/newsfirstlive-kannada/media/post_attachments/wp-content/uploads/2025/03/HARDIK-PANDYA-1.jpg)
ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯವು ನಾಡಿದ್ದ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿದೆ. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ. ಈ ಮಧ್ಯೆ ಟೀಂ ಇಂಡಿಯಾದ ಪ್ಲೇಯಿಂಗ್-11ನಲ್ಲಿ ಮಹತ್ವದ ಬದಲಾವಣೆ ಆಗುತ್ತಾ ಎಂಬ ಚರ್ಚೆ ಮುನ್ನಲೆಗೆ ಬಂದಿದೆ.
ಟೀಂ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಈ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಭಾರತ ತಂಡವು ಪ್ಲೇಯಿಂಗ್-XIರಲ್ಲಿ ಯಾವುದೇ ಬದಲಾವಣೆ ಮಾಡಬಾರದು ಮತ್ತು 4 ಸ್ಪಿನ್ನರ್‌ಗಳನ್ನು ಆಡಿಸುವ ಸೂತ್ರಕ್ಕೆ ಅಂಟಿಕೊಳ್ಳಬೇಕು ಎಂದು ಬಲವಾಗಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಫೈನಲ್​ನಲ್ಲಿ ನಾಲ್ವರು ರಿಯಲ್ ಗೇಮ್ ಚೇಂಜರ್; ಈ ಸ್ಟಾರ್​ ಮಿಂಚಿದ್ರೆ ಟ್ರೋಫಿ ಗ್ಯಾರಂಟಿ..!
/newsfirstlive-kannada/media/post_attachments/wp-content/uploads/2025/03/TEAM-INDIA-8.jpg)
ವರುಣ್ ಚಕ್ರವರ್ತಿ ಮತ್ತು ಕುಲದೀಪ್ ಯಾದವ್ ಇಬ್ಬರನ್ನೂ ಸೇರಿಸಿಕೊಂಡಿರುವುದು ತಂಡದ ಬಲವನ್ನು ಹೆಚ್ಚಿಸಿದೆ. ಅವರಿಬ್ಬರ ಕಾಂಬಿನೇಷನ್​​ ಹಾಳು ಮಾಡಬಾರದು. ಫೈನಲ್ ಪಂದ್ಯದಲ್ಲಿ ನನ್ನ ಪ್ರಕಾರ, ನಾಲ್ವರು ಸ್ಪಿನ್ನರ್​​ ಇದ್ದೇ ಇರುತ್ತಾರೆ ಎನಿಸುತ್ತೆ. ಹಾಗೆಯೇ ಇರಬೇಕು. ಚಕ್ರವರ್ತಿ ಸೇರ್ಪಡೆ, ಕುಲ್‌ದೀಪ್ ಸೇರ್ಪಡೆ ಅವರು ಎಷ್ಟು ಪರಿಣಾಮಕಾರಿ ಅನ್ನೋದು ತಂಡಕ್ಕೆ ಗೊತ್ತಾಗಿದೆ. ಕೆಲವೊಮ್ಮೆ ವಿಕೆಟ್ ಬೀಳದಿದ್ದರೂ ಅವು ಅತ್ಯುತ್ತಮ ಡಾಡ್ ಬಾಲ್​ಗಳಾಗಿವೆ. ನನ್ನ ಪ್ರಕಾರ ತಂಡದಲ್ಲಿ ಯಾವುದೇ ಬದಲಾವಣೆ ಇರಬಾರದು ಎಂದು ಸುನಿಲ್ ಗವಾಸ್ಕರ್​ ಹೇಳಿದ್ದಾರೆ.
ಆಸಿಸ್​ ವಿರುದ್ಧದ ಪ್ಲೇಯಿಂಗ್-11:
ರೋಹಿತ್ ಶರ್ಮಾ (ಕ್ಯಾಪ್ಟನ್), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಸರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಂದ್ರ ಜಡೇಜಾ, ಮೊಹ್ಮದ್ ಶಮಿ, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us