/newsfirstlive-kannada/media/post_attachments/wp-content/uploads/2024/10/jagadish-BBK11.jpg)
ಕಿಚ್ಚ ನಿರೂಪಣೆಯ ಬಿಗ್​ ಬಾಸ್​ ಕನ್ನಡ ಸೀಸನ್​​ 11 ಪ್ರಾರಂಭವಾಗಿ ಇನ್ನೂ ಒಂದು ವಾರ ಕಳೆದಿಲ್ಲ. ಅಷ್ಟರಲ್ಲೇ ಲಾಯರ್​ ಜಗದೀಶ್​​ ಉಗ್ರ ಪ್ರತಾಪ ತೋರಿಸಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಜಗಳದಿಂದ ಕೆಂಡಾಮಂಡಲರಾದ ಅವರು ಕೊನೆಗೆ ಬಿಗ್​ ಬಾಸ್​ಗೇ ಅವಾಜ್​ ಹಾಕಿದ್ದಾರೆ.
ಕ್ಯಾಮೆರಾ ಮುಂದೆ ಹೋಗಿ ಮಾತನಾಡಿದ ಲಾಯರ್​ ಜಗದೀಶ್​, ‘ಬಿಗ್​ ಬಾಸ್​ ನನಗೆ ಇಲ್ಲಿ ಇರೋಕೆ ಇಷ್ಟವಿಲ್ಲ. ನಾನು ಹೊರ ಹೋಗುತ್ತೇನೆ’ ಎಂದಿದ್ದಾರೆ.
ಇದನ್ನೂ ಓದಿ: BBK11: ನನಗೆ ಇರೋಕೆ ಇಷ್ಟವಿಲ್ಲ, ಬಿಗ್​ ಬಾಸ್​ನಿಂದ ಹೊರ ಹೋಗುತ್ತೇನೆಂದ ಸ್ಪರ್ಧಿ!
ಬಿಗ್​ ಬಾಸ್​​ಗೂ ಅವಾಜ್​ ಹಾಕಿದ ಜಗದೀಶ್​, ನಾನು ಈ ಪ್ರೋಗ್ರಾಂ ಹಾಳು ಮಾಡದಿದ್ದರೆ ನನ್ನ ಹೆಸರು ಜಗದೀಶ್​ ಅಲ್ಲ ಎಂದಿದ್ದಾರೆ. ಯಾವನು ಕಾಲು ಇಡಬಾರದು ಇಲ್ಲಿ. ಮನಸ್ಸು ಮಾಡಿದ್ರೆ ನಾನು ಹೆಲಿಕಾಪ್ಟರ್​ ತರಿಸುತ್ತೇನೆ. ಈ ಡೋರನ್ನೇ ಉಡಾಯಿಸಿ ಬಿಡುತ್ತೇನೆ. ನನ್ನನ್ನು ಎದುರಾಕಿಕೊಂಡು ಕರ್ನಾಟಕದಲ್ಲಿ ಬಿಗ್​ ಬಾಸ್​ ಓಡಿಸುತ್ತೀರಾ? ಓಡ್ಸಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದಯವಿಟ್ಟು ನಿಮ್ಮ ರಾಜಕೀಯ ಜಗಳದಿಂದ ನನ್ನ ಹೆಸರು ಹೊರಗಿಡಿ.. ಸಚಿವೆಯ ವಿವಾದಿತ ಹೇಳಿಕೆಗೆ ನಟಿ ಸಮಂತಾ ಬೇಸರ
ಸದ್ಯ ಜಗದೀಶ್​​ ವರ್ತನೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಅದರಲ್ಲೂ ಈ ವಾರದ ಕೊನೆಯಲ್ಲಿ ಎಲಿಮಿನೇಶನ್​ ಪ್ರಕ್ರಿಯೆ ಇರಲಿದ್ದು, ಜಗದೀಶ್​​ ಉಳಿಯುತ್ತಾರಾ? ಹೊರಹೋಗುತ್ತಾ? ಎಂಬ ಪ್ರಶ್ನೆಯೂ ಅಭಿಮಾನಿಗಳನ್ನು ಕಾಡತೊಡಗಿದೆ. ಇದಲ್ಲದೆ, ಬಿಗ್​ ಬಾಸ್​ಗೆ ಹಾಕಿದ ಅವಾಜ್​ಗೆ ಕಿಚ್ಚ ಸುದೀಪ್​ ಅವರು ಜಗದೀಶ್​ಗೆ ಕ್ಲಾಸ್​ ತೆಗೆದುಕೊಳ್ಳಲಿದ್ದಾರಾ? ಎಂಬ ಕುತೂಹಲತೆಯೂ ಅಭಿಮಾನಿಗಳನ್ನು ಕೆರಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ