newsfirstkannada.com

ಕೋಲಾರಕ್ಕಾಗಿ ಬಿಜೆಪಿ, ಜೆಡಿಎಸ್​ ಮಧ್ಯೆ ಬಿಗ್​ ಫೈಟ್; ಬಹಿರಂಗ ಅಸಮಾಧಾನ ಹೊರಹಾಕಿದ HDK

Share :

Published March 19, 2024 at 6:12am

    ಕೋಲಾರಕ್ಕಾಗಿ ಅಮಿತ್ ಶಾಗೆ ದಳಪತಿ ಡೆಡ್​ಲೈನ್ ಫಿಕ್ಸ್​

    ಮಾರ್ಚ್​ 23ರ ಬಳಿಕ ಜೆಡಿಎಸ್​ ಅಭ್ಯರ್ಥಿಗಳ ಘೋಷಣೆ

    ಮೋದಿ ಬಂದರೂ ಆಹ್ವಾನ ನೀಡದ್ದಕ್ಕೆ ಜೆಡಿಎಸ್ ಬೇಸರ

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್​​ಗೆ 3 ಕ್ಷೇತ್ರಗಳನ್ನು ಬಿಟ್ಟುಕೊಡುವ ಮಾತನ್ನಾಡಿದ್ದ ಬಿಜೆಪಿ ಹೈಕಮಾಂಡ್​​​ ಈಗ ಯೂಟರ್ನ್ ಹೊಡೀತಿದ್ಯಾ ಅನ್ನೋ ಪ್ರಶ್ನೆ ಮೂಡಿದೆ. ಮಂಡ್ಯ, ಹಾಸನ ಜೊತೆ ಕೋಲಾರದಿಂದ ಸ್ಪರ್ಧಿಸೋದು ಜೆಡಿಎಸ್ ಪ್ಲಾನ್‌ ಆಗಿತ್ತು. ಆದ್ರೆ ಕೋಲಾರದಿಂದ ಬಿಜೆಪಿಯೇ ಸ್ಪರ್ಧಿಸೋ ಬಗ್ಗೆ ಚಿಂತನೆ ನಡೆದಿದೆ. ಇದು ಜೆಡಿಎಸ್​ ಪಾಳಯದಲ್ಲಿ ತಳಮಳ ಮೂಡಿಸಿದ್ದು ಆಕ್ರೋಶವೂ ಭುಗಿಲೆದ್ದಿದೆ.

ಕೋಲಾರ ಮತಕ್ಷೇತ್ರ.. ನಾ ಕೊಡೆ, ನೀ ಬಿಡೆ ಸಮರ..!

ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಕ್ಷೇತ್ರ ಹೊಂದಾಣಿಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಮಂಡ್ಯ, ಹಾಸನ ಕ್ಷೇತ್ರಗಳು ಜೆಡಿಎಸ್​ಗೆ ಸಿಗುವುದು ಬಹುತೇಕ ಖಚಿತವಾಗಿದೆ. 3ನೇ ಕ್ಷೇತ್ರ ಕೋಲಾರಕ್ಕೂ ಜೆಡಿಎಸ್​ ಬೇಡಿಕೆ ಇಟ್ಟಿದೆ.. ಆದ್ರೆ ಕೋಲಾರ ಬದಲು ಚಿಕ್ಕಬಳ್ಳಾಪುರ ಆಯ್ದುಕೊಳ್ಳುವಂತೆ ಕೇಂದ್ರ ಗೃಹಸಚಿವ ಅಮಿತ್ ಶಾ, ಕುಮಾರಸ್ವಾಮಿಗೆ ಆಫರ್ ಇಟ್ಟಿದ್ದಾರೆ.. ಈ ಎಲ್ಲಾ ಗೊಂದಲಗಳ ಹಿನ್ನೆಲೆ ಇವತ್ತು ಜೆಪಿ ಭವನದಲ್ಲಿ ಸಭೆ ನಡೆಸಿದ ದೇವೇಗೌಡರು ಹಾಗೂ ಕುಮಾರಸ್ವಾಮಿ ಜೆಡಿಎಸ್​ ಮುಖಂಡರ ಜೊತೆ ಚರ್ಚೆ ನಡೆಸಿದ್ದಾರೆ.

ಟಿಕೆಟ್ ಕೊಡದಿದ್ರೆ ಜೆಡಿಎಸ್ ಅಭ್ಯರ್ಥಿ ಕಣಕ್ಕೆ!?

ಮೊನ್ನೆ ಅಮಿತ್ ಶಾ ಭೇಟಿಯಾಗಿದ್ದ ಕುಮಾರಸ್ವಾಮಿ ಕೋಲಾರವನ್ನು ಜೆಡಿಎಸ್​ಗೆ ಬಿಟ್ಟುಕೊಡಿ ಅಂತ ಕೇಳಿದ್ದಾರೆ. ಜಿಲ್ಲೆಯಲ್ಲಿ ಜೆಡಿಎಸ್​ನ ಮೂವರು ಶಾಸಕರಿದ್ದಾರೆ, ಕಳೆದ ಬಾರಿ ಇಬ್ಬರು ಅಭ್ಯರ್ಥಿಗಳು ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದಾರೆ. ಮತಗಳಿಕೆ ಪ್ರಮಾಣದಲ್ಲಿ ಜೆಡಿಎಸ್​ 2ನೇ ಸ್ಥಾನದಲ್ಲಿದೆ. ಮೈತ್ರಿ ಟಿಕೆಟ್ ನೀಡದಿದ್ರೆ JDS ಅಭ್ಯರ್ಥಿ ಹಾಕ್ತೇವೆ ಅಂತ ಹೇಳಿದ್ದಾರೆ ಎನ್ನಲಾಗಿದೆ. ಕೋಲಾರ ಕ್ಷೇತ್ರ ನಮಗೇ ಇರಲಿ, ಬಿಜೆಪಿ ಅಭ್ಯರ್ಥಿ ಹಾಕ್ತೀವಿ ಅಂತ ಅಮಿತ್ ಶಾ ಹೇಳಿದ್ದಾರೆ. ನಮ್ಮಲ್ಲಿ 3-4 ಮಂದಿ ಆಕಾಂಕ್ಷಿಗಳಿದ್ದಾರೆ. ನೋಡೋನ ಸಮಯ ಕೊಡಿ ಅಂತ ಅಮಿತ್ ಶಾ ಕೇಳಿದ್ದಾರೆ ಎನ್ನಲಾಗಿದೆ.

ಮೋದಿ ಬಂದ್ರೂ ಆಹ್ವಾನ ನೀಡದ್ದಕ್ಕೆ ಜೆಡಿಎಸ್ ಬೇಸರ!

ಅದೂ ಅಲ್ಲದೇ ಮೈತ್ರಿಯಾದ ಮೇಲೆ ಪ್ರಧಾನಿ ಮೋದಿ ರಾಜ್ಯಕ್ಕೆ 2 ಬಾರಿ ಆಗಮಿಸಿದ್ರೂ ಜೆಡಿಎಸ್​ಗೆ ಆಹ್ವಾನ ನೀಡಿಲ್ಲ, ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಬಗ್ಗೆಯೂ ಜೆಡಿಎಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಗೊಂದಲಗಳ ಬೆನ್ನಲ್ಲೇ ಇವತ್ತು ಜೆಡಿಎಸ್​ ನಾಯಕರು ಮಹತ್ವದ ಸಭೆ ನಡೆಸಿದ್ರು. ಜೆಡಿಎಸ್​ ಸಭೆ ಬಳಿಕ ಮಾತನಾಡಿದ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ 3-4 ಸೀಟು ಕೊಡುವ ಬಗ್ಗೆ ಮೊದಲಿನಿಂದಲೂ ಮಾತುಕತೆ ನಡೆದಿತ್ತು. ಮೈತ್ರಿಯಲ್ಲಿ ಯಾವ ಗೊಂದಲವೂ ಇಲ್ಲ, ಜೆಡಿಎಸ್ 3 ಕ್ಷೇತ್ರಗಳಲ್ಲಿ ಸ್ಪರ್ಧೆಸುತ್ತೆ ಎಂದಿದ್ದಾರೆ. ಇನ್ನು, ಟಿಕೆಟ್​ ಗೊಂದಲ ಹಿನ್ನೆಲೆಯಲ್ಲಿ ಜೆಡಿಎಸ್​ ಟಿಕೆಟ್​ ಘೋಷಣೆಯನ್ನು ಮಾರ್ಚ್​ 23ಕ್ಕೆ ಮುಂದೂಡಿದೆ. ಇಂದು ಹೃದಯದ ಶಸ್ತ್ರಚಿಕಿತ್ಸೆಗಾಗಿ ಹೆಚ್​​ಡಿಕೆ ಚೆನ್ನೈಗೆ ತೆರಳಲಿದ್ದು ವಾಪಸ್ ಬಂದ ಬಳಿಕ ಟಿಕೆಟ್ ಘೋಷಣೆ ಸಾಧ್ಯತೆ ಇದೆ. ಒಟ್ಟಾರೆ ಜೆಡಿಎಸ್, ಬಿಜೆಪಿ ನಡುವೆ ಟಿಕೆಟ್ ಫೈಟ್ ಮೈತ್ರಿಗೆ ಕುತ್ತು ತರುವ ಪ್ರಮೇಯ ಸೃಷ್ಟಿಸುತ್ತಾ ಅನ್ನೋದೇ ಸದ್ಯದ ಕುತೂಹಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋಲಾರಕ್ಕಾಗಿ ಬಿಜೆಪಿ, ಜೆಡಿಎಸ್​ ಮಧ್ಯೆ ಬಿಗ್​ ಫೈಟ್; ಬಹಿರಂಗ ಅಸಮಾಧಾನ ಹೊರಹಾಕಿದ HDK

https://newsfirstlive.com/wp-content/uploads/2024/03/HDK-2.jpg

Load More