/newsfirstlive-kannada/media/post_attachments/wp-content/uploads/2024/08/DARSHAN-10.jpg)
ಬಳ್ಳಾರಿ ಜೈಲಿಗೆ ನಟ ದರ್ಶನ್ ಅವರ ಎಂಟ್ರಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಜೈಲಿನ ನಿಯಮಾವಳಿಗಳನ್ನು ಗಾಳಿಗೆ ತೂರಿ ಅವರನ್ನು ಜೈಲು ಸಿಬ್ಬಂದಿ ಕರೆದುಕೊಂಡು ಬಂದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ವಿಡಿಯೋದಲ್ಲಿ ಕಂಡುಬಂದಿದ್ದು ಏನು..?
ಅಂದ್ಹಾಗೆ ರಾಜಾತಿಥ್ಯದ ತಪ್ಪಿಗೆ ನಟ ದರ್ಶನ್​ ಬಳ್ಳಾರಿ ಜೈಲಿಗೆ ಶಿಫ್ಟ್​ ಆಗಿದ್ದಾರೆ. ಬಳ್ಳಾರಿಗೆ ಬಂದರೂ ನಟ ದರ್ಶನ್​ ಸ್ಟೈಲ್​ ಮಾತ್ರ ತಗ್ಗಿಲ್ಲ. ನಗು ನಗುತ್ತಲೇ ಜೈಲಿಗೆ ಬಂದ ದಾಸ ಬ್ರಾಂಡೆಡ್​ ಉಡುಪುಗಳನ್ನು ಧರಿಸಿ ​ಆಗಮಿಸಿದ್ದಾರೆ. ನಟ ದರ್ಶನ್​ ಟೀ ಶರ್ಟ್​​, ನೀಲಿ ಜೀನ್ಸ್,​ ಕೈಲ್ಲೊಂದು ಶರ್ಟ್​​, ಕಪ್ಪು ಕೂಲಿಂಗ್​ ಗ್ಲಾಸ್​ ಟೀ ಶರ್ಟ್​ ಮೇಲೆ ಸಿಕ್ಕಿಸಿಕೊಂಡು ಬಳ್ಳಾರಿ ಜೈಲಿಗೆ ಎಂಟ್ರಿ ನೀಡಿದ್ದಾರೆ. ನಗು ನಗುತ್ತಲೇ ಜೈಲಿಗೆ ಬಂದ ದರ್ಶನ್​​ ಜೈಲಿನ ಒಳಕ್ಕೆ ಹೋಗಿದ್ದಾರೆ. ಪೊಲೀಸರಿಗೆ ಹ್ಯಾಂಡ್ ಶೇಕ್ ಕೊಟ್ಟು ಜೈಲಿನ ಬ್ಯಾರಕ್​ಗೆ ಎಂಟ್ರಿ ಕೊಟ್ಟಿದ್ದಾರೆ. ಆದರೀಗ ದರ್ಶನ್​ ಅಷ್ಟು ಸ್ಟೈಲ್​ ಆಗಿ ಜೈಲಿಗೆ ಎಂಟ್ರಿ ನೀಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಅನೇಕರು ಕೊಲೆ ಆರೋಪಿಗೆ ಇಷ್ಟೆಲ್ಲಾ ಫೆಸಿಲಿಟಿ ಯಾರು ಕೊಟ್ರು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ಬಳ್ಳಾರಿ ಜೈಲು ಸೇರಿದ ನಟ ದರ್ಶನ್.. ಜೈಲಿಗೆ ಎಂಟ್ರಿಯಾಗುವ ಫೋಟೋಗಳು ಇಲ್ಲಿವೆ..!
ಕೂಲಿಂಗ್ ಗ್ಲಾಸ್​ಗೆ ಅವಕಾಶ ಕೊಟ್ಟ ಬೆಂಗಾವಲು ಪಡೆಗೆ ಇದೀಗ ಸಂಕಷ್ಟ ಎದುರಾಗಿದೆ. ಬೆಂಗಾವಲು ಪಡೆಗೆ ಬಂಧೀಖಾನೆ ಇಲಾಖೆ ಉತ್ತರ ವಲಯ ಡಿಐಜಿ ನೋಟಿಸ್ ನೀಡಲು ಸಿದ್ಧತೆ ಮಾಡಿದ್ದಾರೆ. ನ್ಯೂಸ್ ಫಸ್ಟ್​​ಗೆ ಇಲಾಖೆ ಉತ್ತರ ವಲಯ ಡಿಐಜಿ ಶೇಷಾ ಮಾಹಿತಿ ನೀಡಿದ್ದು, ಜೈಲಿನಲ್ಲಿ ಕೂಲಿಂಗ್ ಗ್ಲಾಸ್‌ನಂಥ ವಸ್ತುಗಳನ್ನು ಒಯ್ಯುವ ಹಾಗಿಲ್ಲ. ನಿಯಮ ಉಲ್ಲಂಘಿಸಿದ ಬೆಂಗಾವಲು ಪಡೆಗೆ ನೋಟಿಸ್ ನೀಡಲು ಸಿದ್ಧತೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us