ರಜತ್‌ಗೆ ಮತ್ತೊಂದು ಬಿಗ್ ಶಾಕ್‌.. ರೌಡಿಶೀಟರ್ ಓಪನ್ ಮಾಡಲು ಪೊಲೀಸರ ತಯಾರಿ; ಕಾರಣವೇನು?

author-image
admin
Updated On
ದರ್ಶನ್​ ಸರ್ ಕೇಸ್​ಗೂ, ರೀಲ್ಸ್‌ಗೂ ಸಂಬಂಧ ಏನು? ಕೊನೆಗೂ ಮಚ್ಚು ಬಿಸಾಕಿದ ಸತ್ಯ ಬಿಚ್ಚಿಟ್ಟ ರಜತ್‌!
Advertisment
  • ಪೊಲೀಸರ ಮೇಲೆ ಆರೋಪ ಮಾಡಬೇಡಿ ಎಂದಿರುವ ವಿನಯ್
  • ರಜತ್ ಅವರು ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ
  • ನಿಮ್ಮ ಮೇಲೆ ಯಾಕೆ ರೌಡಿಶೀಟರ್ ಪಟ್ಟಿ ಓಪನ್ ಮಾಡಬಾರದು?

ಬೆಂಗಳೂರು: ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ರಜತ್ ಕಿಶನ್‌ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ತುಕ್ಕು ಹಿಡಿದ ಮಚ್ಚಿನ ರೀಲ್ಸ್‌ ಕೇಸ್‌ನಲ್ಲಿ ನಿನ್ನೆ ತಾನೆ ರಜತ್ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಇದೀಗ ಆರೋಪಿ ರಜತ್‌ ಅವರ ಕ್ರಿಮಿನಲ್ ಹಿನ್ನೆಲೆಯ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

ರೀಲ್ಸ್‌ ಕೇಸ್‌ನಲ್ಲಿ ಸಾಕ್ಷ್ಯ ನಾಶ ಮಾಡಲು ಯತ್ನಿಸಿದ ಆರೋಪದಲ್ಲಿ ರಜತ್, ವಿನಯ್ ಗೌಡ ಇಬ್ಬರನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದರು. ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದ ಹಿನ್ನೆಲೆಯಲ್ಲಿ ಆರೋಪಿಗಳು ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದರು.

publive-image

ಮಚ್ಚಿನ ಪ್ರಕರಣದಲ್ಲಿ ಬಿಡುಗಡೆಯಾಗುತ್ತಿದ್ದಂತೆ ಆರೋಪಿ ವಿನಯ್‌ ಅವರು ಎಲ್ಲರಲ್ಲೂ ಕ್ಷಮೆಯಾಚಿಸಿದ್ದರು. ಈ ಬಗ್ಗೆ ವಿಡಿಯೋ ಮಾಡಿ ಈ ಪ್ರಕರಣದಲ್ಲಿ ಪೊಲೀಸರು ಅವರ ತನಿಖೆಯನ್ನು ಮಾಡಿದ್ದಾರೆ. ನಾನೊಬ್ಬ ಸೆಲೆಬ್ರಿಟಿ ಎಂದು ಟ್ರೀಟ್ ಮಾಡಲಿಲ್ಲ. ನಮ್ಮನ್ನು ಕಾಮನ್ ಮ್ಯಾನ್ ರೀತಿ ನೋಡಿ ವರ್ತಿಸಿದ್ದಾರೆ. ದಯವಿಟ್ಟು ಪೊಲೀಸರ ಮೇಲೆ ಯಾವುದೇ ಆರೋಪವನ್ನು ಮಾಡಬೇಡಿ ಎಂದು ವಿನಯ್ ಗೌಡ ಅವರು ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಆದರೆ ರಜತ್ ಅವರು ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

publive-image

ರಜತ್‌ಗೆ ಸದ್ಯದಲ್ಲೇ ನೋಟಿಸ್‌!
ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದ ಬಳಿಕ ಆರೋಪಿ ರಜತ್‌ಗೆ ಮತ್ತೊಂದು ತಲೆನೋವು ಎದುರಾಗಿದೆ. ಬಸವೇಶ್ವರ ನಗರ ಪೊಲೀಸರು ರೀಲ್ಸ್ ಮಾಡಿದ ರಜತ್ ವಿರುದ್ಧ ರೌಡಿಶೀಟರ್ ಪಟ್ಟಿ ಓಪನ್‌ ಮಾಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕಾಮನ್ ಮ್ಯಾನ್ ಟ್ರೀಟ್‌.. ಮಚ್ಚು ಮತ್ತು ಪೊಲೀಸರ ತನಿಖೆ ಸತ್ಯ ಬಿಚ್ಚಿಟ್ಟ ವಿನಯ್‌; ಹೇಳಿದ್ದೇನು? 

ಪೊಲೀಸರು ಆರೋಪಿ ರಜತ್ ಬ್ಯಾಗ್ರೌಂಡ್ ಚೆಕ್ ಮಾಡುತ್ತಿದ್ದಾರೆ. ರಜತ್ ಚಲನವಲನ, ಕ್ರಿಮಿನಲ್ ಹಿಸ್ಟ್ರಿ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ನಿಮ್ಮ ಮೇಲೆ ಯಾಕೆ ರೌಡಿಶೀಟರ್ ಪಟ್ಟಿ ಓಪನ್ ಮಾಡಬಾರದು ಎಂಬ ಬಗ್ಗೆ ಸದ್ಯದಲ್ಲೇ ರಜತ್‌ ನೊಟೀಸ್ ನೀಡುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment