newsfirstkannada.com

ಬಿಜೆಪಿ ವರಿಷ್ಠರ ಸೂಚನೆಗೂ ಕ್ಯಾರೇ ಎನ್ನದ ಪ್ರೀತಮ್​ ಗೌಡ; ಪ್ರಜ್ವಲ್​​ ರೇವಣ್ಣ ಜೊತೆ ಗುದ್ದಾಟ

Share :

Published April 7, 2024 at 6:08am

    2018ರಲ್ಲಿ ಸಮ್ಮಿಶ್ರ ಸರ್ಕಾರವಿದ್ದಾಗ ಪ್ರೀತಂಗೌಡ ಮನೆ ಮೇಲೆ ದಾಳಿ

    ಭವಾನಿ ರೇವಣ್ಣ, ಪ್ರಜ್ವಲ್​ ಬಗ್ಗೆ ಪ್ರೀತಂಗೌಡ ವೈಯಕ್ತಿಕ ಆರೋಪ

    ಪ್ರೀತಂ ಗೌಡ ಮತ್ತು ದೇವೇಗೌಡ್ರ ಕುಟುಂಬದ ನಡುವೆ ವಾಕ್ಸಮರ

ರಾಜ್ಯದ ಕಮಲ-ದಳ ಮೈತ್ರಿಗೆ 28 ಸ್ಥಾನ ಗೆಲ್ಲುವ ಗುರಿ. ಈ ಗುರಿ ಮುಟ್ಟಲು ಪ್ರತಿ ಕ್ಷೇತ್ರವೂ ಮುಖ್ಯ. ಆದ್ರೆ, ಹಲವು ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್​​ ನಡುವೆ ಸಮನ್ವಯ ಸಾಧಿಸಲು ಸಾಧ್ಯವೇ ಆಗ್ತಿಲ್ಲ. ಅದರಲ್ಲೂ ಹಾಸನ ಕ್ಷೇತ್ರದಲ್ಲಿ ಮಾತಿನ ವಾಕ್ಸಮರ ಇಲ್ಲದಿದ್ರೂ ಮೌನಾಸ್ತ್ರ ಪ್ರಯೋಗ ಆಗ್ತಿದೆ.

ಇದನ್ನೂ ಓದಿ: ನಟ ಚಾಲೆಂಜಿಂಗ್​ ಸ್ಟಾರ್​​ ದರ್ಶನ್​​​ ಕೈಗೆ ಯಶಸ್ವಿ ಸರ್ಜರಿ; ಡಿ ಬಾಸ್​ಗೆ ಏನಾಗಿತ್ತು?

ರಾಜ್ಯದ ನಾಯಕರ ಹೇಳಿದ್ರೂ ಮಾಜಿ ಶಾಸಕ ಪ್ರೀತಂ ಗೌಡ ಆ್ಯಂಡ್​​​ ಟೀಂ ಡೋಂಟ್​​​ಕೇರ್​​​ ಅಂತಿದ್ದು, ಹಾಸನದಲ್ಲಿ ಮೈತ್ರಿ ಹಳಿ ತಪ್ಪುವ ಲಕ್ಷಣ ಕಾಣಿಸ್ತಿದೆ. ಕೆಜಿಎಫ್​​​ ಕ್ಲೈಮ್ಯಾಕ್ಸ್​​ಗಿಂತಲೂ ಹಾಸನ ಸಿಂಹಾಸನ ಕಥೆಗೆ ಕ್ಲೈಮ್ಯಾಕ್ಸ್​​ ಮುಗಿಯುತ್ತಲೇ ಇಲ್ಲ. ಧವಳಗಿರಿಯಲ್ಲಿ ಸಭೆ ನಡೆದ್ರೂ ಅಪೂರ್ಣದಂತೆ ಕಾಣಿಸ್ತಿದೆ. ಮಂಡ್ಯ, ಕೋಲಾರಕ್ಕಿಂತ ಹಾಸನವೇ ದಳಪತಿಗೆ ಟೆನ್ಶನ್​​​ ಹೆಚ್ಚಿಸಿದೆ. ಹಾಸನದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಮುನಿಸು ಶಮನ ಆಗ್ತಾನೇ ಇಲ್ಲ. ಹೀಗಾಗಿ ಹಾಲಿ ಸಂಸದ ಪ್ರಜ್ವಲ್​ ರೇವಣ್ಣಗೆ ಒಳೇಟಿನ ಭಯ ಹೆಚ್ಚಿಸಿದೆ.

ಹಾಸನದಲ್ಲಿ ತಾಳ ತಪ್ಪಿತಾ ಬಿಜೆಪಿ-ದಳ ನಡುವಿನ ಮೈತ್ರಿ?

2018 ಹಾಸನ ಕ್ಷೇತ್ರದಲ್ಲಿ ಗೆದ್ದಿದ್ದ ಪ್ರೀತಂ ಗೌಡ, ಕಮಲ ಅರಳಿಸಿದ್ದರು. ಜಿಲ್ಲೆಯ ಹೃದಯ ಭಾಗ ಗೆದ್ದಿದ್ದಕ್ಕೆ ದಳದಲ್ಲಿ ತಳಮಳ ಹೆಚ್ಚಿಸಿತ್ತು. ಅಲ್ಲಿಂದನೇ ದಳದ ಜೊತೆಗೆ ಕುಸ್ತಿಗೆ ಬಿದ್ದ ಪ್ರೀತಂ ಗೌಡ, ರಾಜೀ ಇಲ್ಲದ ರಾಜಕೀಯ, ಸೇರಿಗೆ ಸವ್ವಾಸೇರು ಅನ್ನುವಂತೆ ಜಿದ್ದಿಗೆ ಬಿದ್ದಿದ್ದರು. ಆ ಜಿದ್ದು ಪ್ರೀತಂ ಗೌಡರನ್ನ ಕಳೆದ ವಿಧಾನಸಭೆ ಎಲೆಕ್ಷನ್​​ನಲ್ಲಿ ಮಕಾಡೆ ಮಲಗಿಸಿತ್ತು. ಈ ಎಲೆಕ್ಷನ್​​ ವೈಯಕ್ತಿಕವಾಗಿ ಪರಿಗಣಿಸಿದ್ದ ಜೆಡಿಎಸ್​​, ಸೇಡು ತೀರಿಸಿಕೊಂಡಿತ್ತು. ಈಗ ಕಾಲಚಕ್ರ ತಿರುಗಿದೆ. ವಿಧಾನಸಭೆ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲು ಪ್ರೀತಂಗೌಡ ಸೈಲೆಂಟ್​​ ವರ್ಕೌಟ್​​ ಮಾಡ್ತಿದ್ದಾರೆ ಅನ್ನೋ ಸುದ್ದಿ ಇದೆ. ಹೀಗಾಗಿ ಎಲೆಕ್ಷನ್​ ಪ್ರಚಾರದಿಂದ ಪ್ರೀತಂ ಗೌಡ ದೂರ ಸರಿದಿದ್ದಾರೆ. ಅಲ್ಲದೇ ಪ್ರೀತಂಗೌಡ ಆಪ್ತ ಸಿಮೆಂಟ್ ಮಂಜು ತಟಸ್ಥರಾಗಿದ್ದಾರೆ.

ಪ್ರಜ್ವಲ್​ ಪರ ಪ್ರಚಾರಕ್ಕೆ ಬರ್ತಿಲ್ಲ ಯಾಕೆ ಪ್ರೀತಂ ಗೌಡ?

ಈ ಕಾರಣಕ್ಕೆ ಹಾಸನದಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಗೊಂದಲ ಮುಂದುವರಿದಿದೆ. ಅಮಿತ್ ಶಾ ಅವರ ಗಮನಕ್ಕೂ ಹಾಸನ ವಿಚಾರದ ದೂರು ತಲುಪಿದೆ ಅಂತ ಗೌಡ್ರೇ ಹೇಳಿದ್ದಾರೆ. ಅಲ್ಲದೆ, ಹಾಸನಕ್ಕೆ ಚುನಾವಣಾ ಉಸ್ತುವಾರಿ ಮೋಹನ್ ದಾಸ್ ಸಹ ಎಂಟ್ರಿ ಕೊಟ್ಟು ಸಮನ್ವಯಕ್ಕೆ ಯತ್ನಿಸಿದ್ದಾರೆ. ಆದ್ರೂ ಹಾಸನದಲ್ಲಿ ಮುಂದುವರಿದ ಮೈತ್ರಿ ಮುಸುಕಿನ ಗುದ್ದಾಟ ಮಾತ್ರ ನಿಂತಿಲ್ಲ. ಒಟ್ಟಾರೆ, ದಳಪತಿಗಳಿಗೆ ಹಾಸನ ಜಿಲ್ಲೆಯ ಬಿಜೆಪಿ ನಾಯಕರು ತಲೆನೋವು ತಂದಿದ್ದಾರೆ. ದಳ – ಕಮಲ ಮಧ್ಯೆ ಸಮನ್ವಯ ಸಭೆ ನಡೆಸಿದರೂ ಪ್ರಯೋಜನವಾಗಿಲ್ಲ. ಪರಿಸ್ಥಿತಿಗೆ ಹೀಗೆ ಮುಂದುವರೆದ್ರೆ, 2019ರ ಲೋಕಸಭೆ ಸ್ಥಿತಿ ಪುನರಾವರ್ತನೆ ಆತಂಕವಂತೂ ಕಾಡದೇ ಇರಲ್ಲ.

  • ಪ್ರೀತಂ ಗೌಡ ಮತ್ತು ದೇವೇಗೌಡ್ರ ಕುಟುಂಬದ ನಡುವೆ ವಾಕ್ಸಮರ
  • ಭವಾನಿ ರೇವಣ್ಣ, ಪ್ರಜ್ವಲ್​ ಬಗ್ಗೆ ಪ್ರೀತಂಗೌಡ ವೈಯಕ್ತಿಕ ಆರೋಪ
  • ವಿಧಾನಸಭೆ ಚುನಾವಣೆಯಲ್ಲಿ ಸ್ವರೂಪ್​ ಗೆಲುವಿನ ಹಿಂದೆ ಪ್ರಜ್ವಲ್​​
  • 2018ರಲ್ಲಿ ಸಮ್ಮಿಶ್ರ ಸರ್ಕಾರವಿದ್ದಾಗ ಪ್ರೀತಂಗೌಡ ಮನೆ ಮೇಲೆ ದಾಳಿ
  • ಆ ವೇಳೆ ಹಲವು ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಗಾಯಗಳಾಗಿತ್ತು
  • ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿದ ಆರೋಪ
  • ರಾಜ್ಯದ ನಾಯಕರ ಹೇಳಿದ್ರೂ ಜಿಲ್ಲಾ ನಾಯಕರು ಡೋಂಟ್​ಕೇರ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ ವರಿಷ್ಠರ ಸೂಚನೆಗೂ ಕ್ಯಾರೇ ಎನ್ನದ ಪ್ರೀತಮ್​ ಗೌಡ; ಪ್ರಜ್ವಲ್​​ ರೇವಣ್ಣ ಜೊತೆ ಗುದ್ದಾಟ

https://newsfirstlive.com/wp-content/uploads/2024/04/praju-vs-pritam.jpg

Load More