ದೇವನಹಳ್ಳಿ ಕೃಷಿ ಭೂಮಿ ಸ್ವಾಧೀನ ಕೈಬಿಟ್ಟ ಸರ್ಕಾರ; ಅನ್ನದಾತರ ಹೋರಾಟಕ್ಕೆ ದೊಡ್ಡ ಗೆಲುವು..!

author-image
Ganesh
Updated On
ದೇವನಹಳ್ಳಿ ಕೃಷಿ ಭೂಮಿ ಸ್ವಾಧೀನ ಕೈಬಿಟ್ಟ ಸರ್ಕಾರ; ಅನ್ನದಾತರ ಹೋರಾಟಕ್ಕೆ ದೊಡ್ಡ ಗೆಲುವು..!
Advertisment
  • ದೇವನಹಳ್ಳಿ ಭೂಸ್ವಾಧೀನ ಕೈಬಿಡಲು ನಿರ್ಧಾರ
  • 1,777 ಎಕರೆ ಭೂಸ್ವಾಧೀನ ಕೈಬಿಡಲು ನಿರ್ಧಾರ
  • ರೈತರು ಸ್ವಯಂಪ್ರೇರಿತ ಮುಂದೆ ಬಂದರೆ ತೆಗೆದುಕೊಳ್ಳುತ್ತೇವೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಕೃಷಿ ಭೂಮಿ ಸ್ವಾಧೀನ ಕೈಬಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೊನೆಗೂ ರೈತರ ಒತ್ತಡಕ್ಕೆ ರಾಜ್ಯ ಸರ್ಕಾರ ಮಣಿದಿದೆ. 1777 ಎಕರೆ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಇದನ್ನೂ ಓದಿ: ಒಂದು ಬ್ಯಾಡ್​ ಲಕ್, ಗೆಲುವು ಮಿಸ್​ -ಕ್ರಿಕೆಟ್ ಅಭಿಮಾನಿಗಳಿಗೆ ನೋವು ತಂದ ಈ ವಿಡಿಯೋ

publive-image

ಭೂಮಿ ಸ್ವಾಧೀನಕ್ಕೆ ರೈತರ ತೀವ್ರ ವಿರೋಧದ ಹಿನ್ನಲೆಯಲ್ಲಿ ಎರಡು-ಮೂರು ಸುತ್ತಿನ ಸಭೆ ನಡೆಸಿದ್ದ ರಾಜ್ಯ ಸರ್ಕಾರ ಕೊನೆಗೂ ರೈತರ ಪರವಾದ ತೀರ್ಮಾನ ಕೈಗೊಂಡಿದೆ. ಭೂಮಿ ಸ್ವಾಧೀನವನ್ನು ಕೈಬಿಡುವ ತೀರ್ಮಾನವನ್ನು ಸಿಎಂ ಸಿದ್ದರಾಮಯ್ಯ ಇಂದು ಪ್ರಕಟಿಸಿದ್ದಾರೆ. ಭೂ ಸ್ವಾಧೀನ ಪ್ರಕ್ರಿಯೆಯನ್ನ ಕೈಬಿಟ್ಟಿದ್ದೇವೆ. ಆದರೆ ರೈತರು ಸ್ವಯಂ ಪ್ರೇರಿತರಾಗಿ ಭೂಮಿಯನ್ನು ಕೊಡಲು ಮುಂದೆ ಬಂದರೆ ಒಪ್ಪಂದದ ಮೇಲೆ ತೆಗೆದುಕೊಳ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಇಂದು ರಾಜ್ಯ ಸರ್ಕಾರದ ತೀರ್ಮಾನ ಪ್ರಕಟಿಸಿದ್ದಾರೆ. ಈ ಮೊದಲು ರಾಜ್ಯ ಸರ್ಕಾರ ಡಿಫೆನ್ಸ್ ಕಾರಿಡಾರ್ ಮತ್ತು ಏರೋಸ್ಪೇಸ್ ಪಾರ್ಕ್ ನಿರ್ಮಾಣಕ್ಕಾಗಿ ರೈತರ 1,777 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಲು ಕೆಐಎಡಿಬಿಯಿಂದ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆಯನ್ನು ಕೆಐಎಡಿಬಿ ಕೈಬಿಡಲಿದೆ.

ಇದನ್ನೂ ಓದಿ: ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು; ಬಾಗಪ್ಪ ಹರಿಜನ ಹಳೇ ಶಿಷ್ಯನ ಬರ್ಬರ ಹತ್ಯೆ, ಫೈರಿಂಗ್..

publive-image

ರಾಜ್ಯ ಸರ್ಕಾರದ ಭೂಮಿ ಸ್ವಾಧೀನವನ್ನು ರೈತರು ಒಪ್ಪಿಕೊಂಡರೆ ಅದನ್ನು ಯಾರು ತಡೆಯೋಕೆ ಆಗುವುದಿಲ್ಲ. ನಮಗೆ ಕೈಗಾರಿಕಾ ವಲಯ ಬೆಳೆಯಬೇಕು. ರೈತರಿಗೆ ಸೂಕ್ತ ಪರಿಹಾರ ಕೊಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಯಾವ ರೈತರು ಜಮೀನು ನೀಡಲು ಮುಂದೆ ಬರುತ್ತಾರೋ ಅವರ ಭೂಮಿಯನ್ನ ಮಾತ್ರ ಪಡೆಯುತ್ತೇವೆ. ರೈತರು ವ್ಯವಸಾಯ ಮಾಡುತ್ತಿರುವ ಕಾರಣ ಈಗ ಭೂಸ್ವಾಧೀನ ಕೈಬಿಟ್ಟಿದ್ದೇವೆ. ರೈತರ ಜಮೀನು ಉಳಿಸಲು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಇದೇ ತೀರ್ಮಾನ ಮುಂದೆ ಎಲ್ಲಾ ಕಡೆಗೂ ಅನ್ವಯವಾಗೋದಿಲ್ಲ ಎನ್ನುವುದನ್ನು ಕೂಡ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ರೈತರು ಸ್ವಯಂಪ್ರೇರಣೆಯಿಂದ ಮುಂದೆ ಬಂದಲ್ಲಿ ಹೆಚ್ಚಿನ ಪರಿಹಾರ ಅಥವಾ ಅಭಿವೃದ್ಧಿ ಮಾಡಿದ ನಿವೇಶನ ಪಡೆಯಬಹುದು. ಒಂದು ವೇಳೆ ರೈತರು, ಭೂಮಿ ನೀಡಲು ಒಪ್ಪದೇ ಇದ್ದರೆ ಅಂಥ ಭೂಮಿಯನ್ನ ಸ್ವಾಧೀನ ಮಾಡಿಕೊಳ್ಳುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: ರಕ್ತ ಹರಿಸಿದ ಚಿಕನ್ ಪೀಸ್.. ಬ್ಯಾಚುಲರ್ ಪಾರ್ಟಿಯಲ್ಲಿ ಇಬ್ಬರು ಸ್ನೇಹಿತರ ಮಧ್ಯೆ ಆಗಿದ್ದೇನು..?

publive-image

ರೈತರ ಭೂಮಿಯನ್ನು ಬಲವಂತವಾಗಿ ಸ್ವಾಧೀನ ಮಾಡಿಕೊಳ್ಳಬೇಕೆ ಬೇಡವೇ ಎಂಬ ಬಗ್ಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಕೊನೆಯ ಹಂತದ ಸಭೆ ನಡೆದಿತ್ತು. ಸಭೆಯಲ್ಲಿ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆ.ಹೆಚ್.ಮುನಿಯಪ್ಪ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಜೊತೆಗೆ ರೈತರ ಪರ ಹೋರಾಟ ನಡೆಸಿದ್ದ ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ, ವರಲಕ್ಷ್ಮಿ, ನಟ ಪ್ರಕಾಶ್ ರಾಜ್, ರೈತ ಸಂಘದ ಬಡಗಲಾಪುರ ನಾಗೇಂದ್ರ ಸೇರಿ ದೇವನಹಳ್ಳಿ ಭಾಗದ ರೈತ ಮುಖಂಡರು ಭಾಗಿಯಾಗಿದ್ದರು.

ಭೂಮಿ ಸ್ವಾಧೀನ ಕೈ ಬಿಡುವ ಬಗ್ಗೆ ಈಗಾಗಲೇ ಕಾನೂನು ತಜ್ಞರ ಸಲಹೆಯನ್ನು ಸಿಎಂ ಸಿದ್ದರಾಮಯ್ಯ ಪಡೆದುಕೊಂಡಿದ್ದರು. ಕಳೆದ ಸಭೆಯಲ್ಲಿ ಭೂಮಿ ಸ್ವಾಧೀನ ಕೈಬಿಡಲು ಕೆಲವೊಂದು ಕಾನೂನು ತೊಡಕುಗಳಿವೆ. ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯುತ್ತೇವೆ, ಜುಲೈ 15 ರಂದು ಅಂತಿಮ ತೀರ್ಮಾನ ಪ್ರಕಟಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಕಾನೂನಿನ ತೊಡಕು ಇದ್ದರೆ ಅದನ್ನು ಬಗೆಹರಿಸಿಕೊಡಲು ನಾನು ಸಿದ್ಧ ಎಂದು ಸುಪ್ರೀಂಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಹೇಳಿದ್ದರು. ನಿವೃತ್ತ ಜಸ್ಟೀಸ್ ಗೋಪಾಲಗೌಡ ಕೂಡ ರೈತರ ಪರವಾಗಿ ಹೋರಾಟದ ಅಖಾಡಕ್ಕಿಳಿದಿದ್ದರು. ಅಂತಿಮವಾಗಿ ಈಗ ರಾಜ್ಯ ಸರ್ಕಾರ ರೈತರ ಹೋರಾಟಗಾರರ ಹೋರಾಟಕ್ಕೆ ಮಣಿದಿದೆ.

ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಮತ್ತೊಂದು ಸೋಲು, ನಾಯಕ ಶುಬ್ಮನ್ ಗಿಲ್ ಏನಂದ್ರು..?

publive-image

ಚನ್ನರಾಯಪಟ್ಟಣ ಹೋಬಳಿಯ ಕೆಲ ರೈತರು ಕೈಗಾರಿಕೆಗಳಿಗೆ ಭೂಮಿಯನ್ನು ನೀಡಲು ಮುಂದೆ ಬಂದಿದ್ದಾರೆ. ಅಂಥವರ ಭೂಮಿಯನ್ನು ಮಾತ್ರ ಈಗ ರಾಜ್ಯ ಸರ್ಕಾರ ನಿರ್ಧರಿಸಿದೆ. ಚನ್ನರಾಯಪಟ್ಟಣ ಹೋಬಳಿಯನ್ನು ಸಂಪೂರ್ಣವಾಗಿ ಹಸಿರು ವಲಯವಾಗಿ ಘೋಷಿಸುತ್ತೇವೆ ಎಂದು ಕೂಡ ಕಳೆದ ಸಭೆಯಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದರು. ಹಸಿರು ವಲಯ ಘೋಷಣೆಯಿಂದ , ಹೋಬಳಿಯ ವ್ಯಾಪ್ತಿಯಲ್ಲಿ ಯಾವುದೇ ನಿವೇಶನ, ಲೇಔಟ್ ನಿರ್ಮಾಣ ಸಾಧ್ಯವಾಗಲ್ಲ. ರೈತರ ಭೂಮಿ, ಕೃಷಿ ಭೂಮಿಯಾಗಿಯೇ ಇರಬೇಕಾಗುತ್ತೆ. ಇದಕ್ಕೆ ಕೆಲವು ರೈತರು ವಿರೋಧ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಡಿಫೆನ್ಸ್ ಕಾರಿಡಾರ್ ಹಾಗೂ ಏರೋ ಸ್ಪೇಸ್ ಪಾರ್ಕ್​ಗೆ ಭೂಮಿ ಸ್ವಾಧೀನ ಕೈಬಿಟ್ಟಿರುವುದು ರೈತರ ಪಾಲಿಗೆ ದೊಡ್ಡ ರೀಲೀಫ್ ಸಿಕ್ಕಂತೆ.

publive-image

ಜೀವನಾಧಾರವಾಗಿರುವ ಕೃಷಿ ಭೂಮಿಯನ್ನು ಕಳೆದುಕೊಂಡಿದ್ದರೆ ಬೀದಿಗೆ ಬೀಳಬೇಕಾಗಿತ್ತು. ಸರ್ಕಾರ ಕೊಟ್ಟ ಪರಿಹಾರದ ಹಣ ಖರ್ಚಾಗಿ ಹೋಗುತ್ತೆ. ಹಾಗಾಗಿ ಭೂಮಿ ಸ್ವಾಧೀನ ಮಾಡಿಕೊಳ್ಳಲು ಬಿಡಲ್ಲ ಎಂದು ರೈತರು ಕಳೆದ 3 ವರ್ಷದಿಂದ ನಿರಂತರ ಹೋರಾಟ ನಡೆಸಿದ್ದರು. ಚನ್ನರಾಯಪಟ್ಟಣದಲ್ಲಿ ಶಾಮಿಯಾನ ಹಾಕಿಕೊಂಡು ನಿತ್ಯ ಧರಣಿ, ಸತ್ಯಾಗ್ರಹ ನಡೆಸುತ್ತಿದ್ದರು. ರಾಷ್ಟ್ರ ಮಟ್ಟದ ರೈತರ ನಾಯಕರು ಕೂಡ ಹೋರಾಟದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: ಗಂಡನನ್ನು ನದಿಗೆ ತಳ್ಳಿದ ಆರೋಪ ಕೇಸ್​ಗೆ ಟ್ವಿಸ್ಟ್.. ಸತ್ಯ ಬಿಚ್ಚಿಟ್ಟ ಪತ್ನಿ-VIDEO

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment