೆ, ಒನ್​ ಟೈಮ್​ ಇನ್ವೆಸ್ಟ್​ಮೆಂಟ್​​ ಯೋಜನೆ ಆಗಿರುವ ಸೋಲಾರ್​​ ಪವರ್​, ಭವಿಷ್ಯದಲ್ಲಿ ಭಾರತದ ದಿಕ್ಕನ್ನು ಬದಲಿಸುವ ಮಹತ್ವಾಕಾಂಕ್ಷಿ ಯೋಜನೆ ಆಗಿದೆ.. ಕಲ್ಲಿದ್ದಲು, ಅಣು ವಿದ್ಯುತ್​, ಜಲ ವಿದ್ಯುತ್​​ ಮೇಲಿನ ಅವಲಂಬನೆ ತಗ್ಗಲಿದೆ. ಹೀಗೆ ತಗ್ಗುವ ಈ ಅವಲಂಬನೆ ಬಡವರ ಜೇಬು ಉಳಿತಾಯ ಆಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮಲಲ್ಲಾ ಪ್ರತಿಷ್ಠಾಪನೆ ಬೆನ್ನಲ್ಲೇ ಮೋದಿಯಿಂದ ಬಿಗ್​ ಅನೌನ್ಸ್​​ಮೆಂಟ್! 1 ಕೋಟಿ ಮನೆಗಳಿಗೆ ರೂಫ್‌ಟಾಪ್ ಸೋಲಾರ್

https://newsfirstlive.com/wp-content/uploads/2024/01/Modi-Solar.jpg

Load More