ಡಿಕೆಶಿಯನ್ನು KPCC ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಪ್ಲ್ಯಾನ್​​​; ಯಾರು ಕಾಂಗ್ರೆಸ್​​ ಹೊಸ ಸಾರಥಿ?

author-image
Ganesh Nachikethu
Updated On
ಕಾಂಗ್ರೆಸ್​ನಲ್ಲಿ ಸಿಎಂ ಸ್ಥಾನಕ್ಕೆ ಬಿಗ್​ ಫೈಟ್​​; ನಾನು ಆಕಾಂಕ್ಷಿ ಎಂದ ಸತೀಶ್​ ಜಾರಕಿಹೊಳಿ
Advertisment
  • ರಾಜ್ಯ ಕಾಂಗ್ರೆಸ್​ಗೆ ಹೊಸ ಸಾರಥಿ ನೇಮಕಕ್ಕೆ ಒತ್ತಡ!
  • ಕ್ಯಾಪ್ಟನ್ ಡಿಕೆಶಿಯನ್ನು ಕೆಳಗಿಳಿಸಬೇಕು ಎಂಬ ಕೂಗು
  • ಕೆಪಿಸಿಸಿ ಅಧ್ಯಕ್ಷಗಿರಿ ಮೇಲೆ ಕಣ್ಣಿಟ್ಟ ಅಹಿಂದ ಸಚಿವರು

ಬೆಂಗಳೂರು: ಮನೆಯೊಂದು ಮೂರು ಬಾಗಿಲು.. ಆದ್ರೆ, ಕಾಂಗ್ರೆಸ್‌ನಲ್ಲಿ ನಾಲ್ಕೈದು ಬಾಗಿಲುಗಳು ಓಪನ್ ಆದಂತೆ ಕಾಣ್ತಿದೆ. ಪವರ್ ಶೇರಿಂಗ್ ಪ್ರಹಸನ.. ಡಿನ್ನರ್ ಮೀಟಿಂಗ್‌ ರಾದ್ಧಾಂತದ ಮಧ್ಯೆ ಕೆಪಿಸಿಸಿ ಪಟ್ಟದ ಪೈಪೋಟಿ ಜೋರಾಗಿದೆ. ಸಿಎಂ-ಡಿಸಿಎಂ ಕೂಟದ ಮಧ್ಯೆ ಕೈ ಪಟ್ಟದ ಫೈಟ್ ನಡೆಯುತ್ತಿದೆ. ಡಿಕೆಶಿ ಅಲಂಕರಿಸಿರೋ ಹುದ್ದೆಯ ಮೇಲೆ ಸಿಎಂ ಬಣದ ಕಣ್ಣುಬಿದ್ದಿದ್ದು, ಹೊಸ ಸಾರಥಿಯ ನೇಮಕಕ್ಕೆ ಒತ್ತಾಯ ಕೇಳಿಬಂದಿದೆ.

ಡಿ.ಕೆ. ಶಿವಕುಮಾರ್‌, ಕಾಂಗ್ರೆಸ್ ಸಾರಥಿ.. ರಾಜ್ಯ ಸರ್ಕಾರದ ಶಕ್ತಿ.. ಸಿದ್ದರಾಮಯ್ಯ ಬಲಕ್ಕೆ.. ಯುಕ್ತಿ ಸೇರಿಸಿ ಪಕ್ಷವನ್ನ ಅಧಿಕಾರಕ್ಕೆ ತಂದ ಕೈ ಕ್ಯಾಪ್ಟನ್‌. ಆದ್ರೀಗ ರಾಜ್ಯ ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಬಿಸಿಬಿಸಿ ಚರ್ಚೆ ಶುರುವಾಗಿದೆ. ಇದು ಎರಡು ಬಣಗಳ ನಡುವೆ ಫೈಟ್‌ಗೆ ನಾಂದಿ ಹಾಡಿದೆ.

KPCC ಅಧ್ಯಕ್ಷ ಸ್ಥಾನಕ್ಕೆ ಹೊಸ ಸಾರಥಿ ನೇಮಕಕ್ಕೆ ಒತ್ತಾಯ

ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ. ಇಲ್ಲಿ ಪಟ್ಟಕ್ಕೆ ಏರ್ಬೇಕು ಅಂದ್ರೆ ಪೈಪೋಟಿ ಮಾಡ್ಲೇಬೇಕು.. ಸಾಮ್ರಾಜ್ಯ ಕಟ್ಬೇಕು ಅಂದ್ರೆ ಎದುರಾಳಿ ಯಾರೇ ಆಗಿರ್ಲಿ ತುಳಿದು ಮೇಲೆ ಏರಲೇಬೇಕು. ಇದು ಎಲ್ಲಾ ಪಕ್ಷಗಳಲ್ಲೂ ಕಾಮನ್.. ಆದ್ರೀಗ ಹೆಚ್ಚಾಗಿ ಕಾಂಗ್ರೆಸ್‌ನಲ್ಲಿ ಪಟ್ಟದ ಪೈಪೋಟಿ ಬೀದಿಗೆ ಬಿದ್ದಿದೆ. ಡಿನ್ನರ್ ಪಾಲಿಟಿಕ್ಸ್ ಮೂಲಕ ಸಿಎಂ ಕುರ್ಚಿ, ಕೆಪಿಸಿಸಿ ಪಟ್ಟದ ಪ್ರಹಸನ ಎರಡು ಬಣಗಳ ಜಿದ್ದಿಗೆ ಕಾರಣವಾಗಿದೆ. ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸ ಸಾರಥಿ ನೇಮಕ ಮಾಡಲು ಅಹಿಂದ ನಾಯಕರ ಒತ್ತಾಯ ಹೆಚ್ಚಾಗಿದೆ. ಡಿ.ಕೆ. ಶಿವಕುಮಾರ್‌ರನ್ನ ಕೆಪಿಸಿಸಿ ಸಾರಥಿ ಪಟ್ಟದಿಂದ ಕೆಳಗಿಳಿಸಬೇಕೆಂಬ ಕೂಗು ಜೋರಾಗಿದೆ. ಮತ್ತೊಬ್ಬರಿಗೆ ಕೈ ಸಾರಥಿ ಪಟ್ಟ ಕಟ್ಟುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಲು ಅಹಿಂದ ಪಡೆ ಸಜ್ಜಾಗಿದೆ.

ರಾಜ್ಯದಲ್ಲಿ ಸದ್ಯ ಸಿಎಂ ಬದಲಾವಣೆ ಕುರಿತು ತೀವ್ರ ಚರ್ಚೆ

ಸದ್ಯ ಸಿಎಂ ಬದಲಾವಣೆಯ ಕುರಿತು ತೀವ್ರ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಸಾರಥಿ ಬದಲಾವಣೆಯ ಬಗ್ಗೆಯೂ ಚರ್ಚೆ ಶುರುವಾಗಿದೆ. ಇತ್ತೀಚೆಗೆ ಅಹಿಂದ ಸಚಿವರ ಮೀಟಿಂಗ್​ಗೆ ಹೈಕಮಾಂಡ್ ಬ್ರೇಕ್ ಹಾಕಿತ್ತು. ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಅಹಿಂದ ಸಚಿವರು ಕಣ್ಣಿಟ್ಟಿದ್ದಾರೆ ಅಂತ ತಿಳಿದುಬಂದಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೂಲಕ ಪಕ್ಷದಲ್ಲಿ ಹಿಡಿತ ಸಾಧಿಸಬಹುದು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರೋದ್ರಿಂದ ಪಕ್ಷ ಸಂಘಟನೆ ಸುಲಭವಾಗುತ್ತೆ ಅನ್ನೋದು ಸಿದ್ದರಾಮಯ್ಯ ಬಣದ ಸಚಿವರ ಆಲೋಚನೆ. ಇನ್ನೂ ಅಹಿಂದ ಸಚಿವರಿಗೆ ಸ್ವತಃ ಸಿಎಂ ಸಿದ್ದರಾಮಯ್ಯರ ಬೆಂಬಲವಿದೆ ಅನ್ನೋದು ಗಮನಿಸಬೇಕಾದ ಸಂಗತಿ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಸಚಿವ ಸ್ಥಾನವನ್ನೇ ತ್ಯಜಿಸಲು ಸಿದ್ಧರಾಗಿದ್ದೇವೆ ಎಂಬ ಸಂದೇಶವನ್ನೂ ರವಾನಿಸಲು ಸಜ್ಜಾಗಿದ್ದಾರೆ. ಈ ಬಗ್ಗೆ ಹೈಕಮಾಂಡ್​ಗೆ ಮನವಿ ಮಾಡಲು ಅಹಿಂಗ ಸಚಿವರು ತಯಾರಿ ನಡೆಸಿದ್ದಾರೆ ಅಂತ ತಿಳಿದುಬಂದಿದೆ.

ಸುರ್ಜೇವಾಲಾ ನೇತೃತ್ವದಲ್ಲಿ ಕೆಪಿಸಿಸಿ ಸದಸ್ಯರ ಸಭೆ

ಬಣಗಳ ಬಹಿರಂಗ ಕಿತ್ತಾಟದ ಮಧ್ಯೆ ಇಂದು ಕೆಪಿಸಿಸಿ ಸರ್ವ ಸದಸ್ಯರ ಸಭೆ ನಡೆಯಲಿದೆ. ಬಳಿಕ ಸುರ್ಜೇವಾಲಾ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಬಣಬಡಿದಾಟಕ್ಕೆ ಬ್ರೇಕ್ ಹಾಕುವ ಸಾಧ್ಯತೆ ಇದೆ. ಹೀಗಾಗಿ ಇಂದಿನ ಕಾಂಗ್ರೆಸ್ ಸಭೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಇಂದು 1 ಲೀಟರ್​​ ಪೆಟ್ರೋಲ್​​, ಡೀಸೆಲ್​​ ಬೆಲೆ ಎಷ್ಟು ಗೊತ್ತಾ? ವಾಹನ ಸವಾರರು ಓದಲೇಬೇಕಾದ ಸ್ಟೋರಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment