/newsfirstlive-kannada/media/post_attachments/wp-content/uploads/2023/11/RAHUL_DRAVID-1.jpg)
ವಿಶ್ವಕಪ್ ವಿನ್ನಿಂಗ್ ಕೋಚ್ ಕನ್ನಡಿಗ ರಾಹುಲ್ ದ್ರಾವಿಡ್ಗೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಟೀಮ್ ಇಂಡಿಯಾದಲ್ಲಿ ವಾರ್ಷಿಕವಾಗಿ ಸಿಗ್ತಿದ್ದ ವೇತನಕ್ಕಿಂತ ಹೆಚ್ಚು ಹಣವನ್ನ 3 ತಿಂಗಳ ಕೆಲಸಕ್ಕೆ ಕೊಡಲು IPL ತಂಡವೊಂದು ಮುಂದೆ ಬಂದಿದೆ. ಆ ಫ್ರಾಂಚೈಸಿ ಯಾವುದು? ಆಫರ್ ಮಾಡಿರೋ ಅಮೌಂಟ್ ಎಷ್ಟು ಗೊತ್ತಾ?
ಚುಟುಕು ವಿಶ್ವಕಪ್ ಅಂತ್ಯದ ಬೆನ್ನಲ್ಲೇ, ಟೀಮ್ ಇಂಡಿಯಾದ ಜೊತೆಗಿನ ಕೋಚ್ ರಾಹುಲ್ ದ್ರಾವಿಡ್ರ ನಂಟು ಅಂತ್ಯವಾಗಿದೆ. ಆಟಗಾರನಾಗಿ, ನಾಯಕನಾಗಿ ಸಾಧಿಸಲಾಗದ್ದನ್ನ, ಕೊನೆಗೂ ಕೋಚ್ ಆಗಿ ರಾಹುಲ್ ದ್ರಾವಿಡ್ ಸಾಧಿಸಿದ್ದಾರೆ. T20 ವಿಶ್ವಕಪ್ ವಿನ್ನಿಂಗ್ ಕೋಚ್ ಎಂಬ ಹೆಗ್ಗಳಿಕೆ ಪಡೆದು ಟೀಮ್ ಇಂಡಿಯಾ ತೊರೆದಿದ್ದಾರೆ. ಇದ್ರ ಬೆನ್ನಲ್ಲೇ, ದ್ರಾವಿಡ್ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.
ಟೀಮ್ ಇಂಡಿಯಾವನ್ನ ಟಿ20 ಚಾಂಪಿಯನ್ ಮಾಡಿದ ಬೆನ್ನಲ್ಲೇ ಐಪಿಎಲ್ ತಂಡಗಳು ದ್ರಾವಿಡ್ಗೆ ಆಫರ್ ಮೇಲೆ ಆಫರ್ ಮಾಡ್ತಿವೆ. ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ, ಬಿಗ್ ಆಫರ್ ಮಾಡಿರೋ ಸುದ್ದಿ ಇದೀಗ ಹೊರ ಬಿದ್ದಿದೆ.
ಇದನ್ನೂ ಓದಿ: 5 ಕೋಟಿ ಬಹುಮಾನ ಬೇಡ.. 2.5 ಕೋಟಿ ರೂಪಾಯಿ ಮಾತ್ರ ನೀಡಿ.. ದ್ರಾವಿಡ್ ನಿರ್ಧಾರಕ್ಕೆ ಬಿಸಿಸಿಐ ಶಾಕ್..!
ತಂಡದ ಮೆಂಟರ್ ಅಥವಾ ಹೆಡ್ ಕೋಚ್ ಆಗಲು ದ್ರಾವಿಡ್ಗೆ ಬರೋಬ್ಬರಿ 15 ಕೋಟಿಯ ಆಫರ್ ಮಾಡಿದೆ. ಟೀಮ್ ಇಂಡಿಯಾದ ಹೆಡ್ಕೋಚ್ ಆಗಿದ್ದ ವೇಳೆ ದ್ರಾವಿಡ್, ವಾರ್ಷಿಕವಾಗಿ 12 ಕೋಟಿ ವೇತನ ಪಡೀತಾ ಇದ್ದರು. ಅದಕ್ಕಿಂತ ಹೆಚ್ಚು ಹಣವನ್ನ 3 ತಿಂಗಳ ಅವಧಿಗೆ ದ್ರಾವಿಡ್ಗೆ ನೀಡಲು ಕೆಕೆಆರ್ ಫ್ರಾಂಚೈಸಿ ಮುಂದಾಗಿದೆ. ಹಾಲಿ ಮೆಂಟರ್ ಗೌತಮ್ ಗಂಭೀರ್ ಟೀಮ್ ಇಂಡಿಯಾ ಹೆಡ್ ಕೋಚ್ ಹುದ್ದೆಗೇರಿದ್ದಾರೆ. ಹೀಗಾಗಿ ನಿರ್ಗಮಿತ ಕೋಚ್‌ಗೆ ಕೆಕೆಆರ್ ಗಾಳ ಹಾಕಿದೆ.
ತವರಿನ ತಂಡದ ಕೋಚ್ ಹುದ್ದೆಗೇರ್ತಾರಾ?
ಕೆಕೆಆರ್ ಆಫರ್ ಮಧ್ಯೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ಕಡೆಯಿಂದಲೂ ಮಾಜಿ ನಾಯಕನಿಗೆ ಆಫರ್ ಇದೆ. ಆ್ಯಂಡಿ ಫ್ಲವರ್ ಆರ್ಸಿಬಿ ತಂಡದ ಹೆಡ್ಕೋಚ್ ಆದ್ರು ಆರ್ಸಿಬಿ ಹಣೆಬರಹ ಮಾತ್ರ ಬದಲಾಗ್ಲಿಲ್ಲ. ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಕೂಡ ವೈಫಲ್ಯ ಕಂಡಿದ್ದಾರೆ. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಆರ್ಸಿಬಿ ಮೇಜರ್ ಸರ್ಜರಿ ನಡೆಸ್ತಿದೆ ಎಂದು ಹೇಳಲಾಗ್ತಿದೆ. ಹಾಗೊಂದು ವೇಳೆ ಮಾಡಿದ್ದೆ ಆದ್ರೆ ಚಾಂಪಿಯನ್ ಕ್ಯಾಪ್ಟನ್ ದ್ರಾವಿಡ್ಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಆರ್ಸಿಬಿ ಮಾಜಿ ನಾಯಕನಾಗಿರೋ ದ್ರಾವಿಡ್, ತವರಿನ ತಂಡ ಸೇರ್ಪಡೆಗೊಂಡ್ರೆ 2025 ರಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಬಹುದು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ