/newsfirstlive-kannada/media/post_attachments/wp-content/uploads/2025/04/RCB-RAJAT.jpg)
ಸತತ ಎರಡು ಪಂದ್ಯಗಳ ಗೆಲುವಿನೊಂದಿಗೆ ಆತ್ಮವಿಶ್ವಾಸದಿಂದ ಬೀಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ, ಹೋಮ್ ಗ್ರೌಂಡ್ ಎಂ.ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ಯುದ್ಧಕ್ಕೆ ಸಜ್ಜಾಗಿದೆ. ಟೂರ್ನಿಯಲ್ಲಿ ಇದೇ ಮೊದಲ ಬಾರಿ ತವರಿನಲ್ಲಿ ಆಡುತ್ತಿರುವ ಆರ್ಸಿಬಿ, ಲೋಕಲ್ ಫ್ಯಾನ್ಸ್ಗೆ ಕಿಕ್ ನೀಡಲು ತುದಿಗಾಲಲ್ಲಿ ನಿಂತಿದೆ. ಅಷ್ಟೇ ಅಲ್ಲ. ತವರಿನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಗೆದ್ದು ಹ್ಯಾಟ್ರಿಕ್ ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿದೆ.
ಕೊಲ್ಕತ್ತಾ, ಚೆನ್ನೈ ಚಕ್ರವ್ಯೂಹವನ್ನ ಯಶಸ್ವಿಯಾಗಿ ಭೇದಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಇದೀಗ ತವರಿನಲ್ಲಿ ಅಗ್ನಿಪರೀಕ್ಷೆಗೆ ಸಿದ್ಧವಾಗಿದೆ. ಚಿನ್ನಸ್ವಾಮಿಯಲ್ಲಿ 50-50 ಸಾಧನೆ ಮಾಡಿರುವ ಆರ್ಸಿಬಿ, ಗುಜರಾತ್ ಟೈಟನ್ಸ್ ವಿರುದ್ಧ ಭರ್ಜರಿ ಗೆಲುವಿನ ಲೆಕ್ಕಾಚಾರದಲ್ಲಿದೆ. ಟೂರ್ನಿಯಲ್ಲಿ ಬೆಂಗಳೂರು ತಂಡ ಒಂದೇ ಒಂದು ಪಂದ್ಯ ಸೋತಿಲ್ಲ. ಗುಜರಾತ್ ಮೊದಲ ಪಂದ್ಯ ಸೋತು 2ನೇ ಪಂದ್ಯದಲ್ಲಿ ಬಲಿಷ್ಟ ಮುಂಬೈ ಮಣಿಸಿದೆ. ಉಭಯ ತಂಡಗಳೂ ಗೆಲುವಿನ ಓಟ ಮುಂದುವರೆಸೋ ಲೆಕ್ಕಾಚಾರದಲ್ಲಿವೆ.
ಆರ್ಸಿಬಿಗೆ ಬೇಕು ಭರ್ಜರಿ ಸ್ಟಾರ್ಟ್
ಕೊಲ್ಕತ್ತಾ ವಿರುದ್ಧ 95 ರನ್, ಸಿಎಸ್ಕೆ ವಿರುದ್ಧ 45 ರನ್ ಜೊತೆಯಾಟದ ಕಾಣಿಕೆ ನೀಡಿರುವ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್, ಗುಜರಾತ್ ವಿರುದ್ಧವೂ ಉತ್ತಮ ಜೊತೆಯಾಟ ಆಡಬೇಕಿದೆ. ಉಭಯ ಆಟಗಾರರು ಪವರ್ ಪ್ಲೇನಲ್ಲಿ ಸಾಲಿಡ್ ಬ್ಯಾಟಿಂಗ್ ನಡೆಸಿದ್ದಾರೆ. ಇಂದು ಚಿನ್ನಸ್ವಾಮಿಯಲ್ಲೂ ಇಬ್ಬರಿಂದ ಬೆಂಕಿ ಆಟ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಶ್ರೇಯಸ್ ಅಯ್ಯರ್ ಮುಂದೆ ರಿಷಭ್ ಪಂತ್ಗೆ ಮುಖಭಂಗ.. ಪ್ರಭಸಿಮ್ರನ್ ಅರ್ಧಶತಕ, ಲಕ್ನೋಗೆ ಗರ್ವಭಂಗ
ಮುಂದುವರೆಯುತ್ತಾ ಪಾಟಿದಾರ್ ಅಗ್ರೆಸಿವ್ ಬ್ಯಾಟಿಂಗ್?
ಆರ್ಸಿಬಿಯ ಮಿಡಲ್ ಆರ್ಡರ್ ಪಂಟರ್, ಕ್ಯಾಪ್ಟನ್ ರಜತ್ ಪಟಿದಾರ್. ಈಡನ್ ಗಾರ್ಡನ್ಸ್ನಲ್ಲಿ 16 ಎಸೆತಗಳಲ್ಲಿ 34 ರನ್, ಚೆಪಾಕ್ನಲ್ಲಿ 32 ಬಾಲ್ಗಳಲ್ಲಿ 51 ರನ್ ಸಿಡಿಸಿರುವ ಪಟಿದಾರ್, ಟೂರ್ನಿಯಲ್ಲಿ 178ರ ಬ್ಯಾಟಿಂಗ್ ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸುತ್ತಿದ್ದಾರೆ. ಚಿನ್ನಸ್ವಾಮಿಯಲ್ಲಿ ಪಟಿದಾರ್ ಇದೇ ಅಗ್ರೆಸಿವ್ ಬ್ಯಾಟಿಂಗ್ ಮುಂದುವರೆಸಿದ್ರೆ ಗುಜರಾತ್ ಖೇಲ್ ಖತಂ.
ಜಿತೇಶ್, ಲಿವಿಂಗ್ಸ್ಟೋನ್ ಫೈಯರ್ ಮಾಡೋದು ಯಾವಾಗ?
ಆರ್ಸಿಬಿ ಒಳ್ಳೆ ಟ್ರ್ಯಾಕ್ನಲ್ಲೇ ಇದೆ. ಆದ್ರೆ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಮತ್ತು ಬಿಗ್ ಹಿಟ್ಟರ್ ಲಿಯಾಮ್ ಲಿವಿಂಗ್ಸ್ಟೋನ್ ಬ್ಯಾಟ್ನಿಂದ, ನಿರೀಕ್ಷಿತ ರನ್ ಬರ್ತಿಲ್ಲ. ಜಿತೇಶ್, ಲಿವಿಂಗ್ಸ್ಟೋನ್ ಇಬ್ಬರೂ ಇಂದು ಕ್ಲಿಕ್ ಆಗಿದ್ದೇ ಆದ್ರೆ ಆರ್ಸಿಬಿ ಬ್ಯಾಟಿಂಗ್ಗೆ ಮತ್ತಷ್ಟು ಬಲ ಬರಲಿದೆ.
ಕೃನಾಲ್ ಪಾಂಡ್ಯ ಬ್ಯಾಟ್ನಿಂದ ವೈಫಲ್ಯ
ಬೆಂಗಳೂರು ತಂಡ ಬ್ಯಾಟಿಂಗ್ನಲ್ಲೇನೋ ಬಲಿಷ್ಟವಾಗಿ ಕಾಣ್ತಿದೆ. ನಂಬರ್ 9 ಸ್ಲಾಟ್ವರೆಗೂ ಆರ್ಸಿಬಿಗೆ, ಬ್ಯಾಟಿಂಗ್ ಡೆಪ್ತ್ ಇದೆ. ಲೋವರ್ ಡೌನ್ನಲ್ಲಿ ಆಲ್ರೌಂಡರ್ ಕೃನಾಲ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ಬ್ಯಾಟ್ನಿಂದ ಅಲ್ಪ ಸ್ವಲ್ಪ ಕಾಣಿಕೆ ನೀಡಬೇಕಿದೆ. ಇಬ್ಬರೂ ರನ್ ಕಾಣಿಕೆ ನೀಡಿದ್ರೆ ಎದುರಾಳಿಗಳ ವಿರುದ್ಧ 100 ಪರ್ಸೆಂಟ್ ಮೇಲುಗೈ ಸಾಧಿಸಬಹುದು.
ಇದನ್ನೂ ಓದಿ: ಆರ್ಸಿಬಿಯ ಇಬ್ಬರು ಬೌಲರ್ಗಳಿಂದ GTಗೆ ನಡುಕ.. ಇವತ್ತು ಗುಜರಾತ್ ಬ್ಯಾಟರ್ಗಳು ಧ್ವಂಸ ಪಕ್ಕಾ..!
ಬೆಂಗಳೂರಿನಲ್ಲಿ ಆರ್ಸಿಬಿ ಪೇಸರ್ಸ್ಗೆ ಸವಾಲ್?
ಚೆನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿಗೆ ಖಂಡಿತ ಬಿಗ್ ಚಾಲೆಂಜ್ ಎದುರಾಗಲಿದೆ. ಯಾಕಂದ್ರೆ ಚಿನ್ನಸ್ವಾಮಿ ಪಿಚ್, ಬ್ಯಾಟ್ಸ್ಮನ್ಗಳಿಗೆ ಹೇಳಿ ಮಾಡಿಸಿದ ಪಿಚ್. ಹಾಗಾಗಿ ಆರ್ಸಿಬಿಯ ತ್ರಿವಳಿ ವೇಗಿಗಳಾದ ಜೋಷ್ ಹೇಜಲ್ವುಡ್, ಭುವನೇಶ್ವರ್ ಕುಮಾರ್ ಮತ್ತು ಯಶ್ ದಯಾಳ್ಗೆ ಈ ಪಿಚ್ನಲ್ಲಿ ಬೌಲಿಂಗ್ ಮಾಡೋದು ಸವಾಲಾಗಲಿದೆ. ಸ್ಪಿನ್ನರ್ಗಳಾದ ಕೃನಾಲ್ ಮತ್ತು ಸುಯೇಶ್ ಶರ್ಮಾಗೂ ಇಲ್ಲಿ ಬೌಲಿಂಗ್ ಮಾಡೋದು ಅಷ್ಟು ಸುಲಭ ಇಲ್ಲ.
ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಡಿಫರೆಂಟ್ ಗೇಮ್ ಆಡಬೇಕಾ?
ಈಡನ್ ಗಾರ್ಡನ್ಸ್ನಲ್ಲಿ ಸಕ್ಸಸ್ಫುಲ್ ಚೇಸಿಂಗ್, ಚೆನ್ನೈನಲ್ಲಿ 191 ರನ್ಗಳನ್ನ ಡಿಫೆಂಡ್ ಮಾಡಿಕೊಂಡಿರುವ ಆರ್ಸಿಬಿ, ಚಿನ್ನಸ್ವಾಮಿಯಲ್ಲಿ ಡಿಫರೆಂಟ್ ಗೇಮ್ ಅಡಲೇಬೇಕು. ಗೇಮ್ ಪ್ಲಾನ್ ಬದಲಾಗಬೇಕು ಮತ್ತು ಟ್ಯಾಕ್ಟಿಕ್ಸ್ ಕೂಡ ಬದಲಾಗಬೇಕು. ಟಾಸ್ ಗೆದ್ರೆ ಉತ್ತಮ ನಿರ್ಣಯ ಕೈಗೊಳ್ಳಬೇಕು. ನಾಯಕ ಪಾಟಿದಾರ್ಗೆ ಚಿನ್ನಸ್ವಾಮಿ ಕಂಡೀಷನ್ಸ್ ಚೆನ್ನಾಗಿ ಗೊತ್ತಿರೋದ್ರಿಂದ ಗೆಲ್ಲಲು ಪ್ಲಾನ್ ಎ ಜೊತೆಗೆ ಪ್ಲಾನ್ ಬಿ ಮತ್ತು ಪ್ಲಾನ್ ಸಿ ಕೂಡ ರೆಡಿ ಮಾಡಿಕೊಳ್ಳಬೇಕು.
ಒಟ್ನಲ್ಲಿ, ಗೆಲುವಿನ ಟ್ರ್ಯಾಕ್ನಲ್ಲಿ ಸಾಗ್ತಿರುವ ಆರ್ಸಿಬಿಗೆ ಶಕ್ತಿ ತುಂಬಲು, ಇಂದು ಲಾಯಲ್ ಅಭಿಮಾನಿಗಳ ಬಳಗವೇ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸುತ್ತಿದೆ. ಆರ್ಸಿಬಿಗೆ ಶುಭವಾಗಲಿ. ತವರಿನಲ್ಲಿ ಪಟೀದಾರ್ ಪಡೆ ವಿಜಯೋತ್ಸವ ಆಚರಿಸಲಿ. ಅಭಿಮಾನಿಗಳಿಗೆ ಗೆಲುವಿನ ಉಡುಗೊರೆ ನೀಡಲಿ. ಇದೇ ನಮ್ಮೆಲ್ಲರ ಆಶಯ.. ಜೈ ಹೋ ಆರ್ಸಿಬಿ.
ಇದನ್ನೂ ಓದಿ: RCB vs GT: ಬೆಂಗಳೂರಲ್ಲೇ ಪಂದ್ಯ, ಹೆಚ್ಚು ಬಾರಿ ಗೆದ್ದ ತಂಡ ಯಾವುದು? ಕಂಪ್ಲೀಟ್ ಮಾಹಿತಿ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್