ಕಠಿಣದಲ್ಲಿ ಅತೀ ಕಠಿಣ.. ಆರ್​ಸಿಬಿ ನಾಯಕ ರಜತ್​​ಗೆ ಎದುರಾಗಿದೆ 5 ಬಿಗ್​ ಚಾಲೆಂಜ್..!

author-image
Ganesh
Updated On
RCB ಕಪ್ ಗೆಲ್ಲಬೇಕಾ?; ಈ ಪ್ಲೇಯರ್ಸ್​ ರೋಲ್ ಇಂಪಾರ್ಟೆಂಟ್​.. ಇವರು ಏನೇನು ಮಾಡಬೇಕು?
Advertisment
  • ಆರ್​​​ಸಿಬಿ ಸಿಂಹಾಸನವೇರಿದ ರಜತ್​​ ಪಟಿದಾರ್​​
  • ನೂತನ ನಾಯಕನ ಮುಂದೆ ಸಾಲು ಸಾಲು ಸವಾಲು​
  • ಸವಾಲು ಗೆದ್ದರಷ್ಟೇ ಕಪ್​.. ಇಲ್ಲದಿದ್ರೆ ಮತ್ತೆ ಕಪ್​ ಕನಸೇ

ಸರ್​​​ಪ್ರೈಸ್​​ ರೀತಿಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರಿನ ನಾಯಕನ ಗಾದಿಗೇರಿರುವ ರಜತ್​ ಪಾಟಿದಾರ್​ ಮುಂದೆ ಸಾಲು ಸಾಲು ಸವಾಲುಗಳಿವೆ. ಆ ಸವಾಲುಗಳನ್ನ ಮೀರಿ ನಿಂತ್ರೆ ಮಾತ್ರ ಕಪ್​ ನಮ್ದು. ಇಲ್ಲದಿದ್ರೆ, ಈ ಸೀಸನ್​ನಲ್ಲೂ ಕಪ್​ ಕನಸಾಗೇ ಉಳಿಯಲಿದೆ.

ಅಷ್ಟಕ್ಕೂ ಆ ಸವಾಲುಗಳೇನು?

ಐಪಿಎಲ್​ ಸೀಸನ್​ 16ಕ್ಕೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹೊಸ ಹುರುಪಿನೊಂದಿಗೆ ಸಜ್ಜಾಗಿದೆ. ನೂತನ ನಾಯಕನಾಗಿ ನೇಮಕವಾಗಿರೋ ರಜತ್​ ಪಟಿದಾರ್​, ಆರ್​​ಸಿಬಿಯ ಸಿಂಹಾಸನವೇರಿದ್ದಾರೆ. ಅಂದ್ಹಾಗೆ ಐಪಿಎಲ್​ನ ಒನ್​ ಆಫ್​ ದ ಜನಪ್ರಿಯ ಹಾಗೂ ಶ್ರೀಮಂತ ತಂಡದ ನಾಯಕತ್ವ ವಹಿಸಿಕೊಂಡಿರೋ ಪಾಟಿದಾರ್​ ಮುಂದಿನ ಹಾದಿ ಕಠಿಣವಾಗಿದೆ.

ಇದನ್ನೂ ಓದಿ: AB ಡಿವಿಲಿಯರ್ಸ್​​ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದ ಆರ್​​ಸಿಬಿ; ಅಸಲಿಗೆ ನಡೆದಿದ್ದೇನು?

publive-image

ಚಾಲೆಂಜ್​​ ನಂ.1: ಪರ್ಫೆಕ್ಟ್​ ಪ್ಲೇಯಿಂಗ್​-XI ​ಸೆಲೆಕ್ಟ್​​ ಮಾಡ್ಬೇಕು

ಆರ್​​ಸಿಬಿ ನಾಯಕನ ಗಾದಿಗೇರಿರುವ ರಜತ್​ ಪಾಟಿದಾರ್​ ಮುಂದಿರೋ ದೊಡ್ಡ ಟಾಸ್ಕೇ ಟೀಮ್​ ಬಿಲ್ಡ್ ಮಾಡೋದು. ಈ ಹಿಂದಿನ 17 ಸೀಸನ್​ಗಳಲ್ಲೂ ಆರ್​​ಸಿಬಿ ಈ ವಿಚಾರದಲ್ಲಿ ಎಡವಿದೆ. ಪಂದ್ಯದಿಂದ ಪಂದ್ಯಕ್ಕೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಬದಲಾವಣೆಗಳ ಮೇಲೆ ಬದಲಾವಣೆಗಳಾಗಿ ಅಂತಿಮವಾಗಿ ಸೋಲಿನ ದರ್ಶನವಾಗಿದೆ. ಈ ಸೀಸನ್​ಗೂ ಮುನ್ನ ರಜತ್​ ಪಾಟಿದಾರ್​ ಕಂಡಿಷನ್ಸ್​ಗೆ ತಕ್ಕಂತೆ ಪರ್ಫೆಕ್ಟ್​​ ಪ್ಲೇಯಿಂಗ್ ಇಲೆವೆನ್​ನ ಸೆಟ್​ ಮಾಡಿಕೊಳ್ಳಬೇಕಿದೆ.

ಚಾಲೆಂಜ್​​ ನಂ.2: ಸೂಪರ್​ ಸ್ಟಾರ್ಸ್​​ನ ಹ್ಯಾಂಡಲ್​ ಮಾಡಬೇಕು

ಕೊಹ್ಲಿ, ಭುವನೇಶ್ವರ್​ ಕುಮಾರ್​, ಜೋಶ್​ ಹೇಜಲ್​ವುಡ್​, ಕೃನಾಲ್​ ಪಾಂಡ್ಯ, ಲಿವಿಂಗ್​ಸ್ಟೋನ್​, ಫಿಲ್​ ಸಾಲ್ಟ್​​ರಂತ ಸೂಪರ್​ ಸ್ಟಾರ್​​​ ಆಟಗಾರರು ಆರ್​​ಸಿಬಿಯಲ್ಲಿದ್ದಾರೆ. ಇವರಿಗೆಲ್ಲ ಹೋಲಿಸಿದ್ರೆ, ರಜತ್​ ಪಾಟಿದಾರ್​ಗೆ ಅನುಭವ ಕಡಿಮೆ, ಜನಪ್ರಿಯತೆಯೂ ಕಡಿಮೆ. ಈ ಸೂಪರ್​ಸ್ಟಾರ್​ಗಳನ್ನ ಹ್ಯಾಂಡಲ್​ ಮಾಡೋದು ರಜತ್​ ಪಟಿದಾರ್​ಗೆ ದೊಡ್ಡ ಸವಾಲಾಗಲಿದೆ. ಯಾವುದಾದರೂ ವಿಚಾರದಲ್ಲಿ ಯಡವಟ್ಟಾದ್ರೆ, ಕಳೆದ ಸಲ ಮುಂಬೈ ಫ್ರಾಂಚೈಸಿಯಲ್ಲಾದಂತೆ ಬಿರುಕು ಸೃಷ್ಟಿಯಾಗೋ ಅಪಾಯವಿದೆ.

ಇದನ್ನೂ ಓದಿ: Valentine’s Day: ಗಂಡನ ಸಾಲದಿಂದ ಚಿಗುರಿದ ಪ್ರೀತಿ.. ವಸೂಲಿಗೆ ಬರ್ತಿದ್ದ ಏಜೆಂಟ್ ಜೊತೆ ಲೇಡಿ ಪರಾರಿ..!

publive-image

ಚಾಲೆಂಜ್​​ ನಂ.3: ದೊಡ್ಡ ಜವಾಬ್ದಾರಿ, ಹೆಚ್ಚಿನ ಒತ್ತಡ

ಆರ್​​​ಸಿಬಿ ಐಪಿಎಲ್​ ಲೋಕದ ಬಿಗ್​ಬುಲ್​. ಕಪ್​ ಗೆದ್ದಿಲ್ಲ ಅಂದ್ರೂ ಇದ್ರ ಜನಪ್ರಿಯತೆಗೆ ಕಡಿಮೆಯಿಲ್ಲ. ಕರ್ನಾಟಕ, ಇಂಡಿಯಾ ಮಾತ್ರವಲ್ಲ.. ವಿಶ್ವದೆಲ್ಲೆಡೆ ಅಭಿಮಾನಿಗಳ ದಂಡಿದೆ. ಬಿಗ್​ ಫ್ರಾಂಚೈಸಿ ಅಂದಮೇಲೆ ಅಷ್ಟೇ ಒತ್ತಡವೂ ಇದೆ. ಅದ್ರಲ್ಲೂ ಕಪ್​ ಗೆಲುವಿನ ಪ್ರೆಶರ್​ ಸ್ವಲ್ಪ ಹೆಚ್ಚೇ ಇದೆ. ಕಳೆದ 17 ಸೀಸನ್​ಗಳಿಂದ ಆರ್​​ಸಿಬಿ ಒಟ್ಟು 7 ನಾಯಕರನ್ನ ಕಂಡಿದೆ. ಯಾರೊಬ್ಬರೂ ಕೂಡ ಆರ್​​ಸಿಬಿಯನ್ನ ಚಾಂಪಿಯನ್​ ಮಾಡಿಲ್ಲ. ಕಪ್​ ನಮ್ದೇ ಅನ್ನೋ ಫ್ಯಾನ್ಸ್​ ಪ್ರತಿ ಬಾರಿ ನಿರಾಸೆ ಅನುಭವಿಸಿದ್ದಾರೆ. ಅಭಿಮಾನಿಗಳ ಕಪ್​ ಕನಸನ್ನು ನನಸಾಗಿಸೋದೇ ದೊಡ್ಡ ಸವಾಲು.

ಚಾಲೆಂಜ್​​ ನಂ.4: ಮುಂದೆ ನಿಂತು ತಂಡ ಲೀಡ್​ ಮಾಡಬೇಕು!

ನಾಯಕನಾಗಿ ಮಧ್ಯಪ್ರದೇಶ ತಂಡವನ್ನ ರಜತ್​ ಪಾಟಿದಾರ್​ ಯಶಸ್ವಿಯಾಗಿ ಮುನ್ನಡೆಸಿರಬಹುದು. ಬ್ಯಾಟಿಂಗ್​ನಲ್ಲೂ ಮಿಂಚಿರಬಹುದು. ಆರ್​​ಸಿಬಿನೇ ಬೇರೆ. ಇಲ್ಲಿನ ಪ್ರೆಶರ್​​ ಬೇರೆ. ಸ್ಪಿನ್​ ಎದುರು ಆರ್ಭಟಿಸೋ ರಜತ್​ ಪಾಟಿದಾರ್​ ಬ್ಯಾಟಿಂಗ್,​ ಪೇಸ್ ಬೌಲಿಂಗ್​​ ಎದುರು ಅಷ್ಟಕಷ್ಟೇ. ಇದೀಗ ಕ್ಯಾಪ್ಟನ್​ ಪಟ್ಟವೇರಿರುವ ಪಾಟಿದಾರ್​​ ಬ್ಯಾಟ್​ ಹಿಡಿದು ಪರ್ಫಾಮ್​ ಮಾಡಿ captain leading from the front ಅಂತಾರಲ್ಲ ಆ ಮಾತಿನಂತೆ ಮುಂದೆ ನಿಂತು ತಂಡವನ್ನ ಲೀಡ್​ ಮಾಡಬೇಕಿದೆ.

ಇದನ್ನೂ ಓದಿ: IPLನ ಮೊದಲ ಪಂದ್ಯ RCB ವಿರುದ್ಧ ಅಖಾಡಕ್ಕೆ ಇಳಿಯೋ ಟೀಮ್ ಯಾವುದು.. ಉದ್ಘಾಟನೆ ಪಂದ್ಯ ನಡೆಯುವುದೆಲ್ಲಿ?

publive-image

ಚಾಲೆಂಜ್​​ ನಂ.5: ಚಿನ್ನಸ್ವಾಮಿ ಚಾಲೆಂಜ್​​ ಗೆಲ್ಲಬೇಕಿದೆ

ಆರ್​​ಸಿಬಿ ತಂಡಕ್ಕಿರೋ ದೊಡ್ಡ ಸವಾಲೇ ಹೋಮ್​ ಗ್ರೌಂಡ್​ ಚಿನ್ನಸ್ವಾಮಿ ಸ್ಟೇಡಿಯಂ. ತವರಿನಲ್ಲಿ ಆಡೋ 7 ಪಂದ್ಯಗಳನ್ನ ಗೆದ್ರೆ, ಪ್ಲೇ ಆಫ್​ ಹಾದಿ ಸುಗಮವಾಗಲಿದೆ. 7 ಪಂದ್ಯ ಗೆಲ್ಲಲು ಹರಸಾಹಸ ಮಾಡಬೇಕಿದೆ. ಚಿನ್ನಸ್ವಾಮಿ ಮೈದಾನ ಬ್ಯಾಟ್ಸ್​ಮನ್​ಗಳ ಪಾಲಿಗೆ ಸ್ವರ್ಗ. ಚಿಕ್ಕ ಬೌಂಡರಿಗಳು ಇರೋ ಗ್ರೌಂಡ್​ ಪಿಚ್​ಗಳು ಬ್ಯಾಟಿಂಗ್​ ಟ್ರ್ಯಾಕ್​ಗಳು. ಇಲ್ಲಿ ಬ್ಯಾಟ್ಸ್​ಮನ್​ಗಳನ್ನ ಕಟ್ಟಿ ಹಾಕೋದು ನಿಜಕ್ಕೂ ಟಫ್​ ಚಾಲೆಂಜ್​. ಬೌಲರ್ಸ್​ ಪಿಕ್​ ಮಾಡೋದು, ಗೇಮ್​ಪ್ಲಾನ್​ ರೂಪಿಸೋದು ಈ ವಿಚಾರದಲ್ಲಿ ಪಾಟಿದಾರ್​ ಸರಿಯಾದ ಪ್ಲಾನ್​ ಮಾಡಬೇಕು.

ಇವಿಷ್ಟೇ ಅಲ್ಲ, ಇನ್ನೂ ಹಲವು ಸವಾಲುಗಳು ಐಪಿಎಲ್​ ಅಖಾಡದಲ್ಲಿ ರಜತ್​ ಪಾಟಿದಾರ್​​ಗೆ ಎದುರಾಗಲಿವೆ. ಆ ಸವಾಲುಗಳನ್ನ ಮೆಟ್ಟಿ ನಿಂತು RCB ರಾಜ ರಜತ್ ಯುದ್ಧ ಗೆಲ್ತಾರಾ? ಚೊಚ್ಚಲ ಕಪ್​ ಗೆಲ್ಲಿಸ್ತಾರಾ? ಕಾದು ನೋಡೋಣ.

ಇದನ್ನೂ ಓದಿ: ‘ಪ್ರೀತಿ ಅಂದರೆ..’ ಪ್ರೇಮಿಗಳಿಗಾಗಿ ಸ್ಪೆಷಲ್ಲಾಗಿ ಕವಿತೆ ಬರೆದ ಸಿಂಗಾರ ಸಿರಿಯೇ ಖ್ಯಾತಿಯ ಪ್ರಮೋದ್ ಮರವಂತೆ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment