ಮೆಗಾ ಹರಾಜಿನಲ್ಲಿ ಟೇಲರ್​ ಮಗ.. ದೊಡ್ಡ ಅದೃಷ್ಟದ ನಿರೀಕ್ಷೆಯಲ್ಲಿ ಯುವ ಪ್ರತಿಭೆ

author-image
Ganesh
Updated On
ಮೆಗಾ ಹರಾಜಿನಲ್ಲಿ ಟೇಲರ್​ ಮಗ.. ದೊಡ್ಡ ಅದೃಷ್ಟದ ನಿರೀಕ್ಷೆಯಲ್ಲಿ ಯುವ ಪ್ರತಿಭೆ
Advertisment
  • ನವೆಂಬರ್ 24 ಮತ್ತು 25 ರಿಂದ ಮೆಗಾ ಹರಾಜು
  • ಮೆಗಾ ಹರಾಜು ಅಖಾಡದಲ್ಲಿ ಯುವ ಪ್ರತಿಭೆಗಳು
  • ಈ ಆಟಗಾರನಿಗೆ ಅದ್ಭುತ ವಿಕೆಟ್ ಕೀಪಿಂಗ್ ಸ್ಕಿಲ್ಸ್

ಐಪಿಎಲ್.. ಎಷ್ಟೋ ಕ್ರಿಕೆಟಿಗರ ಜೀವನ ಬದಲಿಸಿದ ಟೂರ್ನಿ. ಬಡ ಕ್ರಿಕೆಟ್​​​​​ಗಳನ್ನು ಒಂದೇ ರಾತ್ರಿಯಲ್ಲಿ ಕೋಟ್ಯಾಧಿಪತಿಗಳನ್ನಾಗಿ ಮಾಡಿದ ಈ ಟೂರ್ನಿ.. ಇಂಥಹ ಟೂರ್ನಿಯನ್ನಾಡಲು ಯಾರಿಗಿಷ್ಟ ಇರಲ್ಲ ಹೇಳಿ? ಅದಕ್ಕೆ ಈ ಬಾರಿಯೂ ಬಡ ಕ್ರಿಕೆಟಿಗರು ಐಪಿಎಲ್​​ನ ಮೆಗಾ ಹರಾಜಿನಲ್ಲಿ ಅದೃಷ್ಟದ ಪರೀಕ್ಷೆಗೆ ಇಳಿಯುತ್ತಿದ್ದಾರೆ.

ಟೇಲರ್​ ಮಗ ಹಾರ್ವಿಕ್ ದೇಸಾಯಿ
ಹಾರ್ವಿಕ್ ದೇಸಾಯಿ, ದೇಶಿ ಕ್ರಿಕೆಟ್​​ನಲ್ಲಿ ಸೌರಾಷ್ಟ್ರ ತಂಡವನ್ನು ಪ್ರತಿನಿಧಿಸುವ ಈ ಆಟಗಾರ, 2018ರ ಅಂಡರ್-19 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. ಅದ್ಭುತ ವಿಕೆಟ್ ಕೀಪಿಂಗ್ ಸ್ಕಿಲ್ಸ್​ ಹೊಂದಿರುವ ಈ ಯುವ ಆಟಗಾರ, ಕಳೆದ ಸೀಸನ್​​ನಲ್ಲಿ ಮುಂಬೈ ಪ್ರತಿನಿಧಿಸಿದ್ದರು. ಈತನ ತಂದೆ ಮನೀಶ್ ದೇಸಾಯಿ ಓರ್ವ ಟೈಲರ್ ಆಗಿದ್ದಾರೆ. ಬಡ ತನದಲ್ಲೇ ಜೀವನ ಕಳೆಯುತ್ತಿರುವ ದೇಸಾಯಿ, ಈ ಮೆಗಾ ಹರಾಜಿನಲ್ಲಿ ಬಿಗ್ ಅಮೌಂಟ್​​ಗೆ ಸೇಲಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ:ಚಾಂಪಿಯನ್ ಕ್ಯಾಪ್ಟನ್​ಗೆ IPL ಫ್ರಾಂಚೈಸಿ ಸ್ಕೆಚ್.. ಹಳೆ ಆಟಗಾರನ ಖರೀದಿ ಮಾಡುತ್ತಾ?

ಪ್ರತಿಭಾವಂತ ಬಡ ಕ್ರಿಕೆಟಿಗರು ಪ್ರತಿ ಬಾರಿಯಂತೆ ಈ ಮೆಗಾ ಹರಾಜಿನಲ್ಲಿದ್ದಾರೆ. ನವೆಂಬರ್ 24 ಮತ್ತು 25 ರಂದು ದುಬೈನಲ್ಲಿ ಮೆಗಾ ಹರಾಜು ನಡೆಯಲಿದೆ. ಪ್ರತಿಭಾವಂತರ ಬದಕು ಬದಲಾಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment