ಮಗ ಕೊಟ್ಟ ಸರ್​ಪ್ರೈಸ್​ಗೆ ಗಳಗಳನೇ ಕಣ್ಣೀರಿಟ್ಟ ಡ್ರೋನ್​ ಪ್ರತಾಪ್​ ತಾಯಿ.. ಏನದು ಗೊತ್ತಾ..?

author-image
Veena Gangani
Updated On
ಮಗ ಕೊಟ್ಟ ಸರ್​ಪ್ರೈಸ್​ಗೆ ಗಳಗಳನೇ ಕಣ್ಣೀರಿಟ್ಟ ಡ್ರೋನ್​ ಪ್ರತಾಪ್​ ತಾಯಿ.. ಏನದು ಗೊತ್ತಾ..? 
Advertisment
  • ಬಿಗ್​ಬಾಸ್​ ಮೂಲಕ ಫೇಮಸ್​ ಆಗಿದ್ದ ಡ್ರೋನ್ ಪ್ರತಾಪ್
  • ಬಿಗ್​ಬಾಸ್​ ಸೀಸನ್ 10ರ ರನ್ನರ್​ ಅಪ್​ ಆಗಿದ್ದ ಡ್ರೋನ್
  • ಡ್ರೋನ್​ ಪ್ರತಾಪ್​ ಹಳ್ಳಿ ಮನೆಗೆ ಹೊಸ ಅತಿಥಿ ಆಗಮನ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 10ರ ರನ್ನರ್​ ಅಪ್ ಆಗಿದ್ದ ಡ್ರೋನ್​ ಪ್ರತಾಪ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಈಗ ಡ್ರೋನ್ ಪ್ರತಾಪ್​ ಅವರ ಮನೆಗೆ ಹೊಸ ಅತಿಥಿ ಆಗಮನವಾಗಿದೆ.

ಇದನ್ನೂ ಓದಿ: ಅಲಿಯಾ ಭಟ್​ಗೆ ಲಕ್ಷ ಲಕ್ಷ ವಂಚನೆ, ಬೆಂಗಳೂರಲ್ಲಿ ಆಪ್ತ ಸಹಾಯಕಿ ಅರೆಸ್ಟ್.. ಈಕೆ ವಂಚಿಸಿದ್ದೇ ಸಖತ್ ಇಂಟರೆಸ್ಟಿಂಗ್

publive-image

ಹೌದು, ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 10ರ ಮಾಜಿ ಸ್ಪರ್ಧಿಯಾಗಿದ್ದ ಡ್ರೋನ್​ ಪ್ರತಾಪ್​ ತನ್ನ  ತಂದೆ ತಾಯಿಗೆ ಸರ್​ಪ್ರೈಸ್​ ಒಂದನ್ನು ಕೊಟ್ಟಿದ್ದಾರೆ. ಬಹಳ ದಿನಗಳಿಂದ ತನ್ನ ತಂದೆ ತಾಯಿಗೆ ಏನಾದ್ರೂ ಗಿಫ್ಟ್​ ಕೊಡಬೇಕು ಅಂತ ಅಂದುಕೊಂಡಿದ್ದೆ. ಹಾಗಾಗಿ ಉಟ್ಟ ಬಟ್ಟೆಯಲ್ಲೇ ತಾಯಿ ಸವಿತಾ ಅವರನ್ನು ಊರಿಂದ ಕರೆಸಿದ್ದೇನೆ ಅಂತ ಹೇಳಿ ಸರ್​ಪ್ರೈಸ್​ ಕೊಟ್ಟಿದ್ದಾರೆ.

publive-image

ಇನ್ನೂ, ಡ್ರೋನ್ ಪ್ರತಾಪ್​ ತಮ್ಮ ತಂದೆ ತಾಯಿಗೆ ಉಡುಗೊರೆಯಾಗಿ ಹ್ಯುಂಡೈ ಕ್ರೆಟಾ ಕಾರನ್ನು ನೀಡಿದ್ದಾರೆ. ಇದರ ಬೆಲೆ ಬರೋಬ್ಬರಿ 20 ಲಕ್ಷ ರೂಪಾಯಿಗಳಿಗೂ ಅಧಿಕ ಎನ್ನಲಾಗಿದೆ. ಹೊಸ ಕಾರು ಖರೀದಿ ಮಾಡಿದ ವಿಡಿಯೋವನ್ನು ಡ್ರೋನ್ ಪ್ರತಾಪ್​ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

publive-image

ಆ ವಿಡಿಯೋದಲ್ಲಿ ತಾಯಿ ಸವಿತಾ ಅವರ ಕಣ್ಣಿಗೆ ಪಟ್ಟಿ ಕಟ್ಟಿ ಮುಂದೆ ಕಾರನ್ನು ತಂದು ನಿಲ್ಲಿಸಿದ್ದಾರೆ. ಆಗ ಹೊಸ ಕಾರನ್ನು ನೋಡುತ್ತಿದ್ದಂತೆ ಪ್ರತಾಪ್ ತಾಯಿ ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಒಂದು ಕಾಲದಲ್ಲಿ ಇಡೀ ಕುಟುಂಬದಿಂದ ಪ್ರತಾಪ್ ದೂರವಿದ್ದರು. ಬಿಗ್ ಬಾಸ್‌ ಶೋಗೆ ಬಂದಮೇಲೆ ಫ್ಯಾಮಿಲಿ ಜೊತೆಗೆ ಒಂದಾಗಿದ್ದಾರೆ.

ಬಹಳ ವರ್ಷಗಳ ನಂತರ ಮಗನನ್ನು ನೋಡಲು ತಂದೆ ಮರಿಮಾದಯ್ಯ ಆಗಮಿಸಿದ್ದರು. ಆಗ ತಂದೆಯನ್ನು ನೋಡಿ ಪ್ರತಾಪ್ ಬಿಕ್ಕಿ ಬಿಕ್ಕಿ ಅತ್ತಿದ್ದರು. ಸದ್ಯ ಈ ವಿಡಿಯೋ ನೋಡಿದ ನೆಟ್ಟಿಗರು ಇದಕ್ಕೆಲ್ಲ ಬಿಗ್ ಬಾಸ್ ಮತ್ತೆ ಸುದೀಪ್ ಸರ್ ಕಾರಣ, ತಾಯಿಗೆ ತಕ್ಕ ಮಗ ಪ್ರತಾಪ್​, ತಂದೆ ತಾಯಿ ಆಸೆ ಈಡೇರಿಸುವ ಮಕ್ಕಳೇ ಧನ್ಯ ಅಂತೆಲ್ಲಾ ಕಾಮೆಂಟ್ಸ್​ ಹಾಕಿದ್ದಾರೆ. ಸದ್ಯ ಡ್ರೋನ್​ ಪ್ರತಾಪ್​ ಭರ್ಜರಿ ಬ್ಯಾಚುಲರ್ಸ್ ಸೀಸನ್​ 2ನಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟು ಕಮಾಲ್ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment