/newsfirstlive-kannada/media/post_attachments/wp-content/uploads/2025/07/TRUMP-10.jpg)
ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರಿಗೆ ಅಮೆರಿಕಾವನ್ನೇ ಮತ್ತೆ ಗ್ರೇಟ್ ಮಾಡುವ ಆಸೆ. ಮಗಾ ಕ್ಯಾಂಪೇನ್ ನಾಯಕ ಡೋನಾಲ್ಡ್ ಟ್ರಂಪ್, ಬಿಗ್ ಬ್ಯೂಟಿಫುಲ್ ಬಿಲ್ ಅನ್ನು ಜಾರಿಗೆ ತಂದಿದ್ದಾರೆ. ಈ ಕಾಯಿದೆ ಜಾರಿಗೆ ಜುಲೈ 4 ರಂದೇ ಸಹಿ ಹಾಕಿದ್ದಾರೆ. ಈ ಕಾಯಿದೆಯಡಿ ವೀಸಾ ಇಂಟಿಗ್ರೀಟಿ ಫೀಜು ಅನ್ನು ಪರಿಚಯಿಸಿದ್ದಾರೆ. ವಲಸೆಯೇತರ ವೀಸಾ ಕೆಟಗರಿಗಳಿಗೆ 250 ಡಾಲರ್ ಶುಲ್ಕ ವಿಧಿಸುತ್ತಿದ್ದಾರೆ. ಹೀಗಾಗಿ ಅಮೆರಿಕಾಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರು ಈಗ ಹೆಚ್ಚಿನ ಶುಲ್ಕವನ್ನು ಪಾವತಿಸಿಯೇ ಅಮೆರಿಕಾಗೆ ಎಂಟ್ರಿ ಆಗಬೇಕಾಗಿದೆ.
2026 ರಿಂದ ಅಮೆರಿಕಾಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರು, ವಿದ್ಯಾರ್ಥಿಗಳು ಅಥವಾ ಉದ್ಯೋಗಕ್ಕಾಗಿ ಅಮೆರಿಕಾಗೆ ಹೋಗುವವರು ಹೆಚ್ಚಿನ ವೀಸಾ ಶುಲ್ಕ ಪಾವತಿಸಬೇಕಾಗಿದೆ. ಈ ಮೊದಲು ಅಮೆರಿಕಾಗೆ ಹೋಗಲು ಟೂರಿಸ್ಟ್ ವೀಸಾಗೆ 16 ಸಾವಿರ ರೂಪಾಯಿ ಶುಲ್ಕ ಇತ್ತು. ಆದರೇ, ಈಗ ಟೂರಿಸ್ಟ್ ವೀಸಾಗೆ 40 ಸಾವಿರ ರೂಪಾಯಿ ಶುಲ್ಕ ಪಾವತಿಸಬೇಕಾಗಿದೆ.
/newsfirstlive-kannada/media/post_attachments/wp-content/uploads/2025/07/JOB_NEWS_1.jpg)
ಅಮೆರಿಕಾದ ವೀಸಾ ಇಂಟಿಗ್ರೀಟಿ ಫೀಜು ಅಂತ 250 ಡಾಲರ್ ಅನ್ನು ಪಾವತಿಸಬೇಕು. 250 ಡಾಲರ್ ಅಂದರೇ, ಭಾರತದ ರೂಪಾಯಿ ಲೆಕ್ಕದಲ್ಲಿ 21,400 ರೂಪಾಯಿ. ಇದು ನಾನ್ ರಿಫಂಡಬಲ್ ಸರ್ ಚಾರ್ಜ್. ಹಾಲಿ ಇರುವ ವೀಸಾ ಶುಲ್ಕಗಳ ಜೊತೆಗೆ ಇದನ್ನು ಪಾವತಿಸಬೇಕು. ವೀಸಾ ಕೊಡುವಾಗ ಇದನ್ನು ಕಡ್ಡಾಯವಾಗಿ ಪಾವತಿಸಬೇಕು. ವಾರ್ಷಿಕ ಹಣದುಬ್ಬರದ ಆಧಾರದ ಮೇಲೆ ಇದನ್ನು ನಿರ್ಧರಿಸಲಾಗುತ್ತೆ.
ಈ ವೀಸಾ ಇಂಟಿಗ್ರೀಟಿ ಫೀಜು ಅನ್ನು ವಲಸೆಯೇತರ ಕೆಟಗರಿಯ ವೀಸಾ ಪಡೆಯುವವರು ಪಾವತಿಸಬೇಕು. ಟೂರಿಸ್ಟ್, ಬ್ಯುಸಿನೆಸ್ ವೀಸಾ ಪಡೆಯುವವರು, ವಿದ್ಯಾರ್ಥಿ ವೀಸಾ ಪಡೆಯುವವರು, ವರ್ಕ್ ವೀಸಾ, ಎಕ್ಸಚೇಂಜ್ ವಿಸಿಟರ್ ವೀಸಾ ಪಡೆಯುವವರು ಈ ಶುಲ್ಕ ಪಾವತಿಸಬೇಕು. ರಾಜತಾಂತ್ರಿಕ ವೀಸಾ ಹೊಂದಿರುವವರಿಗೆ ಮಾತ್ರ ಈ ಇಂಟಿಗ್ರಿಟಿ ಫೀಜುನಿಂದ ವಿನಾಯಿತಿ ನೀಡಲಾಗಿದೆ.
ಭಾರತದಿಂದ ಅಮೆರಿಕಾಗೆ ಹೋಗುವ ವಿದ್ಯಾರ್ಥಿಗಳು, ಟೆಕ್ಕಿಗಳು, ಟೂರಿಸ್ಟ್, ಬ್ಯುಸಿನೆಸ್ ಪ್ರಯಾಣಿಕರು ಈ ಹೆಚ್ಚುವರಿ ಇಂಟಿಗ್ರೀಟಿ ಶುಲ್ಕ ಪಾವತಿಸಿಯೇ ಅಮೆರಿಕಾಗೆ ಎಂಟ್ರಿ ಕೊಡಬೇಕಾಗಿದೆ.
40,502 ರೂಪಾಯಿ ಪಾವತಿಸಬೇಕು
ಸದ್ಯ ಅಮೆರಿಕಾಗೆ ಹೋಗುವ ಭಾರತೀಯ ವಿದ್ಯಾರ್ಥಿಗಳು, ಟೂರಿಸ್ಟ್ ಗಳು 185 ಡಾಲರ್ ಶುಲ್ಕ ಪಾವತಿಸಬೇಕಾಗಿದೆ. ಇದು 2026 ರಲ್ಲಿ 250 ಡಾಲರ್​ಗೆ ಏರಿಕೆಯಾಗುತ್ತೆ . ವಿದ್ಯಾರ್ಥಿಗಳು, ಟೂರಿಸ್ಟ್​ಗಳು 15,800 ರೂಪಾಯಿ ಪಾವತಿಸುತ್ತಿದ್ದವರು, 2026 ರಲ್ಲಿ ಬರೋಬ್ಬರಿ 40,502 ರೂಪಾಯಿ ಪಾವತಿಸಬೇಕಾಗುತ್ತೆ . ಈಗಿರುವ ವೀಸಾ ಶುಲ್ಕಕ್ಕಿಂತ ಎರಡೂವರೆ ಪಟ್ಟು ಹೆಚ್ಚು ಶುಲ್ಕ ಪಾವತಿಸಬೇಕಾಗಿದೆ. ಬಿ-1, ಬಿ-2 ಹಾಗೂ ಎಚ್-1ಬಿ ವೀಸಾ, ಎಫ್ ವೀಸಾಗಳಿಗೆ ಹೆಚ್ಚಿನ ಶುಲ್ಕ ಪಾವತಿಸಬೇಕಾಗಿದೆ.
ಈ ವೀಸಾ ಇಂಟಿಗ್ರೀಟಿ ಶುಲ್ಕವನ್ನು ಮನ್ನಾ ಮಾಡಲಾಗಲ್ಲ, ಇಳಿಕೆಯೂ ಮಾಡಲ್ಲ. ಆದರೇ, ಕೆಲ ಷರತ್ತುಗಳನ್ನು ಪಾಲಿಸಿದರೇ, ರೀಫಂಡ್ ಮಾಡಲಾಗುತ್ತೆ. ಒಂದು ವೇಳೆ ವೀಸಾ ಪಡೆದವರು, ಎಲ್ಲ ವೀಸಾ ನಿಯಮಗಳನ್ನು ಪಾಲಿಸಿದರೇ, ಹಣವನ್ನು ರೀಫಂಡ್ ಮಾಡಲಾಗುತ್ತೆ. ವೀಸಾ ಮುಗಿದ 5 ದಿನದೊಳಗೆ ಅಮೆರಿಕಾವನ್ನು ಬಿಟ್ಟು ಹೋಗಬೇಕು. ಇಲ್ಲವೇ ಕಾನೂನುಬದ್ಧವಾಗಿ ವೀಸಾ ಅವಧಿ ವಿಸ್ತರಿಸಿಕೊಳ್ಳಬೇಕು. ಅಥವಾ ವೀಸಾದ ಸ್ಟೇಟಸ್ ಅನ್ನು ಬದಲಾಯಿಸಿಕೊಳ್ಳಬೇಕು. ಆಗ ಮಾತ್ರ ವೀಸಾ ಇಂಟಿಗ್ರೀಟಿ ಶುಲ್ಕವನ್ನು ರೀಫಂಡ್ ಮಾಡಲಾಗುತ್ತೆ. ವೀಸಾ ಅವಧಿ ಮುಗಿದ ಬಳಿಕವೂ ಅಮೆರಿಕಾದಲ್ಲೇ ವಾಸ್ತವ್ಯ ಹೂಡಿದರೇ, ವೀಸಾ ನಿಯಮ ಉಲಂಘಿಸಿದರೇ ರೀಫಂಡ್ ಸಿಗಲ್ಲ.
ಇದನ್ನೂ ಓದಿ: ಪಾಕ್​ ನಟಿಯ ದುರಂತ ಅಂತ್ಯ.. 9 ತಿಂಗಳ ಹಿಂದೆಯೇ ಹೋದ ಜೀವ, ತನಿಖೆಯಲ್ಲಿ ಬೆಚ್ಚಿ ಬೀಳಿಸೋ ಅಂಶ ಪತ್ತೆ!
/newsfirstlive-kannada/media/post_attachments/wp-content/uploads/2024/12/JOB_ITBP_3.jpg)
ವೀಸಾ ನಿಯಮ ಪಾಲಿಸಿದ್ರೆ ರೀಫಂಡ್
ವೀಸಾ ಇಂಟಿಗ್ರೀಟಿ ಶುಲ್ಕವನ್ನು ಅಮೆರಿಕಾ ವಿಧಿಸುತ್ತಿರುವುದು ಏಕೆ ಎಂಬ ಪ್ರಶ್ನೆ ಉದ್ಭವವಾಗಬಹುದು. ಅಮೆರಿಕಾಗೆ ಭೇಟಿ ನೀಡುವ ವಿದೇಶಿಯರು ಕಾನೂನುಬದ್ಧವಾಗಿ ವರ್ತಿಸಿ, ವೀಸಾ ಅವಧಿ ಮುಗಿದ ತಕ್ಷಣವೇ ಅಮೆರಿಕಾ ಬಿಟ್ಟು ಹೋಗಲೆಂದು ಈ ಶುಲ್ಕವನ್ನು ಪಾವತಿಸುವುದನ್ನು ಕಡ್ಡಾಯ ಮಾಡಲಾಗಿದೆ. ಇದು ಸೆಕ್ಯೂರಿಟಿ ಡಿಫಾಸಿಟ್ ಇದ್ದಂತೆ. ವೀಸಾ ನಿಯಮಗಳನ್ನು ಪಾಲಿಸುವವರಿಗೆ ರೀಫಂಡ್ ಮಾಡುವ ಮೂಲಕ ಈ ಹಣಕಾಸು ಪೋತ್ಸಾಹವನ್ನು ನೀಡಲಾಗುತ್ತೆ.
ಅಮೆರಿಕಾದ ಡಿಪಾರ್ಟ್​ಮೆಂಟ್ ಆಫ್ ಹೋಮಲ್ಯಾಂಡ್ ಸೆಕ್ಯೂರಿಟಿ ಈ ನೀತಿಯನ್ನು ಜಾರಿಗೆ ತಂದು ನಿರ್ವಹಣೆ ಮಾಡುತ್ತೆ. ಹಣದುಬ್ಬರದ ಆಧಾರದ ಮೇಲೆ ಪ್ರತಿ ವರ್ಷವೂ ಶುಲ್ಕ ಪರಿಷ್ಕರಣೆ ಮಾಡುತ್ತೆ. ಇನ್ನೂ ಬಿಗ್ ಬ್ಯೂಟಿಫುಲ್ ಬಿಲ್ ನಡಿ ಭಾರತಕ್ಕೆ ಹಣ ವರ್ಗಾಯಿಸುವುದಕ್ಕೆ ಶೇ.1 ರಷ್ಟು ಎಕ್ಸೈಸ್ ಟ್ಯಾಕ್ಸ್ ಅನ್ನು ವಿಧಿಸುತ್ತೆ. ಇದರಿಂದ ಅಮೆರಿಕಾದಲ್ಲಿರುವ ಭಾರತೀಯರು ತಾವು ದುಡಿದ ಹಣವನ್ನು ಭಾರತಕ್ಕೆ ವರ್ಗಾಯಿಸಲು ಶೇ.1 ರಷ್ಟು ಎಕ್ಸೈಸ್ ಟ್ಯಾಕ್ಸ್ ಪಾವತಿಸಬೇಕು. ಈ ಮೂಲಕ ಅಮೆರಿಕಾದಲ್ಲಿ ಉದ್ಯೋಗದಲ್ಲಿರುವವರಿಂದ ಆದಾಯ ಸಂಗ್ರಹವನ್ನು ಹೆಚ್ಚಿಸಿಕೊಳ್ಳುವ ತಂತ್ರವನ್ನು ಡೋನಾಲ್ಡ್ ಟ್ರಂಪ್ ಅನುಸರಿಸಿದ್ದಾರೆ.
ವಿಶೇಷ ವರದಿ:ಚಂದ್ರಮೋಹನ್, ನ್ಯೂಸ್ ಫಸ್ಟ್ (ನ್ಯಾಷನಲ್ ಬ್ಯೂರೋ)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us
 Follow Us
                                    


