/newsfirstlive-kannada/media/post_attachments/wp-content/uploads/2025/04/RCB_TEAM-3.jpg)
2025ರ ಐಪಿಎಲ್ ಸೀಸನ್- 18 ಪುನರಾರಂಭವಾಗುತ್ತಿದ್ದು ಅಭಿಮಾನಿಗಳಲ್ಲಿ ಖುಷಿ ತಂದಿದೆ. ವಿದೇಶಕ್ಕೆ ತೆರಳಿದಂತ ಕೆಲ ಆಟಗಾರರು ಮತ್ತೆ ತಮ್ಮ ತಮ್ಮ ತಂಡಗಳನ್ನು ಸೇರಿಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ಆರ್ಸಿಬಿಗೂ ಗುಡ್ನ್ಯೂಸ್ ಸಿಕ್ಕಿದ್ದು ತಂಡಕ್ಕೆ ವಿದೇಶದ ಸ್ಟಾರ್ ಪೇಸ್ ಬೌಲರ್ ಹಿಂದಿರುಗುತ್ತಿದ್ದಾರೆ.
ಆರ್ಸಿಬಿಯ ಭರವಸೆ ಬೌಲರ್ ಎಂದರೆ ಅದು ಜೋಶ್ ಹ್ಯಾಜಲ್ವುಡ್. ಈ ಸಲದ ಆರ್ಸಿಬಿ ತಂಡದಲ್ಲಿ ಜೋಶ್ ಹ್ಯಾಜಲ್ವುಡ್ ಅವರ ಬೌಲಿಂಗ್ ನಿರ್ಣಾಯಕ ಪಾತ್ರ ವಹಿಸಿತ್ತು. ಹೇಗೆಂದರೆ ಜೋಶ್ ಹ್ಯಾಜಲ್ವುಡ್ ಆಡಿದ 10 ಪಂದ್ಯಗಳಿಂದ 18 ವಿಕೆಟ್ಗಳನ್ನು ಉರುಳಿಸಿ ಪರ್ಪಲ್ ಕ್ಯಾಪ್ ಅನ್ನು ಈಗಾಗಲೇ ಧರಿಸಿದ್ದರು. ಇದೀಗ ಪರ್ಪಲ್ ಕ್ಯಾಪ್ ಕನ್ನಡಿಗ ಗುಜರಾತ್ ತಂಡದ ಬೌಲರ್ ಪ್ರಸಿದ್ಧ್ ಕೃಷ್ಣ ಬಳಿ ಇದೆ. ಸದ್ಯ ಹ್ಯಾಜಲ್ವುಡ್ 3ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಪ್ಲೇ ಆಫ್ ಅಲ್ಲವೇ ಅಲ್ಲ, RCB ಟಾರ್ಗೆಟ್ ‘ಮಿಷನ್ ಟಾಪ್- 2’.. ಇದು ಫೈನಲ್ ಲೆಕ್ಕಾಚಾರ!
ಭಾರತ ಹಾಗೂ ಪಾಕಿಸ್ತಾನದ ನಡುವೆ ಘರ್ಷಣೆಯ ನಂತರ ಐಪಿಎಲ್ ಅನ್ನು ಸ್ಥಗಿತ ಮಾಡಲಾಗಿತ್ತು. ಇದಾದ ಮೇಲೆ ವಿದೇಶಿ ಆಟಗಾರರು ತವರಿಗೆ ಮರಳಿದ್ದರು. ಇದರಲ್ಲಿ ಹ್ಯಾಜಲ್ವುಡ್ ಕೂಡ ಒಬ್ಬರು. ಆಸ್ಟ್ರೇಲಿಯಾಗೆ ಹೋಗಿದ್ದ ಹ್ಯಾಜಲ್ವುಡ್ ಇದೀಗ ಆರ್ಸಿಬಿ ತಂಡದಲ್ಲಿ ಆಡಲು ವಾಪಸ್ ಆಗಮಿಸುತ್ತಿದ್ದಾರೆ ಎಂದು ಹೇಳಲಾಗ್ತಿದೆ.
ಹ್ಯಾಜಲ್ವುಡ್ ಏರ್ಪೋರ್ಟ್ನಲ್ಲಿ ಬರುತ್ತಿರುವ ಫೋಟೋವೊಂದು ವೈರಲ್ ಆಗಿದ್ದು ತಂಡಕ್ಕೆ ಶೀಘ್ರವೇ ಮರಳಲಿದ್ದಾರೆ. ಮೇ 17 ರಂದು ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬಲಿಷ್ಠ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರಿಸಲಿದೆ. ಈ ಮಹತ್ವದ ಪಂದ್ಯಕ್ಕೆ ಜೋಶ್ ಹ್ಯಾಜಲ್ವುಡ್ ಹಾಜರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
Some good news for RCB fans. Can confirm Josh Hazlewood is returning for the remainder of the #IPL2025 season. The exact date of his arrival is yet to be identified.
— Vishesh Roy (@vroy38)
Some good news for RCB fans. Can confirm Josh Hazlewood is returning for the remainder of the #IPL2025 season. The exact date of his arrival is yet to be identified.
— Vishesh Roy (@vroy38) May 15, 2025
">May 15, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ